ಗೋಣಿಕೊಪ್ಪಲು, ಏ. ೨೯: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೨೩ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು.
ಮಳೆಯ ಹಿನ್ನೆಲೆಯಲ್ಲಿ ದಾಸಂಡ ಹಾಗೂ ಉಳುವಂಗಡ ತಂಡಗಳ ನಡುವಿನ ಪಂದ್ಯವನ್ನು ಮುಂದೂಡಲಾಯಿತು.
ಮೊದಲ ಪಂದ್ಯವು ಬಾದುಮಂಡ ಹಾಗೂ ಅಳಮೇಂಗಡ ತಂಡದ ನಡುವೆ ನಡೆದು ಅಳಮೇಂಗಡ ನಿಗದಿತ ಓವರ್‌ನಲ್ಲಿ ತನ್ನ ೫ ವಿಕೆಟ್ ಕಳೆದುಕೊಂಡು ೧೦೫ ರನ್ ಗಳಿಸಿತು. ಬಾದುಮಂಡ ೬ ವಿಕೆಟ್ ಕಳೆದುಕೊಂಡು ೩೩ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಚೀಯಕಪೂವಂಡ ಹಾಗೂ ಚಾರಿಮಂಡ ತಂಡದ ನಡುವೆ ನಡೆದು ಚಾರಿಮಂಡ ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೬೦ ರನ್ ಗಳಿಸಿತು. ಚೀಯಕಪೂವಂಡ ೬ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಮೂರನೇ ಪಂದ್ಯವು ಮುದ್ದಿಯಡ ಹಾಗೂ ಬಲ್ಲಚಂಡ ತಂಡದ ನಡುವೆ ನಡೆದು ಮುದ್ದಿಯಡ ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸಿತು. ಬಲ್ಲಚಂಡ ತಂಡವು ೩ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿ ಸೋತಿತು. ನಾಲ್ಕನೇ ಪಂದ್ಯವು ಮಣವಟ್ಟಿರ ಹಾಗೂ ಪಾಲಚಂಡ ತಂಡದ ನಡುವೆ ನಡೆದು, ಮಣವಟ್ಟಿರ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿತು. ಪಾಲಚಂಡ ತಂಡವು ೫ ವಿಕೆಟ್ ಕಳೆದುಕೊಂಡು ೩೭ ರನ್ ಗಳಿಸಿ ಸೋಲು ಕಾಣುವಂತಾಯಿತು.
ಐದನೇ ಪಂದ್ಯವು ಬಟ್ಟಿಯಂಡ ಹಾಗೂ ಗೀಜಿಗಂಡ ತಂಡದ ನಡುವೆ ನಡೆದು ಗೀಜಿಗಂಡ ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೬೮ ರನ್ ಗಳಿಸಿತು. ಬಟ್ಟಿಯಂಡ ತಂಡವು ೪ ವಿಕೆಟ್ ಕಳೆದುಕೊಂಡು ೬೭ ರನ್ ಬಾರಿಸಿ ಸೋಲನ್ನು ಒಪ್ಪಿಕೊಂಡಿತು.
ಆರನೇ ಪಂದ್ಯವು ಕಾಣತಂಡ ಹಾಗೂ ಕಳ್ಳೆಂಗಡ ತಂಡದ ನಡುವೆ ನಡೆದು ಕಾಣತಂಡ ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೪೩ ರನ್ ಗಳಿಸಿತು. ಕಳ್ಳೆಂಗಡ ತಂಡವು ನಿಗದಿತ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿ ಸೋಲನ್ನು ಅನುಭವಿಸಿತು.
-ಹೆಚ್.ಕೆ. ಜಗದೀಶ್