ಗೋಣಿಕೊಪ್ಪಲು, ಏ.೨೮: ಸೂಪರ್ ಓವರ್‌ನಲ್ಲಿ ಬಾನಂಡ ಕುಟುಂಬವು ಗೆಲುವು ಸಾಧಿಸುವ ಮೂಲಕ ೧೦ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಕೊಂಡಿAಜಮ್ಮನ ಕ್ರಿಕೆಟ್ ಕಪ್‌ನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತು. ಅಮ್ಮತ್ತಿರ ಕುಟುಂಬವು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ೨ನೇ ರನ್ನರ್ ಅಪ್ ಪ್ರಶಸ್ತಿಯನ್ನು ಹೆಮ್ಮಚ್ಚಿಮನೆ ಕುಟುಂಬ ಪಡೆದುಕೊಂಡಿತು.

ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಅಂತಿಮ ಪಂದ್ಯಾವಳಿಯಲ್ಲಿ ಟಾಸ್ ಗೋಣಿಕೊಪ್ಪಲು, ಏ.೨೮: ಸೂಪರ್ ಓವರ್‌ನಲ್ಲಿ ಬಾನಂಡ ಕುಟುಂಬವು ಗೆಲುವು ಸಾಧಿಸುವ ಮೂಲಕ ೧೦ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಕೊಂಡಿAಜಮ್ಮನ ಕ್ರಿಕೆಟ್ ಕಪ್‌ನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತು. ಅಮ್ಮತ್ತಿರ ಕುಟುಂಬವು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ೨ನೇ ರನ್ನರ್ ಅಪ್ ಪ್ರಶಸ್ತಿಯನ್ನು ಹೆಮ್ಮಚ್ಚಿಮನೆ ಕುಟುಂಬ ಪಡೆದುಕೊಂಡಿತು.

ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಅಂತಿಮ ಪಂದ್ಯಾವಳಿಯಲ್ಲಿ ಟಾಸ್ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಅಮ್ಮಕೊಡವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾಡಿಯಮ್ಮಂಡ, ಬಾಚಮಂಡ, ಪಡಿಞರಂಡ,

(ಮೊದಲ ಪುಟದಿಂದ) ಅಚ್ಚಿಯಂಡ, ಹೆಮ್ಮಚ್ಚಿಮ್ಮನೆ, ನಾಳಿಯಮಂಡ (ಚೇರಂಬಾಣೆ) ಬಾನಂಡ, ಅಮ್ಮತ್ತಿರ, ಮನ್ನಕ್ಕಮನೆ, ಬಲ್ಯಂಡ, ನಾಳ್ಯಮಂಡ, ಪುತ್ತಾಮನೆ, ಚೊಟ್ಟೋಳಿಯಮಂಡ, ಅಂಡಮಾಡ, ಗುಂಬಿರ, ನೆರೆಯಮ್ಮಂಡ, ಚಿಲ್ಲಜಮ್ಮಂಡ ಹಾಗೂ ಕೊಂಡಿAಜಮ್ಮನ ಕುಟುಂಬಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಬಾನಂಡ ಚಿರು, ಪುತ್ತಾಮನೆ ಪೂಜಾ ಶರಣ್ ವೀಕ್ಷಕ ವಿವರಣೆ ನೀಡಿದರು.

೨೫ ಸಾವಿರ ಘೋಷಣೆ

ಯಶಸ್ವಿ ಕ್ರಿಕೆಟ್ ನಮ್ಮೆಯನ್ನು ಮುಗಿಸಿದ ಹಿನ್ನಲೆಯಲ್ಲಿ ಕೊಂಡಿAಜಮ್ಮನ ಕುಟುಂಬವು ಅಖಿಲ ಅಮ್ಮಕೊಡವ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಲು ಪಂದ್ಯಾವಳಿಯಲ್ಲಿ ಉಳಿದ ಹಣದಲ್ಲಿ ೨೫ ಸಾವಿರ ರೂ. ಹಣವನ್ನು ಸಮಾಜದ ಅಭಿವೃದ್ದಿಗೆ ನೀಡುವುದಾಗಿ ಸಭೆಯಲ್ಲಿ ಕೊಂಡಿAಜಮ್ಮನ ಕುಟುಂಬದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಾಲಕೃಷ್ಣ ಘೋಷಣೆ ಮಾಡಿದರು.

ಒಡಿಕತ್ತಿ ಕೊಡುಗೆ

ಕಳೆದ ೩ ವರ್ಷಗಳಿಂದ ನಾಪೋಕ್ಲು ಗ್ರಾಮದ ಪಾಡಿಯಮ್ಮಂಡ ಸುಭಾಶ್(ಜಾಲಿ) ಅವರು ವಿಜೇತ ತಂಡಕ್ಕೆ ಕೊಡವ ಸಾಂಪ್ರದಾಯಿಕ ಒಡಿಕತ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ಬಾರಿಯೂ ವಿಜೇತ ತಂಡವಾದ ಬಾನಂಡ ಕುಟುಂಬಕ್ಕೆ ಒಡಿ ಕತ್ತಿಯನ್ನು ನೀಡುವ ಮೂಲಕ ಗಮನ ಸೆಳೆದರು.

೨೦೨೬ಕ್ಕೆ ಬಾನಂಡ ಕಪ್

ಮುಂದಿನ ೨೦೨೬ನೇ ಸಾಲಿನಲ್ಲಿ ಬಾನಂಡ ಕುಟುಂಬವು ಕ್ರಿಕೆಟ್ ಕಪ್ ನಡೆಸಲು ಮುಂದೆ ಬಂದಿದೆ. ಈ ಬಗ್ಗೆ ಬಾನಂಡ ಕುಟುಂಬಸ್ಥರ ಅಧ್ಯಕ್ಷ ಬಾನಂಡ ಪ್ರಥ್ವಿ ಘೋಷಣೆ ಮಾಡಿದರು. ಸಾಂಪ್ರದಾಯಿಕವಾಗಿ ಕೊಂಡಿAಜಮ್ಮನ ಕುಟುಂಬಸ್ಥರು ಧ್ವಜವನ್ನು ಬಾನಂಡ ಕುಟುಂಬಕ್ಕೆ ಹಸ್ತಾಂತರ ಮಾಡಿದರು.

ಬಹುಮಾನಗಳು

ವಿಜೇತ ತಂಡಕ್ಕೆ ೩೦ ಸಾವಿರ ರೂ. ನಗದು ಹಾಗೂ ಪಾರಿತೋಷಕ ಅಲ್ಲದೆ ರೋಲಿಂಗ್ ಟ್ರೋಫಿ,ರನ್ನರ್ ಅಪ್ ತಂಡಕ್ಕೆ ೨೦ ಸಾವಿರ ನಗದು ಹಾಗೂ ಪಾರಿತೋಷಕ, ೨ನೇ ರನ್ನರ್ ಅಪ್ ತಂಡಕ್ಕೆ ೧೦ ಸಾವಿರ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು. ಕೊಂಡಿAಜಮ್ಮನ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಅಧ್ಯಕ್ಷರಾದ ಕೆ.ಎ. ಪೊನ್ನಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಂಡಿAಜಮ್ಮನ ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾಲಕೃಷ್ಣ ನಾಡಿನ ದಾನಿಗಳು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ. ಜನಾಂಗದ ಒಗ್ಗೂಡುವಿಕೆ ಸದಾ ಮುಂದುವರೆಯಲಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷÀ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಜನಾಂಗದ ಒಗ್ಗೂಡುವಿಕೆಗೆ ಕ್ರೀಡೆ ಸಹಕಾರಿ ಯಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದರಿಂದ ಸಮಾಜದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದರು. ಜ

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ವಿ ಮಾತನಾಡಿ ಯಾವುದೇ ಕುಟುಂಬ ಕ್ರಿಕೆಟ್ ನಡೆಸಲು ಮುಂದೆ ಬಂದಲ್ಲಿ ಅಂತಹ ಕುಟುಂಬಗಳಿಗೆ ಅಖಿಲ ಅಮ್ಮಕೊಡವ ಸಮಾಜ ಸಹಕಾರ ನೀಡಲಿದೆ ಎಂದರು.

ವೇದಿಕೆಯಲ್ಲಿ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ನಾಳ್ಯಮ್ಮಂಡ ಉಮೇಶ್ ಕೇಚಮಯ್ಯ, ಅಮ್ಮಕೊಡವ ಸಮಾಜದ ಬೆಂಗಳೂರು ಅಧ್ಯಕ್ಷರಾದ ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್,ಮೈಸೂರಿನ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ಎನ್.ಯು.ಸಂತೋಷ್, ಮಾಯ ಮುಡಿ ಕಂಗಳತ್‌ನಾಡ್ ಅಮ್ಮಕೊಡವ ಸಮಾಜ ಅಧ್ಯಕ್ಷರಾದ ಬಾನಂಡ ಆಶಾ ಸೂದನ್, ಕೋತೂರು ಅನ್ನ ಪೂರ್ಣೇಶ್ವರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷರಾದ ಶ್ವೇತಾ ರವಿ ಮನ್ನಕ್ಕಮನೆ,ಕೋತೂರು ಶ್ರೀಕೃಷ್ಣ ಅಮ್ಮಕೊಡವ ಸಂಘದ ಅಧ್ಯಕ್ಷರಾದ ರವಿ ಮನ್ನಕ್ಕಮನೆ, ಪೊನ್ನಂಪೇಟೆ ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷರಾದ ರೇವತಿ ಪರಮೇಶ್ವರ, ಮಡಿಕೇರಿಯ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ನಾಳ್ಯಮಂಡ ಪಾಲಾಕ್ಷ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಕೊಂಡಿAಜಮ್ಮನ ಪಲ್ಲವಿ ಸ್ವಾಗತಿಸಿ ಕೊಂಡಿAಜಮ್ಮನ ಉಷಾ,ಕವಿತ, ನಿರೂಪಿಸಿ- ಕೊಂಡಿAಜಮ್ಮನ ಕಿಶೋರ್ ಕುಮಾರ್ ವಂದಿಸಿದರು. - ಹೆಚ್.ಕೆ. ಜಗದೀಶ್