ಮಡಿಕೇರಿ, ಏ. ೨೯ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್ನಲ್ಲಿ ಇಂದು ಕಾಫಿ ಕ್ರಿಕೆರ್ಸ್, ದಿ ಎಲೈಟ್ ತಂಡಗಳು ಗೆಲವು ಸಾಧಿಸಿತು.
ಮೊದಲ ಪಂದ್ಯದಲ್ಲಿ ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆ ೧೦ ವಿಕೆಟ್ಗೆ ೧೧೨ ರನ್ ಬಾರಿಸಿತು. ಕಾಫಿ ಕ್ರಿಕೆರ್ಸ್ ತಂಡ ೧ ವಿಕೆಟ್ಗೆ ೧೧೪ ರನ್ಗಳಿಸಿ ಜಯಗಳಿಸಿತು. ವಿಕ್ಕಿ ತಳೂರು ೬೫ ರನ್ ಬಾರಿಸಿದರು.
ಎರಡನೇ ಪಂದ್ಯದಲ್ಲಿ ದಿ ಎಲೈಟ್ ತಂಡ ೬ ವಿಕೆಟ್ಗೆ ೧೭೪ ರನ್ ಗಳಿಸಿತು. ಕೂಗ್ ಹಾಕ್ಸ್ ತಂಡ ೮ ವಿಕೆಟ್ಗೆ ೧೫೪ ರನ್ ಗಳಿಸಿ ಸೋಲನುಭವಿಸಿತು. ಎಲೈಟ್ ಪರ ಬಿನಿಯಾನ ಗೋಫಿನಾತ್ ೭೫ ರನ್ ಬಾರಿಸಿದರು