ಮಡಿಕೇರಿ, ಏ. ೨೯: ಬೇತು ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬವು ಮೇ ೨ ರಿಂದ ೪ ರವರೆಗೆ ನಡೆಯಲಿದೆ. ಮೇ ೨ ರಂದು ರಾತ್ರಿ ೯ ಗಂಟೆಗೆ ಶ್ರೀ ದೇವರನ್ನು ಕೊಟ್ಟಿ ಹಾಡುವುದು, ಮೇ ೩ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಎತ್ತು ಪೋರಾಟ, ಅಂದು ರಾತ್ರಿ ೯.೩೦ ಗಂಟೆಗೆ ಶ್ರೀ ಶಾಸ್ತಾವು ದೇವರ ದೀಪಾರಾಧನೆ (ಅಂದಿ ಬೊಳಕು) ನಡೆಯಲಿದೆ. ಮೇ ೪ ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ನಡೆಯಲಿದೆ. ಮಧ್ಯಾಹ್ನ ೧೨.೩೦ ಗಂಟೆಗೆ ಅನ್ನದಾನ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಶ್ರೀ ವಿಷ್ಣು ಮೂರ್ತಿದೇವರ ಕೋಲ ನಡೆಯಲಿದೆ.