ಮಡಿಕೇರಿ, ಏ. ೨೭: ಮರಗೋಡು ಈವಿನಿಂಗ್ ಸ್ಟಾರ್ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬದಲ್ಲಿ ಸಣ್ಣಜನ ಹಾಗೂ ಕೆದಂಬಾಡಿ ಫ್ರೀ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದೆ.

ಇಂದು ನಡೆದ ಪಂದ್ಯದಲ್ಲಿ ನಂಗಾರು ೮ ವಿಕೆಟ್‌ಗೆ ೪೪ ರನ್ ಗಳಿಸಿತು. ಬೊಳ್ಳುಮಾನಿ ೮ ವಿಕೆm ಗೆ ೪೧ ರನ್ ಗಳಿಸಿ ಸೋಲನುಭವಿಸಿತು. ಜೈನೀರ ೩ ವಿಕೆಟ್‌ಗೆ ೫೬ ರನ್ ಗಳಿಸಿತು. ಬಡುವಂಡ್ರ ೪ ವಿಕೆಟ್‌ಗೆ ೫೭ ರನ್ ಗಳಿಸಿ ಗೆಲುವು ಸಾಧಿಸಿತು. ಬಾಳಾಡಿ ೨ ವಿಕೆಟ್ ಗೆ ೪೫ ರನ್ ಗಳಿಸಿತು. ಉಡುದೋಳಿರ ೪ ವಿಕೆಟ್‌ಗೆ ೪೬ ರನ್ ಗಳಿಸಿ ಗೆಲುವು ದಾಖಲಿಸಿತು.

ಸಣ್ಣಜನ ೪ ವಿಕೆಟ್‌ಗೆ ೫೯ ರನ್ ಗಳಿಸಿತು. ಬಿದ್ರುಪಣೆ ೭ ವಿಕೆಟ್‌ಗೆ ೩೯ ರನ್ ಗಳಿಸಿ ಸೋತಿತು. ಕುದುಕುಳಿ ೬ ವಿಕೆಟ್‌ಗೆ ೪೬ ರನ್ ಗಳಿಸಿತು. ಚಂಡಿರ ೩ ವಿಕೆಟ್‌ಗೆ ೪೫ ಗಳಿಸಿ ಸೋಲನ್ನು ಅನುಭವಿಸಿತು. ಕೆದಂಬಾಡಿ ೪ ವಿಕೆಟ್‌ಗೆ ೭೯ ರನ್ ಗಳಿಸಿದರೆ ನಂಗಾರು ೪ ವಿಕೆಟ್ ಗೆ ೭೫ ರನ್ ಗಳಿಸಿ ಸೋಲನುಭವಿಸಿತು. ಅಡ್ಕದಮನೆ (ಬಂದಡ್ಕ ) ೪ ವಿಕೆಟ್‌ಗೆ ೬೯ ರನ್ನು ಗಳಿಸಿದರೆ, ಬಡುವಂಡ್ರ ೪ ವಿಕೆಟ್‌ಗೆ ೭೦ ರನ್ ಬಾರಿಸಿ ಜಯಗಳಿಸಿತು.

ಉಡುದೋಳಿರ ೫ ವಿಕೆಟ್‌ಗೆ ೫೭ ರನ್ ಗಳಿಸಿದರೆ, ಸಣ್ಣಜನ ೧ ವಿಕೆಟ್‌ಗೆ ೬೧ ರನ್ ಗಳಿಸಿ ಜಯಗಳಿಸಿತು. ಕುದುಕುಳಿ ೪ ವಿಕೆಟ್‌ಗೆ ೬೪ ರನ್ ಗಳಿಸಿತು. ಪೊನ್ನಚ್ಚನ ೨ ವಿಕೆಟ್‌ಗೆ ೬೫ ರನ್ ಗಳಿಸಿ ಗೆಲುವು ಸಾಧಿಸಿತು. ಕೆದಂಬಾಡಿ ೪ ವಿಕೆಟ್‌ಗೆ ೬೩ ರನ್ ಗಳಿಸಿದರೆ, ಬಡುವಂಡ್ರ ೩ ವಿಕೆಟ್‌ಗೆ ೫೬ ರನ್ ಬಾರಿಸಿ ಸೋಲನುಭವಿಸಿತು. ಪೊನ್ನಚ್ಚನ ೭ ವಿಕೆಟ್‌ಗೆ ೩೯ ರನ್ ಗಳಿಸಿದರೆ, ಸಣ್ಣಜನ ೧ ವಿಕೆಟ್‌ಗೆ ೪೧ ರನ್ ಗಳಿಸಿ ಜಯ ಸಾಧಿಸಿತು.

ಗೌಡ ಕ್ರಿಕೆಟ್ : ಸಣ್ಣಜನ - ಕೆದಂಬಾಡಿ ಪ್ರೀ ಕ್ವಾರ್ಟರ್‌ಗೆ