ಮಡಿಕೇರಿ, ಏ.೨೮ : ಮಡಿಕೇರಿ ತಾಲೂಕು ಬಂಟರ ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷ ರಾಗಿ ಬಿ.ಆರ್. ಸದಾಶಿವ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯ ದರ್ಶಿಯಾಗಿ ಚಂದ್ರಶೇಖರ್ ರೈ ಕತ್ತಲೆಕಾಡು, ಖಜಾಂಚಿಯಾಗಿ ಬಿ.ಬಿ. ದಿನೇಶ್ ರೈ, ಗೌರವಾಧ್ಯಕ್ಷರಾಗಿ ರಮೇಶ್ ರೈ, ಉಪಾಧ್ಯಕ್ಷರಾಗಿ ಬಿ.ಕೆ. ವಿಠಲ್ ರೈ, ಗಿರೀಶ್ ರೈ ಮೂರ್ನಾಡು, ಸಹ ಖಜಾಂಚಿಯಾಗಿ ಬಿ.ಕೆ. ಸುರೇಶ್ ರೈ, ಸಹ ಕಾರ್ಯದರ್ಶಿಯಾಗಿ ವಿದ್ಯಾಧರ ರೈ ಗಾಳಿಬೀಡು ಹಾಗೂ ಗೌರವ ಸಲಹೆಗಾರರಾಗಿ ಬಿ.ಸಿ. ಹರೀಶ್ ರೈ ಆಯ್ಕೆಯಾದರು. ತಾಲೂಕು ಸಂಘದ ನಿರ್ಗಮಿತ ಅಧ್ಯಕ್ಷ ರಮೇಶ್ ರೈ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿಠಲ್ ರೈ ಸ್ವಾಗತಿಸಿ, ದಿನೇಶ್ ರೈ ವಂದಿಸಿದರು.