*ಗೋಣಿಕೊಪ್ಪ, ಏ. ೨೯: ವೀರಾಜಪೇಟೆ ತಾಲೂಕು ಸಹಕಾರಿ ನೌಕರರ ಸಹಕಾರ ಸಂಘದ ನೌಕರರ ಗ್ರಾಮೀಣ ಕ್ರೀಡಾಕೂಟ ಮೇ ೧ರಂದು ಗೋಣಿಕೊಪ್ಪ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.
ಕ್ರೀಡಾಕೂಟದ ಉದ್ಘಾಟನೆಯನ್ನು ತಾಲೂಕು ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಮಾಳೇಟಿರ ಎಸ್ ಕಾಳಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಫಿ ಬೆಳಗಾರ ಪಿ. ಲಕ್ಷö್ಮಣ್ ಉದ್ಘಾಟಿಸಲಿದ್ದಾರೆ.
ಕ್ರೀಡಾ ಕೂಟದಲ್ಲಿ ಪುರುಷರಿಗೆ, ಮತ್ತು ಮಹಿಳೆಯರಿಗೆ ೨೦೦ ಮೀಟರ್ ಓಟ, ೧೦೦ ಮೀಟರ್ ಓಟ, ಹಗ್ಗ ಜಗ್ಗಾಟ, ವಿಷದ ಚೆಂಡು, ಭಾರತ ಕಲ್ಲು ಎಸೆಯುವುದು, ಬಕೆಟ್ ಇಂದ ಬಾಲ್ , ವಾಲಗದ ಕುಣಿತ, ಮತ್ತು ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮಕ್ಕಳಿಗೆ ೧೦೦ ಮತ್ತು ೨೦೦ ಮೀಟರ್ ಓಟದ ಸ್ಪರ್ಧೆಯ ಜೊತೆಗೆ ಚೀಲ ಕಟ್ಟಿ ಓಟ, ವಾಲಗದ ಕುಣಿತ ಮತ್ತು ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಾಳೇಟಿರ ಎಸ್ ಕಾಳಯ್ಯ ಮಾಹಿತಿ ನೀಡಿದ್ದಾರೆ.
ಸಂಜೆ ಸಮಾರೋಪ ಸಮಾರಂಭ ಶಾಸಕ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ , ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೋಡಂದೇರ ಪಿ ಗಣಪತಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.