ವೀರಾಜಪೇಟೆ, ಮೇ ೫: ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಯಮ್ಮ ದೇಗುಲದ ವಾರ್ಷಿಕ ಕರಗ ಮಹೋತ್ಸವವು ತಾ.೬ ರಿಂದ (ಇಂದಿನಿAದ) ಆರಂಭವಾಗಲಿದೆ. ವೀರಾಜಪೇಟೆ ನಗರದ ಶಕ್ತಿ ದೇವತೆ ರಾಜ ಬೀದಿಯಾಗಿರುವ ತೆಲುಗರ ಬೀದಿಯಲ್ಲಿ ಸ್ಥಿತವಾಗಿರುವ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ತಾ.೬ ರಿಂದ ಆರಂಭವಾಗಿ ೧೦ ರಂದು ರಾತ್ರಿ ಕೊನೆಯಾಗಲಿದೆ. ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಉತ್ಸವದ ಆರಂಭದAದು ದೇವಿಯ ಕರಗ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮನ, ರಾತ್ರಿ ದೇವಾಲಯದಲ್ಲಿ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ತಾ.೭ ರಂದು ರಾತ್ರಿ ೭ ರ ವೇಳೆಗೆ ತಂಬಿಟ್ಟು ಆರತಿ ಸೇವೆ ಮತ್ತು ವಿಶೇಷ ಪೂಜೆ ಪ್ರಸಾದ ವಿನಿಯೋಗ ತಾ. ೮ ರಂದು ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಅಲಂಕಾರ ಸೇವೆ, ಹರಕೆ ಸೇವೆಗಳು ಮತ್ತು ಮಾಹಾಪೂಜೆ, ಮಹಾ ಮಂಗಳಾರತಿ ನಡೆಯಲಿದ್ದು ಬಳಿಕ ವಿಶೇಷ ಮಹಾ ಪ್ರಸಾದ ಜರುಗಲಿದೆ.

ತಾ. ೯ ರಂದು ರಾತ್ರಿ ದೇವಿಗೆ ಅಲಂಕಾರ ಪೂಜೆ ಮತ್ತು ಅನ್ನ ಸಂತರ್ಪಣೆ ಜರುಗಲಿದೆ. ತಾ. ೧೦ ರಂದು ಸಂಜೆ ಕರಗ ವಿಸರ್ಜನೆ ನಗರದ ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ.ರಸ್ತೆ, ಖಾಸಗಿ ಬಸ್ಸು ನಿಲ್ದಾಣ ಜಂಕ್ಷನ್‌ವರೆಗೆ ಸಂಚರಿಸಿ ದೇಗುಲಕ್ಕೆ ಹಿಂದಿರುಗಿ ದೇವಿಗೆ ಮಹಾಪೂಜೆ ಜರುಗಲಿದೆ. ನಂತರ ಪ್ರಸಾದ ವಿನಿಯೋಗ ನಡೆಯುವುದರೊಂದಿಗೆ ಕರಗ ಮಹೋತ್ಸವಕ್ಕೆ ತೆರೆ ಕಾಣಲಿದೆ ಎಂದು ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ಟ್ರಸ್ಟ್ನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ತಿಳಿಸಿದ್ದಾರೆ.