ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಮಂಡೇಪAಡ ಗೋಲ್ ಕೀಪರ್ ೧೪ರ ಪ್ರಾಯದ ಡಾನ್ ಬೆಳ್ಯಪ್ಪ, ಮುಕ್ಕಾಟಿರ ಕಾವ್ಯ ದೇವಯ್ಯ, ಬೊಟ್ಟೋಳಂಡ ಸೂರಜ್ ಅಯ್ಯಪ್ಪ, ಕೂತಂಡ ಮೋನಿಶ್ ಬೆಳ್ಯಪ್ಪ, ಅಚ್ಚಪಂಡ ಪರ್ಲಿನ್ ಪೊನ್ನಮ್ಮ ಅವರುಗಳು ಪಡೆದುಕೊಂಡರು.

ಬೆಸ್ಟ್ ಫಾರ್ವರ್ಡ್ ಚೇಂದAಡ ಸುಬ್ಬಿ ಸುಬ್ಬಯ್ಯ, ಬೆಸ್ಟ್ ಹಾಫ್ ನೆಲ್ಲಮಕ್ಕಡ ಪ್ರತೀಕ್, ಬೆಸ್ಟ್ ಬ್ಯಾಕ್ ಮಂಡೇಪAಡ ಮುಖೇಶ್ ಮೊಣ್ಣಯ್ಯ, ಗೋಲು ಬಾರಿಸಿದ ಕಿರಿಯ ಆಟಗಾರ ಪ್ರಶಸ್ತಿ ೯ ವರ್ಷದ ಮಾಳೇಟಿರ ಯಶ್ ಕರುಂಬಯ್ಯ, ಮಹಿಳಾ ವಿಭಾಗದಲ್ಲಿ ಕಲಿಯಂಡ ತೇಜಲ್, ಬೆಸ್ಟ್ ಗೋಲ್ ಕೀಪರ್ ಕರವಂಡ ತಿಮ್ಮಯ್ಯ, ಇಬ್ಬರು ವೃದ್ಧರು, ಗೋಲಿ ರಹಿತವಾಗಿ ಆಟವಾಡಿದ ಪೋತಂಡ ಎನರ್ಜಿಟಿಕ್ ಟೀಂ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೇರ್ ಪ್ಲೇ ತಂಡ ಪ್ರಶಸ್ತಿ ಬೊಟ್ಟೋಳಂಡ, ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಉದಯೋನ್ಮುಖ ತಂಡ ಪ್ರಶಸ್ತಿಯನ್ನು ಕರವಂಡ, ಮಹಿಳಾ ಹಾಕಿ ಪಂದ್ಯಕ್ಕೆ ಮೊದಲು ನೋಂದಾಯಿಸಿಕೊAಡ ತಾತಂಡ, ಪುರುಷರ ಹಾಕಿಗೆ ಮೊದಲು ನೋಂದಾಯಿಸಿಕೊAಡ ಕೀರ್ತಿಗೆ ಉದ್ದಪಂಡ ತಂಡಗಳು ಪಾತ್ರವಾಯಿತು. ಟೀಂ ಕೂರ್ಗ್ ಯುಎಇ ನೀಡಿದ ಹಾಕಿಸ್ಟಿಕ್ ಅನ್ನು ಕೆಚ್ಚೆಟ್ಟಿರ ತೇಜಸ್ವಿ ಪಡೆದರು.

ಉದಯೋನ್ಮುಖ ಆಟಗಾರರಿಗೆ

ರೂ. ೫೦ ಸಾವಿರ

ಜಿಲ್ಲೆಯ ಮೊದಲ ಅಂತರರಾಷ್ಟಿçÃಯ ಹಾಕಿ ಮಹಿಳಾ ಆಟಗಾರ್ತಿ ಡಾ. ಅಮ್ಮಾಟಂಡ ಪುಷ್ಪಾ ಪೂವಯ್ಯ ಹಾಗೂ ಡಾ. ಪ್ರವೀಣ್ ಬೋಪಯ್ಯ ಅವರು ಪ್ರಾಯೋಜಿಸಿದ್ದ ಉದಯೋನ್ಮುಖ ಮಹಿಳಾ ಆಟಗಾರ್ತಿ ಪ್ರಶಸ್ತಿಯೊಂದಿಗೆ ತಲಾ ರೂ. ೫೦ ಸಾವಿರ ನಗದು ಬಹುಮಾನವನ್ನು ಕೆಚ್ಚೆಟ್ಟಿರ ಪಾರ್ವತಿ, ಆದೇಂಗಡ ತಶ್ವಿಕ ತಂಗಮ್ಮ, ಮಾಳೇಟಿರ ನೆಹಾಲಿ ನೀಲಮ್ಮ, ಕಂಬೀರAಡ ನೀಲಮ್ಮ ಅವರುಗಳು ತಮ್ಮದಾಗಿಸಿಕೊಂಡರು.

ಅಮೋಘ್-ಪೊನ್ನಮ್ಮ ಸರಣಿ ಶ್ರೇಷ್ಠರು

ಮಹಿಳಾ ಹಾಕಿ ವಿಭಾಗದಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಜೊತೆಗೆ ರೂ. ೬೫ ಸಾವಿರ ನಗದು ಬಹುಮಾನವನ್ನು ಕಂಬಿAರAಡ ಪೊನ್ನಮ್ಮ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯೊಂದಿಗೆ ಏಥಕ್ ಸ್ಕೂಟರ್ ಸೇರಿದಂತೆ ರೂ. ೩೦ ಸಾವಿರ ನಗದು ಬಹುಮಾನವನ್ನು ಚೇಂದAಡ ಅಮೋಘ್ ಪಡೆದುಕೊಂಡರು.