ಮಡಿಕೇರಿ, ಏ. ೨೮: ಹೊದ್ದೂರು ಗ್ರಾಮದ ಅಮ್ಮಣಂಡ ಮತ್ತು ಐರಿ ಒಕ್ಕಡ ಆಶ್ರಯದಲ್ಲಿ ನಡೆಸಲಾದ ೧೧ನೇ ವರ್ಷದ ಐರಿ ಜನಾಂಗದ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದಲ್ಲಿ ವಿಕೆಎಫ್ ಕ್ರಿಕೇರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಾಲೇರ ಸ್ಟೆçöÊಕರ್ಸ್ ತಂಡ ರನ್ನರ್ಸ್ಗೆ ತೃಪ್ತಿಪಟ್ಟುಗೊಂಡಿತ್ತು.
ಮೂರ್ನಾಡು ಬಾಚೇಟ್ಟಿರ ದಿ. ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆದ ಅಮ್ಮಣಂಡ ಕಪ್ ಕ್ರಿಕೆಟ್ ಅಂತಿಮ ಪಂದ್ಯಾಟದಲ್ಲಿ ಮಾಲೇರ ಸ್ಟೆçöÊಕರ್ಸ್ ತಂಡವನ್ನು ಸೋಲಿಸುವ ಮೂಲಕ ವಿ.ಕೆ. ಚಾಂಪಿಯನ್ ಪಟ್ಟ ಗಳಿಸಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಐವತೋಕ್ಲು ಬಬ್ಬೀರ ಒಕ್ಕ ಪ್ರಥಮ ಸ್ಥಾನ ಗಳಿಸಿದರೆ, ಐರಿ ¸ಮಾಜ, ಅರಮೇರಿ ದ್ವಿತೀಯ ಸ್ಥಾನಗಳಿಸಿತು. ಹಿರಿಯ ವಿಭಾಗದ ಓಟದಲ್ಲಿ ಬಬ್ಬೀರ ಸಾಬು ತಿಮ್ಮಯ್ಯ ಪ್ರಥಮ ಹಾಗೂ ಐನಂಗಡ ಮುತ್ತಣ್ಣ, ಬೇಟೋಳಿ ದ್ವಿತೀಯ ಸ್ಥಾನ ಗಳಿಸಿದರು. ಮಕ್ಕಳ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಅನ್ನಂಬೀರ ಲೀಕ್ಷ (ಪ್ರ), ಕಳ್ಳಿಕಂಡ ಶೀತಲ್ (ದ್ವಿ) ಸ್ಥಾನ ಪಡೆದರು.
ಕ್ರಿಕೆಟ್ ಅಂತಿಮ ಪಂದ್ಯಾಟಕ್ಕೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಚಾಲನೆ ನೀಡಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು - ಗೆಲುವು ಮುಖ್ಯವಲ್ಲ. ಒಂದಾಗಿ ಭಾಗವಹಿಸುವುದು ಮುಖ್ಯ ಎಂದರಲ್ಲದೆ, ಜನಾಂಗದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ವಹಿಸಿದ್ದರು. ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಭಾಗವಹಿಸಿ ಮಾತನಾಡಿ, ಕೊಡವ ಭಾಷೆಯನ್ನು ಮಾತನಾಡುವ, ಸಂಸ್ಕೃತಿ ಪಾಲನೆ ಮಾಡುವ ೨೧ ಜನಾಂಗವನ್ನು ಒಂದೆಡೆ ಸೇರಿಸುವಂತಹ ಸೂಕ್ತ ವೇದಿಕೆ ನಿರ್ಮಾಣವಾಗಬೇಕು ಎಂದರು.
ವೇದಿಕೆಯಲ್ಲಿ ಎಫ್ಎಂಸಿ ಕಾಲೇಜು ಕೊಡವ ಎಂಎ ಬೋಧಕರಾದ ಅಣ್ಣಾಳಪಂಡ ಧರ್ಮಶೀಲ ಅಜಿತ್, ಚಿಕ್ಕಮಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಲೇರ ಚರಣ್, ವೀರಾಜಪೇಟೆ ಉಪ ತಹಶೀಲ್ದಾರ್ ಅಂಜಪAಡ ಪ್ರಕಾಶ್, ಹಿರಿಯ ವಿಭಾಗೀಯ ಅಭಿಯಂತರ ಅಪ್ಪಚಂಡ ಸುರೇಶ್ ಅಪ್ಪಣ್ಣ, ಅಂತರರಾಷ್ಟಿçÃಯ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ, ವಕೀಲರಾದ ಅಣ್ಣಾಳಪಂಡ ಧನು ಗಣೇಶ್, ಕಾರುಗುಂದ ನಿವೃತ್ತ ಸೈನಿಕ ಬಬ್ಬೀರ ಎ. ತಿಮ್ಮಯ್ಯ, ಹೊಸ್ಕೇರಿ ಕರಕುಶಲಕರ್ಮಿ ಐನಂಗಡ ಉದಯಕುಮಾರ್, ನಿವೃತ್ತ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಅಮ್ಮಂಡ ಯು. ಪೂಣಚ್ಚ, ಅಮ್ಮಣಂಡ ಒಕ್ಕ ಪಟ್ಟೆದಾರ ಸುಬ್ಬಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜನಾಂಗದ ೧೨ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. ೯೦ ಕ್ಕಿಂತ ಅಧಿಕ ಅಂಕಗಳಿಸಿ ಉತ್ತೀರ್ಣರಾದ ಕಾಮೆಯಂಡ ಲಾಂಛನ, ದುಗ್ಗಂಡ ಪಾರ್ವತಿ, ಮೂಕೈರೀರ ಟಿ. ಕೃಷಿ, ಐರೀರ ಅನನ್ಯ ಅಕ್ಕಮ್ಮ ಅವರನ್ನು ಸನ್ಮಾನಿಸಲಾಯಿತು. ದಿವ್ಯಾ ಚೇತನ್ ಸ್ವಾಗತಿಸಿ, ಸಹನಾ ಪೂಣಚ್ಚ ವಂದಿಸಿದರು. ಕೂಡಂಡ ಸಾಬಾ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು.
೨೦೨೬ಕ್ಕೆ ಕುಂದೈರಿರ ಕಪ್
ಐರಿ ಕಪ್ ಕ್ರಿಕೆಟ್ ಪಂದ್ಯಾಟದ ೨೬ನೇ ವರ್ಷದ ಸಾರಥ್ಯವನ್ನು ನಾಪೋಕ್ಲು ಕುಂದೈರಿರ ಒಕ್ಕ ವಹಿಸಲಿದ್ದಾರೆ. ಅಮ್ಮಣಂಡ ಕಪ್ನ ಸಮಾರೋಪ ಸಮಾರಂಭದ ಸಂದರ್ಭ ಕಂದೈರಿರ ಕುಟುಂಬಕ್ಕೆ ಐರಿ ಸಮಾಜ ಧ್ವಜ ಹಸ್ತಾಂತರ ಮಾಡಲಾಯಿತು.