ಮಡಿಕೇರಿ, ಮೇ ೨: ಸುಂಟಿಕೊಪ್ಪದ ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ಅರಬಿಕ್ ಕಾಲೇಜ್‌ನ ದಶಮಾನೋತ್ಸವ ಹಾಗೂ ೨ನೇ ಪದವಿ ಪ್ರದಾನ ಸಮಾರಂಭ ಕಾಲೇಜು ಆವರಣದಲ್ಲಿ ವಿಜೃಂಭಣೆಯಿAದ ನಡೆಯಿತು.
ಮಾಜಿ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಪಾಣಕ್ಕಾಡಿನ ನೌಫಲ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ಅರಬಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಧಾರ್ಮಿಕ ಲೌಕಿಕ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಉರ್ದು, ಅರಬಿಕ್ ಮತ್ತು ಮಲಯಾಳಂ ಪಂಚ ಭಾಷಾ ಪರಿಜ್ಞಾನವನ್ನು ಹೊಂದುತ್ತಿರುವುದು ಶ್ಲಾಘನೀಯ ಎಂದರು.
ಉಲಮಾಗಳು ಜನಸೇವಕರಾಗಿರುವುದರಿಂದ ಎಲ್ಲಾ ಭಾಷೆಗಳಲ್ಲಿ ದೇಶ ವಿದೇಶಗಳಲ್ಲಿ ಪ್ರವಾದಿ (ಸ್ವ) ರ ಶ್ರೇಷ್ಠ ಸಂದೇಶಗಳನ್ನು ಸಾರಲು ಮತ್ತು ಜನಸೇವೆ ಮಾಡಲು ಅನುಕೂಲವಾಗುತ್ತದೆ. ಈ ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣ, ಆಹಾರ, ವಸತಿ ಇನ್ನಿತರ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯಿAದ ಆರು ವರ್ಷಗಳ ಶಿಕ್ಷಣವನ್ನು ಪೂರ್ಣಗೊಳಿಸಿದ ೧೫ಯುವ ವಿದ್ವಾಂಸರುಗಳಿಗೆ ಜಿಲ್ಲಾ ನಾಯಿಬ್ ಖಾಝಿಗಳು ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿರುವ ಉಸ್ತಾದ್ ಎಂ.ಎA. ಅಬ್ದುಲ್ಲಾ ಮುಸ್ಲಿಯರ್ ‘ಶರಫಿ' ಪದವಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸ್ಥಳವನ್ನು ದಾನವಾಗಿ ನೀಡಿದ ಕೆ.ಎಂ. ಇಬ್ರಾಹಿಂ ಮಾಸ್ಟರ್ ಹಾಗೂ ಈ ವರ್ಷ ಪವಿತ್ರ ಹಜ್ ಕರ್ಮಕ್ಕೆ ತೆರಳುತ್ತಿರುವ ಎಂ.ಎA. ಅಬ್ದುಲ್ಲ ಮುಸ್ಲಿಯಾರ್, ಹಾರೂನ್ ಹಾಜಿ ಮಡಿಕೇರಿ, ಕಾಲೇಜಿನ ಅಧ್ಯಕ್ಷರಾದ ಉಮರ್ ಫೈಝಿ, ಲತೀಫ್ ಹಾಜಿ ಬೆಂಗಳೂರು ಹಾಗೂ ಕಳೆದ ೧೦ ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಉಸ್ತಾದ್ ಝೈನುದ್ದೀನ್ ಫೈಝಿ ಇರ್ಫಾನಿ ಕಾಸರಗೋಡು ಇವರುಗಳನ್ನು ಕಾಲೇಜು ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಉಸ್ಮಾನ್ ಫೈಝಿ ಪ್ರಾರ್ಥಿಸಿದರು. ಅಶ್ರಫ್ ಫೈಝಿ, ಮಹಲ್ ಖತೀಬ್ ಇಹ್ಸಾನ್ ಬಾಖವಿ, ಎಂ. ತಮ್ಲೀಕ್ ದಾರಿಮಿ ಕುಶಾಲನಗರ, ಇಕ್ಬಾಲ್ ಮೌಲವಿ ನೆಲ್ಯಾಹುದಿಕೇರಿ, ಆರಿಫ್ ಫೈಝಿ ಸಿದ್ದಾಪುರ, ನೌಫಲ್ ಹುದವಿ ಸಿದ್ದಾಪುರ, ಕೆ.ಎ. ಯಾಕುಬ್ ಬಜೆಗುಂಡಿ, ಅಬ್ದುಲ್ ರೆಹಮಾನ್ ನಾಪೋಕ್ಲು, ಸಿ.ಪಿ.ಎಂ. ಬಶೀರ್ ಹಾಜಿ, ಕಲೀಮ್ ಪಾಷಾ ಮಡಿಕೇರಿ, ಅಬ್ದುಲ್ ಮಜೀದ್ ಸಿದ್ದಾಪುರ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ಸ್ವಾಗತಿಸಿ, ನಿರೂಪಿಸಿದರು.