ಮಡಿಕೇರಿ, ಏ. ೩೦: ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ವತಿಯಿಂದ ಆಲ್ ಇಂಡಿಯಾ ಫೈವ್ಸ್ ಮಾದರಿಯ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಮೇ ೧ ರಿಂದ (ಇಂದಿನಿAದ) ೪ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಲ್ ಸ್ಟಾರ್ ಯೂತ್ ಕ್ಲಬ್ ಸಲಹೆಗಾರ್ತಿ ಮನೆಯಪಂಡ ಶೀಲಾ ಬೋಪಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ ೧ರ ಸಂಜೆ ೪ ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷರಾದ ಸುಧಾಕರ್ ರೈ(ಚುಮ್ಮಿ ರೈ) ವಹಿಸಲಿದ್ದಾರೆ. ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಆಲ್ ಸ್ಟಾರ್ ಯೂತ್ ಕ್ಲಬ್ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಟಿಟಿಪಿ ಗ್ರೂಪ್ ಮಾಲೀಕ ಟಿ.ಟಿ. ಪ್ರಭು, ಚೈನ್ನೆöÊ ಪ್ರೆಸ್ಟೀಜ್ ಗ್ರೂಪ್ ಮುಖ್ಯಸ್ಥರಾದ ಭಾನು ರಘುನಾಥನ್, ಮೈಸೂರಿನ ತುಷಾ ಎಂಟಪ್ರೆöÊಸಸ್ ಮಾಲೀಕ ವಿನೋದ್ ಉತ್ತಪ್ಪ, ಯುವ ಕಾಂಗ್ರೆಸ್ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅನೂಪ್ ಕುಮಾರ್, ಪಾಲಿಬೆಟ್ಟ ಟಾಟಾ ಕಾಫಿ ವ್ಯವಸ್ಥಾಪಕರಾದ ಎ.ಎಸ್ ಮುತ್ತಣ್ಣ, ಮಾಜಿ ಫುಟ್ಬಾಲ್ ಆಟಗಾರ ಕೆ.ಸಿ ಅಚ್ಚಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸಾಧಕರಾದ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಪೂವಯ್ಯ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ. ನಾಗೇಶ್ (ಈಶ್ವರ್), ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಕೊಡಗು ಎಫ್.ಸಿ ಅಧ್ಯಕ್ಷ ಡಾ.ಅಮೃತ್ ನಾಣಯ್ಯ, ಲಿಟಲ್ ಫ್ಲವರ್ ಸಂಸ್ಥೆಯ ದೈಹಿಕ ಶಿಕ್ಷಣ ಮುಖ್ಯಸ್ಥರಾದ ಪ್ರಕಾಶ್ ಎಂ.ಆರ್. ಹಾಗೂ ಚಿಕ್ಕಮಗಳೂರು ಆ್ಯಂಬರ್ ವ್ಯಾಲಿ ಶಾಲೆಯ ತರಬೇತುದಾರ ಅಬೂಬಕರ್ ಉಬೈಸ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಅವರು ತಿಳಿಸಿದ್ದಾರೆ.