ಮಡಿಕೇರಿ, ಏ. ೨೭: ಕೊಡಗು ಗೌಡ ಯುವವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಇಂದು ಕಾಫಿ ಕ್ರಿಕೆರ‍್ಸ್ ಗೆಲುವು.

ಕಾಫಿ ಕ್ರಿಕೆರ‍್ಸ್ ಹಾಗೂ ಕೂರ್ಗ್ ಹಾಕ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟ್ ಮಾಡಿದ ಕೂರ್ಗ್ ಹಾಕ್ಸ್ ತಂಡ ೧೦ ವಿಕೆಟ್ ನಷ್ಟಕ್ಕೆ ೧೨೦ ರನ್‌ಗಳಿಸಿತು. ಕಾಫಿ ಕ್ರಿಕೆರ‍್ಸ್ ತಂಡ ೬ ವಿಕೆಟ್ ನಷ್ಟಕ್ಕೆ ೧೨೩ ರನ್ ಗಳಿಸಿ ಜಯ ಸಾಧಿಸಿತು. ಕಾಫಿ ಕ್ರಿಕೆರ‍್ಸ್ನ ಕುಕ್ಕನೂರು ಸಚಿನ್ ೨೧ ರನ್ ಬಾರಿಸಿ ೩ ವಿಕೆಟ್ ಪಡೆದು ಪ್ಲೇಯರ್ ಆಫ್ ದ ಮ್ಯಾಚ್ ಆಗಿ ಹೊರಹೊಮ್ಮಿದರು. ಎರಡನೇ ಪಂದ್ಯ ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕಾ÷್ವಡ್ -೨ ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ನಡುವೆ ನಡೆಯಬೇಕಿತ್ತಾದರೂ ಮಳೆಯ ಕಾರಣದಿಂದಾಗಿ ಎರಡೂ ತಂಡಗಳಿಗೂ ತಲಾ ಒಂದೊAದು ಅಂಕ ನೀಡಲಾಯಿತು.

ಟ್ರೋಫಿ ಅನಾವರಣ

ಕೊಡಗು ಗೌಡ ಯುವವೇದಿಕೆಯ ಜಿಪಿಎಲ್ ಸೀಸನ್ ೩ ಲೆದರ್ ಬಾಲ್ ಕ್ರಿಕೆಟ್‌ನ ಈ ಬಾರಿಯ ಟ್ರೋಫಿಯನ್ನು ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಇಂದು ಅನಾವರಣಗೊಳಿಸಿದರು.

ಈ ಸಂದರ್ಭ ಗೌಡ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಅರೆಭಾಷೆ ಅಕಾಡೆಮಿ ಸದಸ್ಯ ಕುಟ್ಟನ ಸಂದೀಪ್, ಯುವ ವೇದಿಕೆ ಗೌರವ ಸಲಹೆಗಾರ ಕಟ್ಟೆಮನೆ ಸೋನಾಜಿತ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಎಡಿಕೇರಿ ಪ್ರಸನ್ನ, ಪಿ.ಎಲ್. ಸುರೇಶ್ ಮತ್ತಿತರರು ಹಾಜರಿದ್ದರು.