ಗೋಣಿಕೊಪ್ಪಲು, ಏ. ೩೦: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಮೈದಾನ ೨ ರಲ್ಲಿ ೩ನೇ ದಿನದ ಮಹಿಳಾ ಕ್ರಿಕೆಟ್ ನಲ್ಲಿ ೪ ತಂಡ ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯವು ಚಿಮ್ಮಣಮಾಡ ತಂಡ ಹಾಗೂ ನಂದೇಟಿರ ತಂಡದ ನಡುವೆ ನಡೆದು ಚಿಮ್ಮಣಮಾಡ ಮಹಿಳಾ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೪೨ ರನ್ ಬಾರಿಸಿತು. ನಂದೇಟಿರ ತಂಡವು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿ ಸೋಲನ್ನು ಅನುಭವಿಸಿತು.

ಎರಡನೇ ಪಂದ್ಯವು ಕರಿನೆರವಂಡ ಹಾಗೂ ಅಜ್ಜಿನಿಕಂಡ ಮಹಿಳಾ ತಂಡದ ನಡುವೆ ನಡೆದು, ಕರಿನೆರವಂಡ ಮಹಿಳಾ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸಿತು. ಅಜ್ಜಿನಿಕಂಡ ಮಹಿಳಾ ತಂಡವು ನಿಗದಿತ ಓವರ್‌ನಲ್ಲಿ ತನ್ನ ೫ ವಿಕೆಟ್ ಕಳೆದುಕೊಂಡು ೪೯ ರನ್ ಕಲೆ ಹಾಕಿ ಸೋಲು ಕಂಡಿತು.

ಮೂರನೇ ಪಂದ್ಯವು ಮಾಚಿಮಂಡ ಹಾಗೂ ಕೊಟ್ಟಂಗಡ ಮಹಿಳಾ ತಂಡಗಳ ನಡುವೆ ನಡೆದು ಮಾಚಿಮಂಡ ತಂಡ ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೪೧ ರನ್ ಗಳಿಸಿತು. ಕೊಟ್ಟಂಗಡ ತಂಡವು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್‌ನಲ್ಲಿ ೩ವಿಕೆಟ್ ಕಳೆದುಕೊಂಡು ೪೦ ರನ್ ಗಳಿಸಿ ಸೋಲನ್ನು ಅನುಭವಿಸಿತು.

ನಾಲ್ಕನೇ ಪಂದ್ಯವು ಚೇಂದಿರ ಹಾಗೂ ಮುಕ್ಕಾಟಿರ (ಬೇತ್ರಿ) ಮಹಿಳಾ ತಂಡಗಳ ನಡುವೆ ನಡೆದು ಚೇಂದಿರ ಮಹಿಳಾ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೬೯ ರನ್ ಗಳಿಸಿತು. ಮುಕ್ಕಾಟಿರ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೬೫ ರನ್ ಗಳಿಸಿ ಸೋಲನ್ನು ಅನುಭವಿಸಿತು.

-ಹೆಚ್.ಕೆ. ಜಗದೀಶ್