ಸೋಮವಾರಪೇಟೆ, ಏ. ೨೯: ಇಲ್ಲಿನ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಂತರ ಕಾಲೇಜು ಕಲ್ಚರಲ್ ಫೆಸ್ಟ್ ೨೦೨೫ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಡಿ. ದೇವರಾಜ್ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಪೂರಕವಾದ ಇಂತಹ ಕಾರ್ಯಕ್ರಮ ಗಳು ಶಾಲಾ-ಕಾಲೇಜು ಗಳಲ್ಲಿ ಹೆಚ್ಚಾಗಿ ಆಯೋಜನೆಗೊಂಡಲ್ಲಿ, ಸಾಕಷ್ಟು ಪ್ರತಿಭೆಗಳಿಗೆ ತಮ್ಮಲ್ಲಿನ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಬಿ.ಡಿ. ಹರ್ಷ ಮಾತನಾಡಿ, ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಸಿಗದ ಕಾರಣ, ಎಲೆ ಮರೆಯ ಕಾಯಿಯಂತೆ ಇರುತ್ತಾರೆ. ಸಿಕ್ಕ ಅವಕಾಶ ವನ್ನು ಬಳಸಿಕೊಳ್ಳಬೇಕೆಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಕೆ.ಎ. ಯಾಕೂಬ್ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಗಳ ಬಗೆಗೆ ಎಚ್ಚರದಿಂದ ಇರಬೇಕಾಗಿದೆ ಎಂದರು. ಇದೇ ಸಂದರ್ಭ ನಿವೃತ್ತ ಪ್ರಾಂಶುಪಾಲರಾದ ಬಿ.ಎಂ. ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಸಿಡಿಸಿ ಸದಸ್ಯರಾದ ರಜಾಕ್ ಮತ್ತು ಸುರೇಂದ್ರ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಹೆಚ್. ಹುಚ್ಚೇಗೌಡ, ಸಂಯೋಜಕರಾದ ಎಂ.ಎA. ಸುನೀತ, ಸಹಾಯಕ ಪ್ರಾಧ್ಯಾಪಕರಾದ ಎಂ.ಎಸ್. ಶಿವಮೂರ್ತಿ, ವಿದ್ಯಾರ್ಥಿ ಗಳಾದ ನಾಸಿರ್, ಭವ್ಯ, ಐಶ್ವರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ, ಟ್ರೆಶರ್ ಹಂಟರ್, ಫೇಸ್ ಪೇಂಟಿAಗ್ ಮತ್ತು ವಿಡಿಯೋಗ್ರಫಿ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು, ಹತ್ತು ಕಾಲೇಜುಗಳ ೧೪ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಂತಿಮ ವಾಗಿ ಮಡಿಕೇರಿ ಜಿ.ಎಫ್.ಜಿ.ಸಿ. ಅವರು ಚಾಂಪಿಯನ್ ಮತ್ತು ವೀರಾಜ ಪೇಟೆಯ ಜಿ.ಎಫ್.ಜಿ.ಸಿ. ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದವು.