ಬಹುಜನ ಕಾರ್ಮಿಕರ ಸಂಘದ ಸಂಚಾಲಕ ಪಾಪಣ್ಣ ಮಾತನಾಡಿ, ನಮ್ಮ ಹೋರಾಟವನ್ನು ನ್ಯಾಯ ದೊರಕುವವರೆಗೆ ಮುಂದುವರಿಸುವುದಾಗಿ ತಿಳಿಸಿದರು.

*ಗೋಣಿಕೊಪ್ಪ, ಏ. ೩೦: ಬಹುಜನ ಕಾರ್ಮಿಕರ ಸಂಘ ಮತ್ತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಅಮ್ಮತ್ತಿ ಕಂದಾಯ ಕಚೇರಿ ಎದುರು ನಿವೇಶನಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿ ಮುಂದುವರಿದಿದೆ.

ಬಹುಜನ ಕಾರ್ಮಿಕರ ಸಂಘದ ಪ್ರಮುಖರಾದ ಮಾದೇಶ್ ಮಾತನಾಡಿ, ಐದು ವರ್ಷಗಳಿಂದ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಆದರೂ ಸೂಕ್ತ ಸ್ಪಂದನ ಸಿಕ್ಕಿಲ್ಲ ಎಂದರು. ಬಹುಜನ ಕಾರ್ಮಿಕರ ಸಂಘದ ಸಂಚಾಲಕ ಪಾಪಣ್ಣ ಮಾತನಾಡಿ, ನಮ್ಮ ಹೋರಾಟವನ್ನು ನ್ಯಾಯ ದೊರಕುವವರೆಗೆ ಮುಂದುವರಿಸುವುದಾಗಿ ತಿಳಿಸಿದರು.