ಮಡಿಕೇರಿ, ಮೇ ೫: ಮರಗೋಡು ವಿನ ಗೌಡ ಈವ್ನಿಂಗ್ ಸ್ಟಾರ್ ವತಿ ಯಿಂದ ಆಯೋಜನೆ ಮಾಡಲಾಗಿ ರುವ ಗೌಡ ಕುಟುಂಬಗಳ ಕ್ರಿಕೆಟ್ ಪಂದ್ಯಾವಳಿಯ ೭ನೇ ದಿನದ ಆಟದಲ್ಲಿ ಮೂವನ ಹಾಗೂ ಉಳುವಾರನ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಮೂವನ ತಂಡ ೬ ವಿಕೆಟ್‌ಗೆ ೬೨ ರನ್ ಗಳಿಸಿದರೆ, ಕೋಟೇರ ತಂಡ ೪ ವಿಕೆಟ್‌ಗೆ ೨೪ ರನ್ ಗಳಿಸಿ ಸೋಲ ನುಭವಿಸಿತು. ಕಾನಡ್ಕ ತಂಡ ೫ ವಿಕೆ ಟ್‌ಗೆ ೪೪ ರನ್‌ಗಳಿಸಿದರೆ, ದೇವಜನ ತಂಡ ೩ ವಿಕೆಟ್‌ಗೆ ೪೬ ರನ್ ಗಳಿಸಿ ಗೆಲುವು ಸಾಧಿಸಿತು. ಮೂಡಗದ್ದೆ ತಂಡ ೮ ವಿಕೆಟ್‌ಗೆ ೪೦ ರನ್ ಗಳಿಸಿದರೆ, ಕೀಜನ ತಂಡ ೪.೨ ಓವರ್‌ನಲ್ಲಿ ೩ ವಿಕೆಟ್‌ಗೆ ೪೨ ರನ್ ಗಳಿಸಿ ಗೆಲುವು ಸಾಧಿಸಿತು. ಕೀಜನ ಯತೀಶ್ ೩ ಸಿಕ್ಸರ್, ೧ ಬೌಂಡರಿ ನೆರವಿನೊಂದಿಗೆ ೮ ಎಸೆತಗಳಲ್ಲಿ ೨೫ ರನ್ ಬಾರಿಸಿದರು. ತೇಲಬೈಲು ತಂಡ ೮ ವಿಕೆಟ್‌ಗೆ ೨೮ ರನ್ ಕಲೆಹಾಕಿದರೆ, ಕೊಂಪುಳಿರ ತಂಡ ೩.೫. ಓವರ್‌ನಲ್ಲಿ ೨ ವಿಕೆಟ್‌ಗೆ ೩೧ ರನ್ ಗಳಿಸಿ ವಿಜಯಿಯಾಯಿತು.
ಪೊಕ್ಕುಳಂಡ್ರ ತಂಡ ೬ ವಿಕೆಟ್‌ಗೆ ೬೭ ರನ್ ಗಳಿಸಿದರೆ, ಯಾಪರೆ ತಂಡ ೫ ವಿಕೆಟ್ ಕಳೆದುಕೊಂಡು ೨೫ ರನ್ ಮಾತ್ರ ಗಳಿಸಿ ಸೋಲುಭವಿಸಿತು. ದಂಬೆಕೋಡಿ ತಂಡ ೪ ವಿಕೆಟ್‌ಗೆ ೨೮ ರನ್ ಗಳಿಸಿದರೆ, ಮೂವನ ತಂಡ ೩.೨ ಓವರ್‌ನಲ್ಲಿ ೩ ವಿಕೆಟ್‌ಗೆ ೩೦ ರನ್ ಗಳಿಸಿ ಗೆಲುವು ಸಾಧಿಸಿತು. ದೇವಜನ ತಂಡ ೨ ವಿಕೆಟ್‌ಗೆ ೭೪ ರನ್ ಗಳಿಸಿದರೆ, ಪಾಂಡನ ತಂಡ ೩ ವಿಕೆಟ್‌ಗೆ ೫೬ ರನ್ ಮಾತ್ರ ಗಳಿಸಿ ಸೋಲ ನುಭವಿಸಿತು. ದೇವಜನ ವಿಖ್ಯಾತ್ ೨ ಸಿಕ್ಸರ್, ೨ ಬೌಂಡರಿ ನೆರವಿನೊಂದಿಗೆ ೨೧ ಎಸೆತಗಳಲ್ಲಿ ೩೬ ರನ್ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಕೀಜನ ತಂಡ ೨ ವಿಕೆಟ್‌ಗೆ ಭರ್ಜರಿ ೧೨೯ ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಕೊಂಪುಳಿರ ತಂಡ ೪ ವಿಕೆಟ್ ಕಳೆದು ಕೊಂಡು ೬೨ ರನ್ ಮಾತ್ರ ಗಳಿಸಿ ೬೭ ರನ್‌ಗಳ ಭಾರೀ ಅಂತರದಿAದ ಸೋಲ ನುಭವಿಸಿತು. ಪೊಕ್ಕುಳಂಡ್ರ ತಂಡ ೩ ವಿಕೆಟ್‌ಗೆ ೨೬ ರನ್ ಗಳಿಸಿದರೆ, ಉಳು ವಾರನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೨೭ ರನ್‌ಗಳಿಸಿ ಗೆಲುವು ಸಾಧಿಸಿತು. ದೇವಜನ ತಂಡ ೫ ವಿಕೆ ಟ್‌ಗೆ ೪೨ ರನ್ ಗಳಿಸಿದರೆ, ಮೂವನ ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಇನ್ನೊಂದು ಪಂದ್ಯದಲ್ಲಿ ಕೀಜನ ತಂಡ ೯ ವಿಕೆಟ್ ಕಳೆದುಕೊಂಡು ಕೇವಲ ೧೩ ರನ್‌ಗಳಿಸಿತು. ಉತ್ತರವಾಗಿ ಆಡಿದ ಉಳುವಾರನ ತಂಡ ೧.೩ ಓವರ್‌ನಲ್ಲಿ ೧ ವಿಕೆಟ್ ನಷ್ಟದಲ್ಲಿ ೧೫ ರನ್ ಗಳಿಸಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.