ಮಡಿಕೇರಿ, ಏ. ೩೦: ಮರಗೋಡು ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ೧೦ ಕುಟುಂಬ ೧೮ ಗೋತ್ರದ ಅರೆಭಾಷೆಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬದಲ್ಲಿ ಕಟ್ಟೆಮನೆ ಹಾಗೂ ಇಳಂದಿಲ ಪ್ರಿ ಕ್ವಾಟರ್ ಫೈನಲ್ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಕುಯ್ಯಮುಡಿ ೮ ವಿಕೆಟ್‌ಗೆ ೩೪ ರನ್ ಗಳಿಸಿದರೆ, ಬೈಮನ ೩ ವಿಕೆಟ್‌ಗೆ ೩೬ ರನ್ ಗಳಿಸಿ ಜಯಗಳಿಸಿತು. ಅಮೆಮನೆ ೯ ವಿಕೆಟ್‌ಗೆ ೫೩ ರನ್ ಗಳಿಸಿದರೆ, ಎಡಿಕೇರಿ (ಬಿ) ೨ ವಿಕೆಟ್‌ಗೆ ೫೪ ರನ್ ಗಳಿಸಿ ಜಯಗಳಿಸಿತು. ಸೆಟ್ಟೆಜನ ೩ ವಿಕೆಟ್‌ಗೆ ೩೫ ರನ್ ಗಳಿಸಿದರೆ ಕಟ್ಟೆಮನೆ ೨ ವಿಕೆಟ್‌ಗೆ ೩೯ ರನ್‌ಗಳಿಸಿ ಜಯಗಳಿಸಿತು. ಪರಿಚನ ೭ ವಿಕೆಟ್‌ಗೆ ೨೯ ರನ್ ಗಳಿಸಿದರೆ ಕೋಚನ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೩ ರನ್ ಗಳಿಸಿ ಜಯಗಳಿಸಿತು. ಕಟ್ಟೆಕೋಡಿ ೮ ವಿಕೆಟ್‌ಗೆ ೬೦ ರನ್ ಗಳಿಸಿದರೆ, ಕುಲ್ಲಚೆಟ್ಟಿ ೪ ವಿಕೆಟ್‌ಗೆ ೬೧ ರನ್ ಬಾರಿಸಿ ಜಯಗಳಿಸಿತು. ಬೈಮನ ೫ ವಿಕೆಟ್‌ಗೆ ೪೩ ರನ್ ಗಳಿಸಿದರೆ ಇಳಂದಿಲ ೪ ವಿಕೆಟ್‌ಗೆ ೪೪ ರನ್‌ಗಳಿಸಿ ಜಯಗಳಿಸಿತು.

ಎಡಿಕೇರಿ (ಬಿ) ೫ ವಿಕೆಟ್‌ಗೆ ೫೯ ರನ್ ಗಳಿಸಿದರೆ ಬೊಳ್ತಜಿರ ೩ ವಿಕೆಟ್‌ಗೆ ೬೨ ರನ್ ಗಳಿಸಿ ಜಯಗಳಿಸಿತು. ಕೋಚನ ೬ ವಿಕೆಟ್‌ಗೆ ೪೧ ರನ್ ಗಳಿಸಿದರೆ ಕಟ್ಟೆಮನೆ ೩ ವಿಕೆಟ್‌ಗೆ ೪೨ ರನ್ ಗಳಿಸಿ ಜಯಗಳಿಸಿತು. ಕುಲ್ಲಚೆಟ್ಟಿ ೫ ವಿಕೆಟ್‌ಗೆ ೪೦ ರನ್ ಗಳಿಸಿದರೆ ಪೇರಿಯನ ೩ ವಿಕೆಟ್‌ಗೆ ೩೩ ರನ್‌ಗಳಿಸಿ ಸೋಲಾನುಭವಿಸಿತು. ಬೊಳ್ತಜಿರ ೮ ವಿಕೆಟ್‌ಗೆ ೫೩ ರನ್ ಗಳಿಸಿದರೆ, ಇಳಂದಿಲ ೫ ವಿಕೆಟ್‌ಗೆ ೫೪ ರನ್ ಗಳಿಸಿ ಜಯಗಳಿಸಿತು. ಕಟ್ಟೆಮನೆ ೭ ವಿಕೆಟ್‌ಗೆ ೪೭ ರನ್ ಬಾರಿಸಿದರೆ ಕುಲ್ಲಚೆಟ್ಟಿ ೫ ವಿಕೆಟ್‌ಗೆ ೪೧ ರನ್‌ಗಳಿಸಿ ಸೋಲು ಕಂಡಿತು.