ಪೊನ್ನಂಪೇಟೆ, ಏ. ೩೦: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ತಾ. ೩ ರಿಂದ ೫ ರವರೆಗೆ ಒಕ್ಕಲಿಗರ ಕ್ರೀಡಾಕೂಟ ‘ಒಕ್ಕಲಿಗರ ಪರ್ವ' ಆಯೋಜಿಸಲಾಗಿದೆ. ಕ್ರೀಡಾಕೂಟದ ಆಹ್ವಾನ ಪತ್ರಿಕೆಯನ್ನು ಇತ್ತೀಚೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವೀರಾಜಪೇಟೆಯಲ್ಲಿ ಬಿಡುಗಡೆ ಗೊಳಿಸಿದರು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ತಾ. ೩ ರಂದು ನಡೆಯಲಿದ್ದು, ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ. ಡಾಲು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಪರ್ಚೇಸ್ ಕಮಿಟಿ ಸದಸ್ಯರಾದ ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರಾದ ವಿ.ಎಸ್. ರಾಮಚಂದ್ರ, ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಕೆ.ಎಸ್. ಗೋಪಾಲಕೃಷ್ಣ, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಉದ್ಯಮಿ ಗಿರೀಶ್ ಮಲ್ಲಪ್ಪ, ನಿವೃತ್ತ ಗ್ರಾಮಲೆಕ್ಕಿಗ ವಿ.ಜಿ. ಗೋಪಾಲಕೃಷ್ಣ, ವಿ.ವಿ. ಚಿಕ್ಕಣ್ಣ, ಉದ್ಯಮಿ ಜಿ.ಕೆ. ಗಣೇಶ್, ಕಾಫಿ ಬೆಳೆಗಾರ ವಿ.ಎಲ್. ಸುರೇಶ್, ಪೋಸ್ಟ್ ಮಾಸ್ಟರ್ ವಿ.ಜಿ. ಪ್ರಭು, ಕಾಫಿ ಬೆಳೆಗಾರರಾದ ಸುಧ ಸುಬ್ರಮಣಿ, ಒಕ್ಕಲಿಗ ಯುವ ವೇದಿಕೆ ಉಪಾಧ್ಯಕ್ಷ ಕೆ.ಪಿ. ಅಜಿತ್, ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಖಜಾಂಚಿ ವಿ.ಎಸ್. ಕಿರಣ್ ಭಾಗವಹಿಸಲಿದ್ದಾರೆ.

ವೀರಾಜಪೇಟೆ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಬಾಂಧವರು ಪಾಲ್ಗೊಳ್ಳುವ ಒಕ್ಕಲಿಗರ ಪರ್ವ ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್ ಲೀಗ್, ಹಗ್ಗಜಗ್ಗಾಟ, ಬಾಂಬ್ ಇನ್ ದಿ ಸಿಟಿ, ಭಾರದ ಗುಂಡು ಎಸೆತ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ, ಥ್ರೋಬಾಲ್, ಬಾಂಬ್ ಇನ್ ದಿ ಸಿಟಿ, ಭಾರದ ಗುಂಡು ಎಸೆತ, ರಂಗೋಲಿ ಹಾಗೂ ಬೆಂಕಿ ರಹಿತ ಅಡುಗೆ, ಮಕ್ಕಳಿಗೆ ಸ್ಲೋ ಸೈಕಲ್ ರೇಸ್, ಗೋಣಿಚೀಲ ಓಟ, ಗೋಲಿ ಹೆಕ್ಕುವುದು ಹಾಗೂ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಈ ಎಲ್ಲಾ ಕ್ರೀಡೆಯ ಉಸ್ತುವಾರಿಯನ್ನು ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಖಜಾಂಚಿ ವಿ.ಎಸ್. ಕಿರಣ್, ಕ್ರೀಡಾ ಸಂಚಾಲಕ ವಿ.ಎಸ್. ಜಗದೀಶ್, ಸಹ ಕ್ರೀಡಾ ಸಂಚಾಲಕ ಡಿ.ಜಿ. ನಿಖಿಲ್ ನಿರ್ವಹಿಸಲಿದ್ದಾರೆ.

ಒಕ್ಕಲಿಗರ ಪರ್ವ ಕಾರ್ಯಕ್ರಮ ದಲ್ಲಿ ಕ್ರೀಡೆಗಳ ಜೊತೆಗೆ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದ್ದು, ೩ ರಿಂದ ೬ ವರ್ಷ ವಯೋಮಿತಿಯ ಮಕ್ಕಳಿಗಾಗಿ ಪುಟಾಣಿ ಪಂಟ್ರು ತುಂಟಾಟ ಕಾರ್ಯಕ್ರಮ, ೧೬ ರಿಂದ ೪೫ ವರ್ಷ ದೊಳಗಿನ ಪುರುಷರು ಮತ್ತು ಮಹಿಳೆಯರಿಗೆ ರಸಸಂಜೆ, ರೀಲ್ಸ್, ಡಬ್ಸ್ ಸ್ಮಾಷ್, ೪೫ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಸಂಗೀತ ಸ್ಪರ್ಧೆ, ೨೧ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಆಯ್ಕೆಯಾದ ೫ ದಂಪತಿಗಳಿಗೆ ನಮ್ಮ ಸಂಸಾರ ಆನಂದ ಸಾಗರ, ತವರೂರು ಹೆಣ್ಣು ಮಕ್ಕಳಿಗೆ ನಮ್ಮ ಮನೆ ಮಗಳು, ಜಣ ಜಣ ಕಾಂಚಾಣ ಯಾರಿಗೆ..? ಎಂಬ ಸ್ಪರ್ಧೆಗಳನ್ನು ಏರ್ಪಡಿಸಲಾದ್ದು, ಈ ಎಲ್ಲಾ ಮನರಂಜನಾ ಸ್ಪರ್ಧೆಯು ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ವಿ.ಪಿ. ಡಾಲು ಅವರ ಮೇಲುಸ್ತುವಾರಿಯಲ್ಲಿ, ದೊಡ್ಡಮನೆ ವಿ.ಜೆ. ದಿನೇಶ್ ಅವರ ನಿರ್ದೇಶನ ಮತ್ತು ಉಸ್ತುವಾರಿಯಲ್ಲಿ ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ೯೪೮೦೪೨೫೬೫೮, ೭೦೨೨೯೩೪೬೩೪, ೯೯೪೫೪೯೨೧೫೩. ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.