ಮಡಿಕೇರಿ, ಮೇ ೫: ಮಡಿಕೇರಿ ೬೬/೧೧ಕೆ.ವಿ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಎಫ್೨ ಓಂಕಾರೇಶ್ವರ ಫೀಡರ್‌ನಲ್ಲಿ ತಾ.೬ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕನ್ನಂಡಬಾಣೆ, ಗೌಡಸಮಾಜ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ರಸ್ತೆ, ಗಣಪತಿ ಬೀದಿ, ಓಂಕಾರೇಶ್ವರ ದೇವಸ್ಥಾನ, ಓಂಕಾರೇಶ್ವರ ರಸ್ತೆ, ಬ್ರಾಹ್ಮಿನ್ಸ್ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.