ಮಡಿಕೇರಿ, ಮೇ ೩: ಕೊಡಗು ಜಿಲ್ಲಾ ಎ.ಐ.ಟಿ.ಯು.ಸಿ. ಕಾರ್ಮಿಕ ಸಂಘಟನೆ ವತಿಯಿಂದ ಬಿಳಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನವನ್ನು ಆಚರಿಸಲಾಯಿತು.

ಟಾಟಾ ಸಂಸ್ಥೆಯ ಜಂಬೂರು ತೋಟದ ಕಾರ್ಮಿಕರ ಸಮ್ಮುಖದಲ್ಲಿ ಎ.ಐ.ಟಿ.ಯು.ಸಿ. ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಾರ್ಮಿಕ ವರ್ಗದಿಂದ ದೇಶದ ಪ್ರಗತಿ ಸಾಧ್ಯವಾಗಿದೆ. ಶ್ರಮಿಕ ವರ್ಗದ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸಬೇಕು ಎಂದರು.

ನೆರೆದಿದ್ದ ಕಾರ್ಮಿಕರು ಶ್ರಮಿಕ ವರ್ಗ ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಎ.ಐ.ಟಿ.ಯು.ಸಿ.ಯ ಕಾರ್ಮಿಕ ನಾಯಕರಾದ ಸಂಜೀವ, ಸೂರಜ್, ಪ್ರಕಾಶ್, ರಾಚಯ್ಯ, ಶಾರದ, ಗಿರಿಜಾ ಮತ್ತಿತರರು ಹಾಜರಿದ್ದರು.