ಗೋಣಿಕೊಪ್ಪಲು,ಏ.೨೯: ಪೊನ್ನಂಪೇಟೆ ತಾಲೂಕು ಸವಿತ ಸಮಾಜದ ವತಿಯಿಂದ ಹಾತೂರು ಶಾಲಾ ಮೈದಾನದಲ್ಲಿ ೨ ದಿನಗಳ ಕಾಲ ಆಯೋಜನೆಗೊಂಡಿರುವ ೮ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ನಮ್ಮೆಗೆ ವೀರಾಜಪೇಟೆ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಚಾಲನೆ ನೀಡಿದರು.
ಸವಿತಾ ಸಮಾಜದ ೧೦ ತಂಡಗಳಾದ ಎಂಎಸ್ಎಸ್ ಮಡಿಕೇರಿ, ಎಂಬಿಎಸ್ಎಸ್ ಮಡಿಕೇರಿ, ಹಲ್ಚೀರ ಬಾಯ್ಸ್ ಈಚೂರು, ಸವಿತ ಸಮಾಜ ಕೈಕೇರಿ, ಅಪ್ಪಂಗಳ ರಾರ್ಸ್, ಬಲ್ಯಡ ಬ್ರದರ್ಸ್, ಉದ್ಬವ ಕ್ರಿಕೆರ್ಸ್ ಕೂಡಿಗೆ, ಟೀಮ್ ಶ್ಯಾಡೋಸ್ ಮಡಿಕೇರಿ ಹಾಗೂ ಸವಿತ ಸಮಾಜ ಪೊನ್ನಂಪೇಟೆ ತಂಡಗಳು ಪಂದ್ಯಾವಳಿಯಲ್ಲಿ ಪ್ರದರ್ಶನ ನೀಡಲಿವೆ. ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಸವಿತಾ ಸಮಾಜದ ಬಾಂಧವರು ಸಾಂಪ್ರದಾಯಿಕ ವಾಲಗ ಹಾಗೂ ತಳಿಯತಕ್ಕಿ ಬೊಳ್ಚದೊಂದಿಗೆ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.
ಪೊನ್ನAಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷÀ ಪೂಣಚೀರ ಎಸ್.ಮನೋಜ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ ಹಾಗೂ ಮಂಡೇಪAಡ ಸುಜಾ ಕುಶಾಲಪ್ಪ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಈ ನಾಡಿಗೆ ಸವಿತ ಸಮಾಜದ ಕೊಡುಗೆ ಅಪಾರವಾಗಿದೆ. ಕಲೆ ಸಂಸ್ಕೃತಿಗಳು ನಶಿಸಿ ಹೋಗದಂತೆ ಸಮಾಜ ಬಾಂಧವರು ಹೆಚ್ಚಿನ ನಿಗಾ ವಹಿಸಬೇಕು. ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ನಮ್ಮೆಯ ನಂತರ ಸಮಾಜದ ಇತರ ಬಾಂಧವರು ತಮ್ಮ ಸಮುದಾಯದ ಒಗ್ಗಟ್ಟು ಮೂಡಿಸಲು ಕ್ರೀಡೆಯನ್ನು ಆಯೋಜಿಸುತ್ತಾ ಬಂದಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.
ಪೊನ್ನಂಪೇಟೆ ಸವಿತಾ ಸಮಾಜದ ಗೌರವ ಅಧ್ಯಕ್ಷ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಯಂದಿರ ಆರ್.ಶಿವಾಜಿ ಪ್ರಾಸ್ತವಿಕವಾಗಿ ಮಾತನಾಡಿ ಸವಿತಾ ಸಮಾಜವು ಸಣ್ಣ ಸಮುದಾಯವಾಗಿದ್ದು ವಾರ್ಷಿಕವಾಗಿ ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನ ಕಳೆದ ೮ ವರ್ಷಗಳಿಂದ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೆ.ಎಸ್. ದೊರೇಶ್ ಮತ್ತಿತರರು ಉಪಸ್ಥಿತರಿದ್ದರು.
ಸವಿತಾ ಸಮಾಜದ ಪದಾಧಿಕಾರಿಗಳಾದ ಚಿಣ್ಣಿರ ಹರೀಶ್, ಹೆಚ್.ಜಿ.ಪವನ್, ನಾಯಂದಿರ ಸಜನ್, ಚೋದುವಂಡ ಪ್ರಿತುನ್ ಉತ್ತಪ್ಪ, ಚೋದುವಂಡ ಗಣಪತಿ, ಪೂಣಚ್ಚಿರ ಕಿಶೋರ್, ಹಲ್ಚಿರ ಸಾಗರ್, ಕಾವೇರಿ ಮನೆ ಅರ್ಚನ್, ಹಲ್ಚಿರ ನಿಶಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಪೂಣಚ್ಚಿರ ಸುಮನ್ ಮನೋಜ್ ಸ್ವಾಗತಿಸಿ, ತೆಕ್ಕಂಡಮAಡ ರಾಕ್ಮಿ ಪ್ರವೀಣ್, ಸುಮನ್ ಮನೋಜ್, ಪಲ್ಲವಿ ಗಣಪತಿ ನಿರೂಪಿಸಿ, ನಾಯಂದಿರ ಪಲ್ಲವಿ ಗಣಪತಿ ವಂದಿಸಿದರು.
-ಹೆಚ್.ಕೆ. ಜಗದೀಶ್