ಮಡಿಕೇರಿ, ಮೇ ೫: ತಾಯಿ, ಮಗ ನಾಪತ್ತೆಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಎಂ. ಸೌಮ್ಯ (೩೫) ಹಾಗೂ ಚಾತ್ವಿಕ್ (೫) ನಾಪತ್ತೆಯಾದವರು. ಸೌಮ್ಯ ಅವರ ಪತಿ ಕಾರ್ಯ ನಿಮಿತ್ತ ಏಪ್ರಿಲ್ ೧೬ರಂದು ಮಂಡ್ಯಕ್ಕೆ ತೆರಳಿದ್ದು, ಪತ್ನಿಗೆ ಕರೆ ಮಾಡಿದ ಸಂದರ್ಭ ಮೊದಲ ಮಗ ಸ್ವೀಕರಿಸಿ ‘ಅಮ್ಮ ತಮ್ಮನನ್ನು ಕರೆದುಕೊಂಡು ಕುಶಾಲನಗರಕ್ಕೆ ಹೋಗಿ ಬರುವುದಾಗಿ ಹೇಳಿ ಮೊಬೈಲನ್ನು ಮನೆಯಲ್ಲಿ ಬಿಟ್ಟು ತೆರಳಿರುವುದಾಗಿ’ ತಿಳಿಸಿದ್ದಾನೆ.
ಸಂಜೆಯಾದರು ಮನೆಗೆ ಬಾರದ ಹಿನ್ನೆಲೆ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರು ಕಂಡು ಬಂದಲ್ಲಿ ೦೮೨೭೬-೨೭೪೭೪೭ ಅಥವಾ ೨೭೪೪೦೦ ಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.