ಕಣಿವೆ, ಏ. ೨೮: ಅಂಗಡಿಯಿAದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಶಾಲನಗರ ಪಟ್ಟಣದ ರೈತ ಸಹಕಾರ ಭವನದ ಬಳಿ ಸೋಮವಾರ ನಡೆದಿದೆ.

ಬೈಚನಹಳ್ಳಿ ನಿವಾಸಿ ಕೃಷಿಕ ಬಿ.ಬಿ. ಮೋಹನ್ ಎಂಬವರು ಮೃತ ವ್ಯಕ್ತಿ. ಸ್ಥಳಕ್ಕೆ ಕುಶಾಲನಗರ ಚೆಸ್ಕಾಂನ ಸಹಾ ಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಪುರಸಭಾ ಸದಸ್ಯ ಜಗದೀಶ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಬೈಚನ ಹಳ್ಳಿ ನಿವಾಸಿಗಳು ಪ್ರತಿಭಟನೆ ನಡೆಸಿ ದರು. ಘಟನೆಯ ಸಂಬAಧ ಕುಶಾಲ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಮೋಹನ್ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.