ಸೋಮವಾರಪೇಟೆ, ಏ. ೨೯: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಸ್ಥಾನದಲ್ಲಿ ೩ನೇ ವರ್ಷದ ವಾರ್ಷಿಕ ಮಹಾಪೂಜೆ ಈಚೆಗೆ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ದೇವಸ್ಥಾನದಲ್ಲಿ ಗೋ ಪೂಜೆ, ಪುಣ್ಯಾಹಶುದ್ಧಿ, ಮಹಾಗಣಪತಿ ಹೋಮ, ಕಲಾವೃದ್ಧಿ ಕಳಶ ಅಭಿಷೇಕ, ಅಲಂಕಾರ ಸಹಿತ ಮಹಾಪ್ರಜೆ, ಮಂತ್ರಾಕ್ಷತೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪೂಜಾ ಕಾರ್ಯವನ್ನು ಗೋಪಾಲಕೃಷ್ಣ ನಂಬೂದರಿ ನಡೆಸಿಕೊಟ್ಟರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಾರನ ಅಪ್ಪಾಜಿ, ಕಾರ್ಯದರ್ಶಿ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ, ಖಜಾಂಚಿ ಬಾರನ ಭರತ್‌ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.