ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ಹಾಗೂ ಕರಿಚಾಮುಂಡಿ ದೇವಸ್ಥಾನದ ಬ್ರಹ್ಮಕಲಶ ಹಾಗೂ ದೈವಗಳ ನಡವಾಳಿಗಳು ದೇವಸ್ಥಾನದ ತಂತ್ರಿಗಳಾದ ಕಾಸರಗೋಡಿನ ವೇದಮೂರ್ತಿ ಶ್ರೀಪತಿ ಅರಳಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವರಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ ಹಾಗೂ ಸಂಜೆ ವಿವಿಧ ಧಾರ್ಮಿಕ ವಿಧಿವಿಧಾನಗಳು, ಶ್ರೀ ವನಶಾಸ್ತಾವು ದೇವರ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶ, ಆಶ್ಲೇಷ ಬಲಿ, ನಾಗನಿಗೆ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶ್ರೀ ಕರಿಚಾಮುಂಡಿ ಹಾಗೂ ಗುಳಿಗ ದೈವಗಳ ಕೋಲ ನಡೆಯಿತು. ನೆರೆದಿದ್ದ ಭಕ್ತರಿಗೆ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಅರ್ಚಕರ ಗೌರಿಶಂಕರ ಭಟ್, ದೇವಸ್ಥಾನದ ಗೌರವ ಅಧ್ಯಕ್ಷ ನಿಡ್ಯಮಲೆ ಮಾಧವ, ಅಧ್ಯಕ್ಷ ಕೆ.ಎ. ನಾರಾಯಣ, ಕಾರ್ಯದರ್ಶಿ ತಾರೇಶ್ ಹೊದ್ದೆಟ್ಟಿ, ಉಪಾಧ್ಯಕ್ಷ ಬಾಲಕೃಷ್ಣ ಕೆ.ಡಿ., ಮಾಹಿಳಾ ಸಮಿತಿ ಅಧ್ಯಕ್ಷೆ ಅಮ್ಮಣಿ ಕೆ.ಎಸ್., ಕಾರ್ಯದರ್ಶಿ ಅಹಲ್ಯ ಸುಜಿತ್ ಹಾಗೂ ಭಕ್ತಾದಿಗಳು ಹಾಜರಿದ್ದರು.ಪಾಲೂರು ಚಾಮುಂಡಿ ವಾರ್ಷಿಕ ಉತ್ಸವ
ನಾಪೋಕ್ಲು: ಇಲ್ಲಿಗೆ ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ವಾರ್ಷಿಕ ಉತ್ಸವದ ಅಂಗವಾಗಿ ಪ್ರತಿವರ್ಷ ನಡೆಯುವ ಚಾಮುಂಡಿ (ಚೌಂಡಿ) ತರೆ ಉತ್ಸವ ವಿಜೃಂಭಣೆಯಿAದ ನೆರವೇರಿತು. ಈ ಸಂದರ್ಭ ೫ ಮೂರ್ತಿಗಳ ಕೋಲ ಜರುಗಿದ ಬಳಿಕ ಚಾಮುಂಡಿ ತೆರೆ ಮೇಲೇರಿ ಸಾಂಪ್ರದಾಯಕವಾಗಿ ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥದಂತೆ ಹರಕೆ ಕಾಣಿಕೆ ಒಪ್ಪಿಸಿದರು.
ಕಿಬ್ರಿ ತೋಟದಲ್ಲಿ ವಾರ್ಷಿಕ ಪೂಜೋತ್ಸವ ಐಗೂರು: ಜಂಬೂರು ಗ್ರೂಪಿನ ಕಿಬ್ರಿ ತೋಟದ ವಾರ್ಷಿಕ ಪೂಜೋತ್ಸವು ಇಷ್ಟ ದೇವತೆಗಳಾದ ಬೆಟ್ಟದ ಈಶ್ವರ, ಚೌಡಿ ಅಮ್ಮ, ಭದ್ರಕಾಳಿ ಮತ್ತು ಸತ್ಯಪದಿನಾಜಿ ದೈವಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಯಿಂದ ಸಂಪನ್ನಗೊAಡಿತು. ಬೆಟ್ಟದ ಈಶ್ವರನಿಗೆ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಪ್ರಥಮ ಪೂಜೆ ಸಲ್ಲಿಸಿದರು. ಕೇಸರಿಮಯವಾಗಿ ಶೃಂಗಾರಗೊAಡಿದ್ದ ಚೌಡಿಯಮ್ಮ ದೇವಾಲಯದಲ್ಲಿ ಅರ್ಚಕರಾದ ರಾಮ್ ಭಟ್ ಮತ್ತು ಶಿವಪ್ಪ ನೇತೃತ್ವದಲ್ಲಿ ಹೋಮ, ಹವನ, ಪೂಜೆ, ಪ್ರಸಾದ ವಿನಿಯೋಗ ನಡೆದ ನಂತರ ಬಲಿ ಪೂಜೆ ನಡೆಯಿತು.
ಪರಿವಾರ ದೈವಗಳಾದ ಭದ್ರಕಾಳಿ ಮತ್ತು ಸತ್ಯಪದಿನಾಜಿ ದೈವಗಳಿಗೆ ಭಕ್ತಾದಿಗಳಿಂದ ಹರಕೆ ಪೂಜೆಯನ್ನು ಸಲ್ಲಿಸಲಾಯಿತು.ದಂಡಿನ ಮಾರಿಯಮ್ಮ-ಶ್ರೀ ಚಾಮುಂಡಿ ಉತ್ಸವ
ವೀರಾಜಪೇಟೆ: ವೀರಾಜಪೇಟೆಯ ಶಿವಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಶ್ರೀ ಚಾಮುಂಡಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಗಣಪತಿ ಹೋಮ, ಕಲಶ ಪೂಜೆ, ಮಹಾಪೂಜೆ ಮತ್ತು ಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಬಳಿಕ ದೇವರ ಪಲ್ಲಕ್ಕಿಯನ್ನು ಅಲಂಕೃತ ಮಂಟಪದೊAದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತದನಂತರ ರಾತ್ರಿ ದೇವಾಲಯದಲ್ಲಿ ಆರತಿ ಪೂಜೆ, ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಿತು.