ಗೋಣಿಕೊಪ್ಪಲು, ಏ. ೨೯: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಮೈದಾನ ೨ರಲ್ಲಿ ೨ನೇ ದಿನದ ಮಹಿಳಾ ಕ್ರಿಕೆಟ್ನಲ್ಲಿ ೫ ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯವು ಮೇವಡ ಹಾಗೂ ಚಿರಿಯಪಂಡ ನಡುವೆ ನಡೆಬೇಕಿತ್ತಾದರೂ ಮೇವಡ ತಂಡ ಗೈರಾದ ಹಿನ್ನೆಲೆಯಲ್ಲಿ ಚಿರಿಯಪಂಡ ತಂಡಕ್ಕೆ ವಾಕ್ ಓವರ್ ಸಿಕ್ಕಿತು.
ಎರಡನೇ ಪಂದ್ಯವು ಆದೇಂಗಡ ಹಾಗೂ ಅಲ್ಲುಮಾಡ ಮಹಿಳಾ ತಂಡದ ನಡುವೆ ನಡೆದು ಅಲ್ಲುಮಾಡ ನಿಗದಿತ ಓವರ್ನಲ್ಲಿ ೧ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿತು. ಆದೇಂಗಡ ನಿಗದಿತ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು ೫೧ ರನ್ ಕಲೆ ಹಾಕಿ ಸೋಲು ಅನುಭವಿಸಿತು.
ಮೂರನೇ ಪಂದ್ಯವು ಮಾಳೇಟಿರ (ಕೆದಮುಳ್ಳೂರು) ಹಾಗೂ ಗೀಜಿಗಂಡ ತಂಡಗಳ ನಡುವೆ ನಡೆದು, ಮಾಳೇಟಿರ ನಿಗದಿತ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು ೭೯ ರನ್ಗಳಿಸಿತು. ಗೀಜಿಗಂಡ ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್ನಲ್ಲಿ ೫ ವಿಕೆಟ್ ಕಳೆದುಕೊಂಡು ೩೦ ರನ್ಗಳಿಸಿ ಸೋಲನ್ನು ಅನುಭವಿಸಿತು. ನಾಲ್ಕನೇ ಪಂದ್ಯವು ಅಣ್ಣಳಮಾಡ (ಬಿರುನಾಣಿ) ಹಾಗೂ ತೆಕ್ಕಡ ಮಹಿಳಾ ತಂಡಗಳ ನಡುವೆ ನಡೆದು, ಅಣ್ಣಳಮಾಡ ನಿಗದಿತ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು ೨೬ ರನ್ ಗಳಿಸಿತು. ತೆಕ್ಕಡ ನಿಗದಿತ ಓವರ್ನಲ್ಲಿ ೨ ವಿಕೆಟ್ ಕಳೆದುಕೊಂಡು ೨೫ ರನ್ ಗಳಿಸಿ ಸೋಲನ್ನು ಅನುಭವಿಸಿತು.
ಐದನೇ ಪಂದ್ಯವು ಕಾಡ್ಯಮಾಡ ಹಾಗೂ ಕಡೇಮಾಡ ತಂಡಗಳ ನಡುವೆ ನಡೆಯಬೇಕಿತ್ತಾದರೂ ಕಾಡ್ಯಮಾಡ ಗೈರಾದ ಹಿನ್ನೆಲೆಯಲ್ಲಿ ಕಡೇಮಾಡ ತಂಡಕ್ಕೆ ವಾಕ್ ಓವರ್ ಸಿಕ್ಕಿತು. -ಹೆಚ್.ಕೆ. ಜಗದೀಶ್