ಕೊವರ್‌ಕೊಲ್ಲಿ ಇಂದ್ರೇಶ್

ಚಿತ್ರದುರ್ಗ, ಮೇ ೫: ಇಲ್ಲಿನ ಮೊಣಕಾಲ್ಮೂರು ಪಟ್ಟಣದ ತಿಲಕ್‌ನಗರದಲ್ಲಿ ವಾಸವಿದ್ದು ಕಳ್ಳತನದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನನ್ನು ಬರೋಬ್ಬರಿ ೨೭ ವರ್ಷ ಬಳಿಕ ಪೊಲೀಸರು ಬಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ರೇಷ್ಮೆ ಸೀರೆ ನೇಕಾರಿಕೆಗೆ ಹೆಸರುವಾಸಿ ಆಗಿರುವ ಮೊಣಕಾಲ್ಮೂರಿನಲ್ಲಿ, ನೇಕಾರರು ತಮ್ಮ ಮನೆಗಳಲ್ಲಿಯೇ ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ನೇಯ್ದು ಬೆಂಗಳೂರು , ಹುಬ್ಬಳ್ಳಿ , ಮೈಸೂರು ಇತರ ನಗರಗಳ ಹೋಲ್‌ಸೇಲ್ ಬಟ್ಟೆ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.

ಸ್ಥಳೀಯನೇ ಆಗಿದ್ದ ಮನು ಮಾರುತಿ (೫೪) ಎಂಬಾತ ರೇಷ್ಮೆ ಸೀರೆಗಳ ವಹಿವಾಟಿನ ಬಗ್ಗೆ ಚೆನ್ನಾಗಿ ಗೊತ್ತಿದ್ದು ಯಾವ ಮನೆಯಲ್ಲಿ ರೇಷ್ಮೆ ಸೀರೆ ಇದೆ ಎಂದು ಪತ್ತೆ ಮಾಡಿ ಇಟ್ಟುಕೊಂಡಿದ್ದ. ಇವನು ೧೯೯೭ ರ ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ತನ್ನ ಇತರ ಮೂವರು ಸಹಚರರೊಂದಿಗೆ ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ರಾತ್ರಿ ಕಳ್ಳತನ ನಡೆಸಿ ಲಕ್ಷಾಂತರ ಬೆಲೆಯ ರೇಷ್ಮೆ ಸೀರೆಗಳು, ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದ. ಸುಮಾರು ೮ ಕಳ್ಳತನ ಆದರೂ ಈತನ ಬಗ್ಗೆ ಪೊಲೀಸರಿಗೆ ತಿಳಿದಿರಲಿಲ್ಲ. ಆದರೆ ೯ನೇ ಕಳ್ಳತನ ಮಾಡಿದಾಗ ಈತನ ಸುಳಿವು ಪೊಲೀಸರಿಗೆ ಸಿಕ್ಕಿತು. ಯಾವಾಗ ಪೊಲೀಸರು ತನ್ನನ್ನು ಹುಡುಕುತಿದ್ದಾರೆ ಎಂದು ಸೂಕ್ಷö್ಮ ತಿಳಿಯಿತೋ ಆಗ ೨೭ ವರ್ಷದವನಾಗಿದ್ದ ಈತ ಅಂದೇ ಊರು ಬಿಟ್ಟು ನಾಪತ್ತೆ ಆದ.

ಪೊಲೀಸರಿಗೆ ಇವನೇ ಆರೋಪಿ ಎಂದು ಗೊತ್ತಾಗಿದ್ದರೂ ಈತನ ಒಂದು ಭಾವಚಿತ್ರವೂ ಮನೆಯಲ್ಲಿ ಇರಲಿಲ್ಲ. ಪೊಲೀಸರು ಈತನ ಮುಖವನ್ನೇ ನೊಡಿಲ್ಲದಿದ್ದರಿಂದ ಹಿಡಿಯುವುದು ದೂರದ ಕ್ಲಿಷ್ಟವಾಗಿತ್ತು. ಆದರೆ ಈತನ ಜತೆ ಕಳ್ಳತನದಲ್ಲಿ ಭಾಗಿಯಾಗಿದ್ದ ಉಳಿದ ಮೂವರು ಆರೋಪಿಗಳನ್ನು ಹಿಡಿದಿದ್ದರು. ತಲೆ ತಪ್ಪಿಸಿಕೊಂಡಿದ್ದ ಆರೋಪಿ ಮಾರುತಿಯ ಪತ್ತೆ ಕಾರ್ಯವನ್ನು ಮಾತ್ರ ಪೊಲೀಸರು ನಿಲ್ಲಿಸಿರಲಿಲ್ಲ.

೧೯೯೭ ರಲ್ಲಿ ಕಳವು ಮಾಡಿ ಪಟ್ಟಣದಿಂದ ಬಳ್ಳಾರಿ, ಬಳ್ಳಾರಿಯಿಂದ ಬೆಂಗಳೂರು ಸೇರಿದ್ದ ಆರೋಪಿ ಮಾರುತಿ, ಕಳವು ಮಾಡುವುದನ್ನು ನಿಲ್ಲಿಸಿ ಹತ್ತು ವರ್ಷಗಳ ಕಾಲ ಮನೆ ನಿರ್ಮಾಣ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದ. ನಂತರ ಬಡ್ತಿ ಪಡೆದು ೨೦೦೬ ರಿಂದ ಮೇಸ್ತಿç ಆಗಿ ಕೆಲಸ ಮಾಡಲು ಆರಂಭಿಸುತ್ತಾನೆ. ಈ ಸಮಯದಲ್ಲಿ ಈತನಿಗೆ ಮಡಿಕೇರಿ ಮೂಲದ ಮಹಿಳೆಯಿಂದ ಸಂಖ್ಯೆ ತಪ್ಪಾಗಿ ಒಂದು ಮಿಸ್‌ಕಾಲ್ ಬರುತ್ತದೆ. ಈ ಮಿಸ್‌ಕಾಲ್‌ಈತನ ಬದುಕಿನ ಚಿತ್ರಣವನ್ನೆ? ಬದಲಿಸುತ್ತದೆ.!

ವಿಶೇಷ ಚೇತನಳಾಗಿದ್ದ ಮಡಿಕೇರಿಯ ಅಶ್ವಿನಿ ಎಂಬ ಮಹಿಳೆಯೊಂದಿಗೆ ಈತ ಮಾತಿಗಿಳಿದು, ಸ್ನೇಹವು ಪ್ರೇಮಕ್ಕೆ ತಿರುಗಿ ಈತ ಮಡಿಕೇರಿಗೆ ಬಂದು ಅಶ್ವಿನಿಯನ್ನು ದೇವಸ್ಥಾನದಲ್ಲಿ ೨೦೦೬ ರಲ್ಲಿಯೇ ಮದುವೆಯಾಗುತ್ತಾನೆ. ರಾಣಿ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಟ್ಯಾಕ್ಸಿ ಚಾಲಕ ಆಗಿ ಕೆಲಸ ಮಾಡಿದ್ದು ನಂತರ ಆಟೋ ಚಾಲಕನಾಗಿಯೂ ಕೆಲಸ ಮಾಡಿದ್ದಾನೆ. ಎರಡು ವರ್ಷದಿಂದ ಆಟೋ ಚಾಲನೆ

(ಮೊದಲ ಪುಟದಿಂದ) ಬಿಟ್ಟು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ.

ಮೊಣಕಾಲ್ಮೂರಿನ ಇವನ ಸಂಬAಧಿಕರು, ಅಕ್ಕ ಪಕ್ಕದ ಮನೆಯವರು, ಕೊನೆಗೆ ಪೊಲೀಸರೂ ಇವನನ್ನು ಮರೆತೇ ಬಿಟ್ಟಿದ್ದರು. ಆದರೆ ಪ್ರತೀ ಮೂರು ತಿಂಗಳಿಗೊಮ್ಮೆ ಎಲ್‌ಪಿಆರ್

(ಐoಟಿg Peಟಿಜiಟಿg ಖegisಣeಡಿ) ಮಾಹಿತಿಯನ್ನು ಕೋರ್ಟ್ಗೆ ಕೊಡುವ ಪ್ರಕ್ರಿಯೆಯಲ್ಲಿ ಇತ್ತೀಚೆಗೆ ಠಾಣೆಗೆ ಬಂದ ಪೊಲೀಸರು, ಈತನೊಬ್ಬ ತಪ್ಪಿಸಿಕೊಂಡಿದ್ದಾನೆ ಎಂದು ಗುರುತು ಹಾಕಿಕೊಳ್ಳುತ್ತಿದ್ದರು. ಕಳ್ಳತನವಾಗಿದ್ದರೂ ವಸ್ತç ಮತ್ತು ಒಡವೆ ಕಳೆದುಕೊಂಡವರೂ ಇದನ್ನು ಮರೆತಿದ್ದರು. ಮೊಣಕಾಲ್ಮೂರು ವಿನಲ್ಲಿಇರುವ ಈತನ ನಾಲ್ವರೂ ಸಹೋದರರಿಗೂ ಈತನ ಬಗ್ಗೆ ಏನೂ ತಿಳದಿರಲಿಲ್ಲ. ಆತ ೧೫ ವರ್ಷದ ಹಿಂದೆ ಒಮ್ಮೆ ಮಾತ್ರ ರಾತ್ರಿ ಬಂದು ಉಳಿದು ಹೊರಟು ಹೋಗಿದ್ದ ಎಂದು ಮನೆಯವರು ತಿಳಿಸಿದ್ದರು.

ಕ್ರೆöÊಂ ಪಿಎಸ್‌ಐ ಜಿ.ಕೆ. ಈರೇಶ್ ಮತ್ತು ತಂಡ ಈತನನ್ನು ಪತ್ತೆ ಹಚ್ಚಲು ಬಳ್ಳಾರಿ ಮತ್ತು ಅನಂತಪುರದಲ್ಲಿದ್ದ ಈತನ ನೆಂಟರ ಮನೆಗೂ ಭೇಟಿ ನೀಡಿದ್ದರು. ಆಗ ೬ ತಿಂಗಳ ಹಿಂದೆ ಈತನ ಪತ್ನಿ ಅವರಿಗೆ ಒಂದೇ ಬಾರಿ ಕರೆ ಮಾಡಿದ್ದ ಮೊಬೈಲ್ ನಂಬರ್ ಸಿಕ್ಕಿಬಿಟ್ಟಿತು.

ಕೂಡಲೇ ಆ ಮೊಬೈಲ್ ನಂಬರ್‌ಗೆ ಕನೆಕ್ಟ್ ಮಾಡಲಾಗಿದ್ದ ಸೋಷಿಯಲ್ ಮೀಡಿಯಾ ಖಾತೆಗಳನ್ನು ಸೈಬರ್ ಪೊಲೀಸರು ಪರಿಶೀಲಿಸಿದಾಗ ಅಶ್ವಿನಿಯ ಪ್ರೊಫೈಲ್ ಎಂದು ತಿಳಿದುಬಂದಿತು. ಗಂಡ, ಮಕ್ಕಳೊಂದಿಗೆ ತೆಗೆಸಿಕೊಂಡಿದ್ದ ಫೋಟೋ, ಪಿಕ್‌ನಿಕ್‌ಗೆ ಹೋಗಿದ್ದಾಗ ತೆಗೆದ ಫೋಟೋ ಕೂಡ ಪತ್ತೆ ಆಯಿತು. ಆತನ ಸಹೋದರರಿಗೆ ಫೋಟೋ ತೋರಿಸಿದಾಗ ಇವನೇ ಎಂದು ಗುರುತಿಸಿದರು. ತಡ ಮಾಡದ ಪೊಲೀಸರು ಮಡಿಕೇರಿ ರಾಣಿಪೇಟೆಗೆ ಬಂದು ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.