ನಾಪೋಕ್ಲು, ಮೇ. ೨: ಮೇಯಲು ಬಿಟ್ಟಿದ್ದ ಗಬ್ಬದ ಹಸು ಒಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಪಟ್ಟಣದ ನಿವಾಸಿ ಟಿ.ಎಂ. ಶ್ಯಾಮ್ ಎಂಬವರು ಮೇಯಲು ಬಿಟ್ಟಿದ್ದ ಎಂಟು ತಿಂಗಳ ಗಬ್ಬದ ಹಸು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟಿನ ಎದುರಿನ ಗದ್ದೆಯಲ್ಲಿ ಹುಲ್ಲು ಮೇಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದೆ. ಇದರ ಜೊತೆಯಲ್ಲಿದ್ದ ಇತರ ಜಾನುವಾರಗಳು ಅಪಾಯದಿಂದ ಪಾರಾಗಿವೆ.

ಸಂಜೆ ಸುರಿದ ಮಳೆ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎನ್ನಲಾಗಿದ್ದು ಇದರಿಂದ ಹಸು ಸಾವನ್ನಪ್ಪಿ ನಷ್ಟ ಸಂಭವಿಸಿದೆ ಎಂದು ಘಟನಾ ಸ್ಥಳದಲ್ಲಿ ಶ್ಯಾಂ ಅವರ ಪುತ್ರ ಸಂದೇಶ್ ಮಾಹಿತಿ ನೀಡಿದ್ದಾರೆ.

ನಾವು ಇಲ್ಲಿ ಹಸುಗಳನ್ನು ಕಟ್ಟಿಹಾಕಿ ಮೇಯಲು ಬಿಡುತ್ತೇವೆ ಸಾವನ್ನಪ್ಪಿದ ಹಸುವಿನ ಜೊತೆಯಲ್ಲಿ ನಮ್ಮ ಹಸುಗಳು ಇದ್ದು ಜೀವಾಪಾಯದಿಂದ ಪಾರಾಗಿವೆ. ಕೆಲವು ಕಡೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬರುತ್ತಿದೆ . ಇಂತ ಘಟನೆ ನಡೆಯದಂತೆ ಸಂಬAಧಿಸಿದ (ಚೆಸ್ಕಾಂ) ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ನಿವಾಸಿ ಕಾಫಿ ಬೆಳೆಗಾರ ಕಂಗAಡ ಜಾಲಿ ಪೂವಪ್ಪ ಒತ್ತಾಯಿಸಿದ್ದಾರೆ. - ದುಗ್ಗಳ