ಮಡಿಕೇರಿ, ಮೇ ೨: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ಸಮುದಾಯ ವೈದ್ಯಶಾಸ್ತç ವಿಭಾಗದ ವತಿಯಿಂದ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದ ವಿವಿಧ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಿಬ್ಬಂದಿಗಳಿಗೆ ಎರಡು ದಿನಗಳ ತರಬೇತಿಯನ್ನು, ಜಿಮ್ಸ್ ಕಲುಬುರ್ಗಿ ಯುನಿಸೆಫ್ ಹಾಗೂ ಎನ್‌ಹೆಚ್ ಎಮ್‌ವರ ಸಹಯೋಗದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೀಜನಲ್ ಡೈರೆಕ್ಟರ್ (ನಿವೃತ್ತ) ಡಾ. ರವಿಕುಮಾರ್, ಸಮುದಾಯ ವೈದ್ಯಶಾಸ್ತç ವಿಭಾಗ ಮುಖ್ಯಸ್ಥರು ಹಾಗೂ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ರಾಮಚಂದ್ರ ಕಾಮತ್ ಉದ್ಘಾಟಿಸಿದರು.
ಈ ತರಬೇತಿಯಲ್ಲಿ ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ಡಾ. ರವಿಕುಮಾರ್ ಅವರು ತಿಳಿಸಿಕೊಟ್ಟರು. ದುಷ್ಪರಿಣಾಮಗಳನ್ನು ತಡೆಗಟ್ಟುವ ಬಗ್ಗೆ ಡಾ. ರಾಮಚಂದ್ರ ಕಾಮತ್ ಅವರು ಮಾಹಿತಿ ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳ ಸುಮಾರು ೩೦ ಸಿಬ್ಬಂದಿಗಳು ಹಾಜರಿದ್ದು ತರಬೇತಿಯ ಸದುಪ ಯೋಗವನ್ನು ಪಡೆದುಕೊಂಡರು.