ಮಡಿಕೇರಿ, ಏ. ೩೦ : ಮಡಿಕೇರಿ ನಗರಸಭೆಯಿಂದ ಪ್ಲಾಂಟರ್ಸ್ ವರ್ಲ್ಡ್ ಸಂಸ್ಥೆಗೆ ಎರಡು ಬಾರಿ ಬಿಲ್ ಪಾವತಿ ಮಾಡಲಾತಗಿದೆ ಎಂದು ಸದಸ್ಯ ಅಮಿನ್ ಮೊಯ್ಸಿನ್ ನೀಡಿದ ದೂರಿಗೆ ಸಂಬAಧಿಸಿದAತೆ ಹಿರಯ ಉಪವಿಭಾಗಾಧಿಕಾರಿ ವಿನಯಾಕ್ ನರ್ವಾಡೆ ಅವರು ವಿಚಾರಣೆ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ನಗರಸಭಾ ಸದಸ್ಯ ಅಪ್ಪಣ್ಣ ಮಾಲೀಕತ್ವದ ಪ್ಲಾಂಟರ್ಸ್ ವರ್ಲ್ಡ್ ಸಂಸ್ಥೆಗೆ ನಗರಸಭೆಯಿಂದ ಎರಡು ಬಾರಿ ಬಿಲ್ ಪಾವತಿಯಾಗಿರುವುದು ವಿಚಾರಣೆ ವೇಳೆ ಸಾಬೀತಾಗಿದ್ದು, ಈ ಹಿಂದಿನ ನಗರಸಭಾ ಆಯುಕ್ತ ಎಸ್.ವಿ. ರಾಮದಾಸ್, ಎಇಇ ಕೆ. ಸೌಮ್ಯ, ಲೆಕ್ಕಾಧೀಕ್ಷಕಿ ಸುಜಾತ, ದ್ವಿತೀಯ ದರ್ಜೆ ಸಹಾಯಕಿ ಹರಿಣಿ ಇವರುಗಳು ವಿಚಾರಣೆ ವೇಳೆಯಲ್ಲಿ ಕಣ್ತಪ್ಪಿನಿಂದ ಎರಡು ಬಾರಿ ಬಿಲ್ ಪಾವತಿಯಾಗಿದೆ ಹೊರತು ಯಾವುದೇ ದುರುದ್ದೇಶದಿಂದಲ್ಲ. ಹಾಗಾಗಿ ಹೆಚ್ಚುವರಿ ಪಾವತಿಯಾಗಿರುವ ಮೊತ್ತವನ್ನು ಸಂಬAಧಿಸಿದವರಿAದ ನಗರಸಭೆಗೆ ಮರುಪಾವತಿಸಿಕೊಳ್ಳಲು ಆದೇಶ ನೀಡಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಕೋರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಆಪಾದಿತ ಅಧಿಕಾರಿ ಹಾಗೂ ನೌಕರರು ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲ್ಲಿ ನಿರ್ಲಕ್ಷö್ಯ ತೋರಿರುವುದರಿಂದ ಕರ್ನಾಟಕ ಸಿವಿಲ್ ಸೇವಾ ನಿಯಮಗಳು ೧೯೫೭ರ ನಿಯಮ ೮(iii)ರಂತೆ ಕ್ರಮಕೈಗೊಳ್ಳುವುದು ಸೂಕ್ತ ಎಂದು ವರದಿಯಲ್ಲಿ ಅಭಿಪ್ರಾಯಿಸಲಾಗಿದೆ.