ಮಡಿಕೇರಿ, ಏ. ೩೦: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ "ಚಳವಳಿ ಮತ್ತು ಸಾಹಿತ್ಯ ಅಂತರ್ ಸಂಬAಧ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಸರ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಅಲ್ಲಾರಂಡ ರಂಗಚಾವಡಿ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಿಶೇಷ ಉಪನ್ಯಾಸ ನೀಡಿ, ಪಂಪನಾದಿಯಾಗಿ ಹೊಸಗನ್ನಡ ಕಾಲದವರೆಗಿನ ದಲಿತ-ಬಂಡಾಯ ಸಾಹಿತ್ಯದವರೆಗಿನ ವಿಸ್ತಾರವನ್ನು, ಚಳವಳಿ ಸಾಹಿತ್ಯದ ಅಂತರ್ ಸಂಬAಧದ ವಿವಿಧ ಮಜಲುಗಳನ್ನು ಪ್ರಸ್ತಾಪಿಸಿದರು. ಚಕೋರ-ಕೊಡಗು ಜಿಲ್ಲಾ ಸಂಚಾಲಕರಾದ ಡಾ.ಜೆ.ಸೋಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಪಂಪನಿAದ ಹಿಡಿದು ಇಂದಿನ ಯುವ ಬರಹಗಾರರವರೆಗೆ ಸಾಹಿತ್ಯ ಯಾವ ರೀತಿಯಾಗಿ ಜೀವಪರವಾದ ಚಳವಳಿ ಆಗಿತ್ತು ಎಂಬುದನ್ನು ಯುವಜನತೆ ತಿಳಿದುಕೊಳ್ಳುವಂತದ್ದು ಬಹಳ ಮುಖ್ಯ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಚಿಕ್ಕಮಗಳೂರು ಗಣೇಶ ಮಾತನಾಡಿ, ಅಂಬೇಡ್ಕರ್ ಅವರನ್ನು ಸಾಮಾಜಿಕ ನ್ಯಾಯದ ತಾಯಿ ಎಂದು ಕರೆಯಬಹುದಾದರೆ, ಸಂವಿಧಾನವನ್ನು ಚಳವಳಿಗಳ ಮಹಾತಾಯಿ ಎಂದು ಕರೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ, ಸಾಮಾಜಿಕ ಪರಿವರ್ತನೆಯಲ್ಲಿ ಸಾಹಿತಿಗಳ ಪಾತ್ರ ಅತಿ ಮುಖ್ಯ ಎಂದರು.
ಉಪನ್ಯಾಸಕರಾದ ಮುಖೇಶ್ ಸ್ವಾಗತಿಸಿದರು, ಡಾ. ಟಿ.ಎಸ್. ಮಹಾಲಕ್ಷಿ÷್ಮ ನಿರೂಪಿಸಿದರು, ಕೆ.ಜಿ. ರಮ್ಯಾ ವಂದಿಸಿದರು.