ಮಡಿಕೇರಿ, ಮೇ ೨ : ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಕೊಡಗು ಜಿಲ್ಲೆ ರಾಜ್ಯದಲ್ಲಿ ೫ನೇ ಸ್ಥಾನದಲ್ಲಿದೆ. ಶೇಕಡ ೮೨.೨೧ರಷ್ಟು ಫಲಿತಾಂಶದೊAದಿಗೆ ಕೊಡಗಿಗೆ ೫ನೇ ಸ್ಥಾನ ದೊರೆತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಕೊಡಗಿಗಿಂತ ಮೇಲಿನ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಗಿಂತ ಕೇವಲ ೦.೦೮ ಫಲಿತಾಂಶ ಕಡಿಮೆಯಾಗಿರುವ ಕಾರಣ ಕೊಡಗು ನಂತರದ ಸ್ಥಾನ ಪಡೆಯುವಂತಾಗಿದೆ.

ಮಾರ್ಚ್ ೨೧ ರಿಂದ ಏಪ್ರಿಲ್ ೪ರ ತನಕ ರಾಜ್ಯದಲ್ಲಿ ನಡೆದಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ರಾಜ್ಯದ ಶಿಕ್ಷಣ ಸಚಿಚ ಮಧು ಬಂಗಾರಪ್ಪ ಅವರು ಪ್ರಕಟಿಸಿದರು. ರಾಜ್ಯದಲ್ಲಿ ಶೇ. ೬೬.೪೪ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ರಾಜ್ಯದಲ್ಲಿ ೨೨ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

ರಾಜ್ಯದಲ್ಲಿ ಒಟ್ಟು ೨೮೧೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ೮,೪೨,೧೭೩ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು.

ಕೊಡಗಿಗೆ ಶೇ. ೮೨.೨೧ ಫಲಿತಾಂಶ

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ೧೭೧ ಪ್ರೌಢಶಾಲೆಗಳಿಂದ ಒಟ್ಟು ೬೬೭೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೫೪೮೬ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. ೮೨.೨೧ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ಜಿಲ್ಲೆ ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ ೫ನೇ ಸ್ಥಾನದಲ್ಲಿದೆ.

ಜಿಲ್ಲೆಯ ೧೧ ಸರಕಾರಿ ಶಾಲೆಗಳು ಹಾಗೂ ೧೫ ಅನುದಾನರಹಿತ ಶಾಲೆಗಳು ಸೇರಿ ಒಟ್ಟು ೨೬ ಶಾಲೆಗಳು ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ೨೭೨೩ ಬಾಲಕಿಯರು ಹಾಗೂ ೨೪೨೦ ಬಾಲಕರು ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ ೪೧೭೨ ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ ೯೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೆಲವು ಮಾಹಿತಿಗಳು : ಉತ್ತರ ಪತ್ರಿಕೆಗಳ ಸ್ಕಾö್ಯನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂP ೦೨.೦೫.೨೦೨೫

(ಮೊದಲ ಪುಟದಿಂದ) ರಿಂದ ೦೭.೦೫.೨೦೨೫.ಡಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿAಗ್ ಸೌಲಭ್ಯವಿಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕಾö್ಯನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ೧/ಕೆ|/ಬ್ಯಾಂಕಿಗೆ ಪಾವತಿಸಲು ನಿಗದಿಪಡಿಸಿದ ದಿ. ೦೨.೦೫.೨೦೨೫ ರಿಂದ ೦೮.೦೫.೨೦೨೫.

ಉತ್ತರ ಪತ್ರಿಕೆಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ ೦೪.೦೫.೨೦೨೫ ರಿಂದ ೧೧.೦೫.೨೦೨೫.

ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿAಗ್ ಸೌಲಭ್ಯವಿಲ್ಲದವರು ಆನ್‌ಲೈನ್‌ಲ್ಲಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ೧/ಕೆ೧/ಬ್ಯಾಂಕಿಗೆ ಪಾವತಿಸಲು ನಿಗದಿಪಡಿಸಿದ ದಿ. ೦೪.೦೫.೨೦೨೫ ರಿಂದ ೧೯.೦೫.೨೦೨೫.

ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಮರುಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ. ಸಂಬAಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕಾö್ಯನ್ ಪ್ರತಿಯನ್ನು ಪಡೆಯಬೇಕಾಗಿರುತ್ತದೆ. ಸ್ಕಾö್ಯನ್ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಖಚಿತಪಡಿಸಿಕೊಂಡ ನಂತರವೇ ಮರು ಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರುಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ ಪರಿಷ್ಕೃತ ಫಲಿತಾಂಶ ಪಟ್ಟಿಯನ್ನು ಸಂಬAಧಿಸಿದ ಶಾಲೆಗೆ ಹಾಗೂ ಎಸ್‌ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ರವಾನಿಸಲಾಗುವುದು.

ಸ್ಕಾö್ಯನ್‌ಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಪಡಿಸಲಾಗಿದೆ.

ಮರುಎಣಿಕೆ ಅಥವಾ ಮರುಮೌಲ್ಯಮಾಪನ ಸೇವೆಯನ್ನು ಪಡೆಯಬೇಕಾದಲ್ಲಿ ಸ್ಕಾö್ಯನ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಸ್ಕಾö್ಯನ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮಂಡಳಿಯ ಜಾಲತಾಣ ವಿಳಾಸ (ತಿebsiಣe ಚಿಜಜಡಿess) hಣಣಠಿs://ಞseಚಿb.ಞಚಿಡಿಟಿಚಿಣಚಿಞಚಿ.gov.iಟಿ ರಲ್ಲಿ ಮಾಹಿತಿ ಲಭ್ಯವಿದ್ದು

ಸದರಿ ಜಾಲತಾಣದಲ್ಲಿ ಆನ್‌ಲೈನ್‌ನಲ್ಲಿ ನಿಗದಿತ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ /ಆನ್‌ಲೈನ್ ಬ್ಯಾಂಕಿAಗ್ (ಕರ್ನಾಟಕ-ಒನ್ ಪೋರ್ಟಲ್) ಮೂಲಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿAಗ್ ಸೌಲಭ್ಯವಿಲ್ಲದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್‌ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ/ಬೆAಗಳೂರು-ಒನ್/ಕರ್ನಾಟಕ-ಒನ್ ಕೇಂದ್ರದಲ್ಲಿ ಶುಲ್ಕವನ್ನು ಪಾವತಿಸಬಹುದಾಗಿದೆ.

ಸ್ಕಾö್ಯನ್ ಪ್ರತಿ / ಮರುಮೌಲ್ಯಮಾಪನಕ್ಕಾಗಿ ಮೇಲ್ಕಂಡAತೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ವೀಕಾರವಾದ ಬಗ್ಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖಾಂತರ ಮಾಹಿತಿ ರವಾನೆಯಾಗುತ್ತದೆ.

ಜಿಲ್ಲಾ ಸಾಧಕರು

ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಸ್ಥಾನವನ್ನು ಇಬ್ಬರು, ಎರಡನೇ ಸ್ಥಾನವನ್ನು ಮೂವರು ಹಾಗೂ ತೃತೀಯ ಸ್ಥಾನವನ್ನು ನಾಲ್ವರು ಹಂಚಿಕೊAಡಿದ್ದಾರೆ. ಈ ಪೈಕಿ ೭ ಮಂದಿ ಬಾಲಕಿಯರು ಸ್ಥಾನ ಪಡೆದಿರುವುದು ವಿಶೇಷವಾಗಿದೆ.

೬೨೫ಕ್ಕೆ ೬೨೧ ಅಂಕ ಗಳಿಸಿರುವ ವೀರಾಜಪೇಟೆ ಕಾವೇರಿ ಪ್ರೌಢಶಾಲಾ ವಿದ್ಯಾರ್ಥಿನಿ, ತೋರ ಗ್ರಾಮದ ನಿವಾಸಿ ಟಿ.ಎಂ. ಮಾದಯ್ಯ, ಶರೀನ್ ದಂಪತಿ ಪುತ್ರಿ ಟಿ.ಎಂ. ಆಶ್ರಯ್ ಅಕ್ಕಮ್ಮ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢಶಾಲಾ ವಿದ್ಯಾರ್ಥಿನಿ, ಮೂಲತಃ ಹೆತ್ತೂರು ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಚಂದ್ರಕುಮಾರ್, ಶಿಲ್ಪ ದಂಪತಿ ಪುತ್ರಿ ಪಂಚಮಿ ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾರೆ.

೬೨೦ ಅಂಕ ಪಡೆದ ಗೋಣಿಕೊಪ್ಪ ಬಳಿಯ ಕಳತ್ಮಾಡು ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿ, ಮಲಚೀರ ಪಿ ದೇವಯ್ಯ, ಅನಿತಾ ದಂಪತಿ ಪುತ್ರ ತೇಜಸ್ ಭೀಮಯ್ಯ, ಮೂರ್ನಾಡು ಜ್ಞಾನ ಜ್ಯೋತಿ ಶಾಲಾ ವಿದ್ಯಾರ್ಥಿ, ಮೂರ್ನಾಡು ಗಾಂಧಿ ಗ್ರಾಮ ನಿವಾಸಿ ಸಿ.ಎಂ. ಮುನೀರ್, ಕೆ.ಎಸ್. ಸುಮಯ್ಯ