ಮಡಿಕೇರಿ, ಏ. ೨೮: ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು.
ಸಭೆಯಲ್ಲಿ ಅಸೋಸಿಯೇಷನ್‌ನ ಮಡಿಕೇರಿ ತಾಲೂಕು ಅಧ್ಯಕ್ಷ ಪೈಕೇರ ಮನೋಹರ್, ಕಾರ್ಯದರ್ಶಿ ವೇಣು, ಜಿಲ್ಲಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಪ್ರದೀಪ್, ಹಿರಿಯ ಸನ್ನದುದಾರ ಮಾಚಯ್ಯ, ರಮೇಶ್ ಹಾಗೂ ಇತರರು ಹಾಜರಿದ್ದರು.
ಸಭೆಯಲ್ಲಿ ಮುಖ್ಯವಾಗಿ ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಪದಾಧಿಕಾರಿಗಳಾಗಿ ನವೀನ್ ಉತ್ತಯ್ಯ, ಬಿದ್ದಪ್ಪ, ಪ್ರಸಾದ್, ಟಿ.ಹೆಚ್. ಗಣೇಶ್, ಪಿ.ಟಿ. ಉಣ್ಣಿಕೃಷ್ಣ, ಗೋಕುಲ್ ಉತ್ತಯ್ಯ, ಆರ್.ಎಸ್. ಬಾಬು ನಾಯ್ದು, ಬಿ.ಎ. ಮಹಾಬಲ ಅವರನ್ನು ಆಯ್ಕೆ ಮಾಡಲಾಯಿತು.