ಗೋಣಿಕೊಪ್ಪಲು, ಏ. ೩೦ : ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೨೪ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಅಜ್ಜಿಕುಟ್ಟಿರ ಹಾಗೂ ಕಾಳಿಮಾಡ ತಂಡದ ನಡುವೆ ನಡೆದು ಕಾಳಿಮಾಡ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೨೫ ರನ್ ಗಳಿಸಿತು. ಅಜ್ಜಿಕುಟ್ಟಿರ ತಂಡ ತನ್ನ ೫ ವಿಕೆಟ್ ಕಳೆದುಕೊಂಡು ೨೧ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಆಪಟ್ಟಿರ ಹಾಗೂ ಮಾಚಿಮಂಡ ತಂಡದ ನಡುವೆ ನಡೆದು ಮಾಚಿಮಂಡ ತಂಡವು ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿತು. ಆಪಟ್ಟಿರ ತಂಡವು ೩ ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಮೂರನೇ ಪಂದ್ಯವು ಕುಂದತ್ ಮಾಳೇಟಿರ ಹಾಗೂ ಕರವಟ್ಟಿರ ತಂಡದ ನಡುವೆ ನಡೆದು ಕರವಟ್ಟಿರ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೯೦ ರನ್ ಗಳಿಸಿತು. ಕುಂದತ್ ಮಾಳೇಟಿರ ತಂಡವು ೬ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿ ಸೋತಿತು.
ನಾಲ್ಕನೇ ಪಂದ್ಯವು ನಾಗಚೆಟ್ಟಿರ ಹಾಗೂ ತಾತಪಂಡ ತಂಡದ ನಡುವೆ ನಡೆದು ತಾತಪಂಡ ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೭೬ ರನ್ ಗಳಿಸಿತು. ನಾಗಚೆಟ್ಟಿರ ತಂಡವು ೧ ವಿಕೆಟ್ ಕಳೆದುಕೊಂಡು ೭೫ ರನ್ ಗಳಿಸಿ ಸೋಲನ್ನು ಕಂಡಿತು.
ಐದನೇ ಪಂದ್ಯವು ಅಚ್ಚಪಂಡ ಹಾಗೂ ಕೋಟ್ರಂಗಡ ನಡುವೆ ನಡೆದು ಅಚ್ಚಪಂಡ ತಂಡವು ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೫೪ ರನ್ ಗಳಿಸಿತು. ಕೋಟ್ರಂಗಡ ತಂಡವು ೩ ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಆರನೇ ಪಂದ್ಯವು ಅಯ್ಯಮಾಡ ಹಾಗೂ ಬೊಳಂದAಡ ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸಿತು. ಅಯ್ಯಮಾಡ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಏಳನೇ ಪಂದ್ಯವು ಕುಟ್ಟಂಡ (ಮಾದಪುರ) ಹಾಗೂ ಅರೆಯಡ ತಂಡದ ನಡುವೆ ನಡೆಯಬೇಕಿತ್ತಾದರೂ ಅರೆಯಡ ತಂಡವು ಗೈರಾದ ಹಿನ್ನೆಲೆಯಲ್ಲಿ ಕುಟ್ಟಂಡ ತಂಡಕ್ಕೆ ವಾಕ್ ಓವರ್ ಲಭಿಸಿತು. - ಹೆಚ್.ಕೆ.ಜಗದೀಶ್