ಗೋಣಿಕೊಪ್ಪಲು, ಏ. ೩೦: ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವು ಇದೀಗ ೨೫ನೇ ವರ್ಷದ ಸಂಭ್ರಮದಲ್ಲಿದೆ.
ಈ ಬಾರಿ ತಾ. ೧ ರಿಂದ (ಇಂದಿನಿAದ) ೩ ದಿನಗಳ ಕಾಲ ಮೂರ್ನಾಡುವಿನ ಬಾಚೆÀಟ್ಟಿರ ಲಾಲು ಮುದ್ದಯ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡೋತ್ಸವವು ಜರುಗಲಿದೆ. ಕ್ರಿಕೆಟ್ ಸೇರಿದಂತೆ ಇನ್ನಿತರ ಕ್ರೀಡೆಗಳು ನಡೆಯಲಿದೆ. ತಮ್ಮ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು ಹಾಗೂ ಪುರುಷರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯ ವಿವಿಧ ಭಾಗದ ೧೦ ವಲಯಗಳಿಂದ ಸಮಾಜದವರು ಭಾಗವಹಿಸಲಿದ್ದಾರೆ.
ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹೆಗ್ಗಡೆ ಸಮಾಜದ ಜನಾಂಗವು ವಾಸವಿದ್ದು ೮ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದಾರೆ. ಬಿಟ್ಟಂಗಾಲದಲ್ಲಿ ಸುಮಾರು ರೂ. ೩ ಕೋಟಿ ವೆಚ್ಚದಲ್ಲಿ ತನ್ನದೆ ಆದ ಕಟ್ಟಡವನ್ನು ಹೊಂದಿದೆ.
ಮೇ ೧ ರಿಂದ ೩ ದಿನಗಳ ಕಾಲ ೨೫ನೇ ವರ್ಷದ ಕ್ರೀಡೋತ್ಸವ ಆರಂಭಗೊಳ್ಳಲಿದ್ದು ಸಮಾಜದ ನೂತನ ಅಧ್ಯಕ್ಷರಾದ ಕೊರಕುಟ್ಟಿರ ಸರಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ವೇದಿಕೆ ಕಾರ್ಯಕ್ರಮವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರುವಿನ ಜಿಕೆವಿಕೆಯ ವಿಶ್ರಾಂತ ಕುಲಪತಿ ಡಾ. ಪಡಿಞರಂಡ ಜಿ. ಚಂಗಪ್ಪ, ಅರಣ್ಯ ಸಂಚಾರಿ ದಳದ ಅಧಿಕಾರಿ ಮುಖ್ಯಮಂತ್ರಿಗಳ ಪದಕ ವಿಜೇತ ತುದಿಮಾಡ ಸವಿ ಲೋಕೇಶ್, ಪೊಲೀಸ್ ಇಲಾಖೆಯ ಸೇವೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಚಂಗಚAಡ ನಿತಿನ್ ಮಾಚಯ್ಯ, ಅಗ್ನಿಶಾಮಕ ದಳದ ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಮಚ್ಚಂಡ ನಂಜಪ್ಪ ಭಾಗವಹಿಸಲ್ಲಿದ್ದಾರೆ.
ಮೇ ೩ ರಂದು ಸಂಜೆ ಸಮಾರೋಪ ಸಮಾರಂಭವು ಕೊರಕುಟ್ಟಿರ ಸರಾ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ, ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ, ವಕೀಲ ಪಡಿಞರಂಡ ಜಿ. ಅಯ್ಯಪ್ಪ, ದಾನಿಗಳಾದ ಕೊಪ್ಪಡ ಪಟ್ಟು ಪಳಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲ್ಲಿದ್ದಾರೆ.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಶಿಕ್ಷಣ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಹಿರಿಯರ ವಿಭಾಗದಲ್ಲಿ ೨೨ ತಂಡಗಳು, ಕಿರಿಯರ ವಿಭಾಗದಲ್ಲಿ ೭ ತಂಡಗಳು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲಿದೆೆ. ಉಳಿದಂತೆ ಮಹಿಳಾ ಹಾಗೂ ಪುರುಷ ವಿಭಾಗದಲ್ಲಿ ಹಗ್ಗಜಗ್ಗಾಟ ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾಟವು ಜರುಗಲಿದೆ. ಕ್ರೀಡಾ ಸಮಿತಿಯ ಜವಾಬ್ದಾರಿಯನ್ನು ಸಮಿತಿಯ ಪದಾಧಿಕಾರಿಗಳಾದ ಪಡಿಞರಂಡ ಪ್ರಭುಕುಮಾರ್ ಹಾಗೂ ಪಂದಿಕAಡ ನಾಗೇಶ್ ವಹಿಸಲಿದ್ದಾರೆ.
ರಾಜಕೀಯ ಮೀಸಲಾತಿ
ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನವಾಗಿ ಕ್ರೀಡೋತ್ಸವವನ್ನು ಕಳೆದ ೨೪ ವರ್ಷಗಳ ಹಿಂದೆ ಆರಂಭಿಸಲಾಯಿತು. ಸಮಾಜದ ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜವು ಯಶಸ್ವಿ ಯಾಗಿದೆ. ಸಮಾಜ ಬಾಂಧÀವರ ವಿದ್ಯಾಭ್ಯಾಸಕ್ಕೆ ಹಾಗೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರಂಭದಿAದಲೂ ರಾಜಕೀಯ ಮೀಸಲಾತಿಗಾಗಿ ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿದ್ದೇವೆ. ಈ ಬಾರಿ ಶಾಸಕ ಪೊನ್ನಣ್ಣ ಅವರ ಮೂಲಕ ಉನ್ನತ ಸಚಿವರು ಹಾಗೂ ಇನ್ನಿತರ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಮುಂದೆ ರಾಜಕೀಯ ಮೀಸಲಾತಿ ದೊರೆಯುವ ವಿಶ್ವಾಸವಿದೆ ಎಂದು ಕೊರಕುಟ್ಟಿರ ಸರಾ ಚಂಗಪ್ಪ, ಹೆಗ್ಗಡೆ ಸಮಾಜದ ಅಧ್ಯಕ್ಷರು ತಿಳಿಸಿದ್ದಾರೆ. -ಹೆಚ್.ಕೆ. ಜಗದೀಶ್