ಗೋಣಿಕೊಪ್ಪಲು, ಏ. ೨೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಂಗವಾಗಿ ಮಹಿಳಾ ಕ್ರಿಕೆಟ್ ಆರಂಭವಾಯಿತು.

೬೪ ಮಹಿಳಾ ತಂಡಗಳು ನೊಂದಾವಣೆಯಾಗಿದ್ದು ಮೊದಲ ದಿನ ೪ ಮಹಿಳಾ ತಂಡಗಳು ಶುಭಾರಂಭ ಮಾಡಿದವು.

ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದೊಂದಿಗೆ ೨೩ ನೇ ವರ್ಷದ ಚೆಕ್ಕೇರ ಕ್ರಿಕೆಟ್ ನಮ್ಮೆ ಅಂಗವಾಗಿ ೨ ನೇ ವರ್ಷದ ಮಹಿಳಾ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಲಾಯಿತು.

ಚೆಕ್ಕೇರ ಕ್ರಿಕೆಟ್ ನಮ್ಮೆಯ ಅಧ್ಯಕ್ಷರಾದ ಚೆಕ್ಕೇರ ಚಂದ್ರ ಪ್ರಕಾಶ್ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಸಮಾಜ ಸೇವಕಿ ಅಜ್ಜಿಕುಟ್ಟಿರ ಕಾಂಚನ ಪೊನ್ನಣ್ಣ, ಮೀನು ಮಾರಾಟ ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಚೆಕ್ಕೇರ ದರ್ಶನ್ ಪ್ರಮೋದ್, ಹುದಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಪ್ಪಣಮಾಡ ನಿವ್ಯ ಕಾವೇರಮ್ಮ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಸದಾ ಒತ್ತಡದ ನಡುವೆ ಇರುವ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಒತ್ತಡದಿಂದ ಹೊರಬರಬಹುದಾಗಿದೆ ಎಂದು ಗಣ್ಯರು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಚೆಕ್ಕೇರ ಕುಟುಂಬದ ತಕ್ಕ ಚೆಕ್ಕೇರ ರಾಜೇಶ್, ಅಧ್ಯಕ್ಷರಾದ ಚೆಕ್ಕೇರ ಕಾಶಿ ಕಾಳಯ್ಯ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಚೇನಂಡ ಹಾಗೂ ಕನ್ನಿಂಗಡ ಮಹಿಳಾ ತಂಡದ ನಡುವಿನ ಪಂದ್ಯದಲ್ಲಿ ಚೇನಂಡ ತಂಡವು ನಿಗದಿತ ಓವರ್ ನಲ್ಲಿ ೧ ವಿಕೆಟ್ ಕಳೆದುಕೊಂಡು ೩೩ ರನ್ ಗಳಿಸಿತು.

ಕನ್ನಿಕಂಡ ತಂಡವು ನಿಗದಿತ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೨೮ ರನ್ ಗಳಿಸಿ ಸೋಲು ಅನುಭವಿಸಿತು.

ಎರಡನೇ ಪಂದ್ಯವು ಬೊಳ್ಳೆರ ಹಾಗೂ ಕರ್ತಮಾಡ ಮಹಿಳಾ ತಂಡದ ನಡುವೆ ನಡೆದು ಕರ್ತಮಾಡ ಮಹಿಳಾ ತಂಡವು ನಿಗದಿತ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೩ ರನ್ ಗಳಿಸಿತು.

ಬೊಳ್ಳೆರ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸಿ ಸೋಲು ಕಂಡಿತು.

ಮೂರನೇ ಪಂದ್ಯವು ಮಂಡAಗಡ ಹಾಗೂ ತೀತಮಾಡ ಮಹಿಳಾ ತಂಡಗಳ ನಡುವೆ ನಡೆದು, ಮಂಡAಗಡ ತಂಡ ನಿಗದಿತ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೫೨ ರನ್‌ಗಳಿಸಿತು.

ತೀತಮಾಡ ತಂಡವು ನಿಗದಿತ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಸೋಲನುಭವಿಸಿತು.

ನಾಲ್ಕನೇ ಪಂದ್ಯವು ಬಾಳೆಯಡ ಹಾಗೂ ಕಾಣತಂಡ ಮಹಿಳಾ ತಂಡಗಳ ನಡುವೆ ನಡೆದು, ಕಾಣತಂಡ ತಂಡವು ನಿಗದಿತ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ಭರ್ಜರಿ ೧೦೪ ರನ್‌ಗಳಿಸಿತು.

ಬಾಳೆಯಡ ತಂಡವು ನಿಗದಿತ ಓವರ್ ನಲ್ಲಿ ೪ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿ ಸೋಲನ್ನು ಅನುಭವಿಸಿತು. -ಹೆಚ್.ಕೆ. ಜಗದೀಶ್