ಸೋಮವಾರಪೇಟೆ,ಏ.೨೯: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಬಹುನಿರೀಕ್ಷಿತ ಅಮೃತ್-೨ ಯೋಜನೆಯ ಕಾಮಗಾರಿಯನ್ನು ಮಳೆಗಾಲ ಆರಂಭದೊಳಗೆ ಮುಕ್ತಾಯ ಗೊಳಿಸಬೇಕೆಂದು ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಆರಂಭವಾದರೆ ಕಾಮಗಾರಿ ನಡೆಸುವುದು ಅಸಾಧ್ಯ. ಈ ಹಿನ್ನೆಲೆ ಮಳೆಗಾಲ ಆರಂಭವಾ ಗುವುದರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಪಟ್ಟಣವಾಸಿಗಳಿಗೆ ಕುಸಿಯುವ ನೀರನ್ನು ಒದಗಿಸ ಬೇಕೆಂದು ಕರ್ನಾಟಕ ಅರ್ಬನ್ ವಾಟರ್ ಸಪ್ಲೆöÊ ಮತ್ತು ಡ್ರೆöÊನೇಜ್ ಬೋರ್ಡ್ನ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಅವರಿಗೆ ನಿರ್ದೇಶನ ನೀಡಿದರು.
ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಅಮೃತ್-೨ ಯೋಜನೆ ರೂ.೧೩.೨ ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಹಳೆಯ ಪೈಪ್‌ಲೈನ್‌ಗಳನ್ನು ಒಡೆದುಹಾಕಿದರೆ ತಕ್ಷಣಕ್ಕೆ ದುರಸ್ತಿ ಮಾಡುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರು ಒದಗಿಸಲಾಗದೇ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ವಾರ್ಡ್ ಸದಸ್ಯರ ಮಾತಿಗೆ ಯೋಜನೆ ಅನುಷ್ಠಾನದ ಸಿಬ್ಬಂದಿಗಳು ಬೆಲೆ ನೀಡುತ್ತಿಲ್ಲ ಎಂದು ಸದಸ್ಯರುಗಳು ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು, ಚರಂಡಿಗಳನ್ನು ಅಗೆದು ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಗುಂಡಿಗಳನ್ನು ಮುಚ್ಚುತ್ತಿಲ್ಲ. ಪರಿಣಾಮ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಗುಂಡಿಗಳನ್ನು ಮುಚ್ಚುವಂತೆ ಸಿಬ್ಬಂದಿಗಳಿಗೆ ತಿಳಿಸಿದರೆ ಹಾರಿಕೆಯ
(ಮೊದಲ ಪುಟದಿಂದ) ಉತ್ತರ ನೀಡುತ್ತಾರೆ ಎಂದು ಸದಸ್ಯರುಗಳಾದ ಪಿ.ಕೆ. ಚಂದ್ರು, ಸಂಜೀವ, ವೆಂಕಟೇಶ್, ಶೀಲಾ ಡಿಸೋಜ, ಮೃತ್ಯುಂಜಯ, ಡಿ.ಯು. ಕಿರಣ್ ಸೇರಿದಂತೆ ಇತರರು, ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
ಇದರೊAದಿಗೆ ಅಂಬೇಡ್ಕರ್ ಭವನ, ದೇವಾಲಯಗಳು, ಶಾಲೆಗಳು, ಅಂಗನವಾಡಿಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಅಂಗನವಾಡಿಗಳಿಗೆ ಪಂಚಾಯಿತಿಯಿAದಲೇ ಈವರೆಗೆ ಉಚಿತವಾಗಿ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಅಮೃತ್-೨ ಯೋಜನೆಯಡಿಯಲ್ಲೂ ಸಂಪರ್ಕ ಕಲ್ಪಿಸಬೇಕೆಂದು ಸಭೆ ಸೂಚಿಸಿತು.
ಪಟ್ಟಣದಲ್ಲಿರುವ ರಾಜಕಾಲುವೆ ಒತ್ತುವರಿಯಾಗಿದ್ದು, ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಶೀಲಾ ಡಿಸೋಜ ಹೇಳಿದರು. ಇದರೊಂದಿಗೆ ಜನವಸತಿ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಅರ್ಜಿಗಳು ಬಂದರೆ ಆಡಳಿತ ಮಂಡಳಿ ಸಭೆಯ ಗಮನಕ್ಕೆ ತರುವಂತೆ ಮುಖ್ಯಾಧಿಕಾರಿ ಸತೀಶ್ ಅವರಿಗೆ ತಿಳಿಸಿದರು.
ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ ಕನ್ನಡ ಭವನಕ್ಕೆ ಚೇರ್‌ಗಳನ್ನು ಅಳವಡಿಸುವ ಸಂಬAಧ ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪತ್ರ ಬರೆಯಲಾಗಿದ್ದು, ಯೋಜನಾ ಪಟ್ಟಿ ಸಲ್ಲಿಸುವಂತೆ ತಿಳಿಸಿದ್ದಾರೆ. ಮುಂದಿನ ೧೫ ದಿನಗಳ ಒಳಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಮುಖ್ಯಾಧಿಕಾರಿ ಸತೀಶ್ ಅವರು ಸಭೆಯ ಗಮನಕ್ಕೆ ತಂದರು.
ಪಟ್ಟಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೂ ಪಂಚಾಯಿತಿಯಿAದ ಸುಣ್ಣಬಣ್ಣ ಬಳಿಯಲಾಗುತ್ತಿದೆ. ಆದರೆ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಕನ್ನಡ ಧ್ವಜಸ್ಥಂಭಕ್ಕೆ ಬಣ್ಣ ಬಳಿಯುತ್ತಿಲ್ಲ. ಸಂತೆ ದಿನ ಈ ಧ್ವಜಸ್ಥಂಭಕ್ಕೆ ಟಾರ್ಪಲ್ ಕಟ್ಟಿ ವ್ಯಾಪಾರ ಮಾಡುತ್ತಿದ್ದಾರೆ. ಇದು ಕನ್ನಡಕ್ಕೆ ಮಾಡುವ ಅವಮಾನ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಾಣಾವರ ರಸ್ತೆಯಲ್ಲಿ ದುಸ್ಥಿತಿಯಲ್ಲಿರುವ ಬಸ್ ನಿಲ್ದಾಣವನ್ನು ಸುಸ್ಥಿತಿಗೆ ತರಬೇಕೆಂದು ನಾಮನಿರ್ದೇಶಿತ ಸದಸ್ಯ ಹೆಚ್.ಎ. ನಾಗರಾಜು ಒತ್ತಾಯಿಸಿದರು. ಶಾಸಕರ ವಿಶೇಷ ಅನುದಾನದಡಿ ವಾರ್ಡ್-೪ರಲ್ಲಿ ಕಾಮಗಾರಿಯ ಹೆಸರು ನಮೂದಿಸಿ ಚರಂಡಿ ನಿರ್ಮಾಣಕ್ಕೆ ೫ ಲಕ್ಷ ಮಂಜೂರಾಗಿದ್ದರೂ, ನಿಗದಿತ ಸ್ಥಳದಲ್ಲಿ ಕಾಮಗಾರಿ ನಡೆಸಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ವಿನು ಆರೋಪಿಸಿದರು.
ಬೇರೆ ಸ್ಥಳದಲ್ಲಿ ಕೆಲಸ ಮಾಡಲಾಗಿದೆ ಎಂದು ವಾರ್ಡ್ ಸದಸ್ಯ ಸಂಜೀವ ಹೇಳಿದರು. ಕಾಮಗಾರಿಯ ಹೆಸರು ಬದಲಾಯಿಸಿದ್ದು ಯಾಕೆ? ಯಾರಿಗೆ ಹೇಳಿ ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ ವಿನು ಅವರು, ಅನುಮೋದನೆ ಪಡೆದ ಸ್ಥಳದಲ್ಲಿಯೇ ಕಾಮಗಾರಿ ನಿರ್ವಹಿಸಬೇಕು ಎಂದು ಮುಖ್ಯಾಧಿಕಾರಿ ಹಾಗೂ ಅಭಿಯಂತರರನ್ನು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯರುಗಳಾದ ವೆಂಕಟೇಶ್, ಜೀವನ್, ಶುಭಕರ್, ಅಭಿಯಂತರ ಹೇಮಕುಮಾರ್ ಇದ್ದರು. - ವಿಜಯ್