ಮಡಿಕೇರಿ, ಏ.೨೮ : ೬೬/೩೩/೧೧ಕೆ.ವಿ ವಿ.ವಿ ಕೇಂದ್ರ ವೀರಾಜಪೇಟೆಯಿಂದ ಹೊರಹೊಮ್ಮುವ ೩೩/೧೧ಕೆ.ವಿ ಸಿದ್ದಾಪುರ ಮಾರ್ಗದಲ್ಲಿ ಮಾರ್ಗದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿAದ ೩೩/೧೧ಕೆ.ವಿ ಸಿದ್ದಾಪುರ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ೧೧ ಕೆ.ವಿ ಸಿದ್ದಾಪುರ, ನೆಲ್ಲಿಹುದಿಕೇರಿ, ಮೇಕೂರು, ಇಂಜಿಲಗೆರೆ, ಗುಹ್ಯ, ಮಾಲ್ದಾರೆ ಫೀಡರ್‌ನಲ್ಲಿ ತಾ. ೨೯ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಸಿದ್ದಾಪುರ, ಗುಹ್ಯ, ಮಾಲ್ದಾರೆ, ಕರಡಿಗೋಡು, ಇಂಜಿಲಗೆರೆ, ತೂಪನಕೊಲ್ಲಿ, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.