ಐಗೂರು, ಏ. ೨೬: ಸೋಮವಾರಪೇಟೆ - ಮಡಿಕೇರಿ ಹೆದ್ದಾರಿ ರಸ್ತೆಯ ಐಗೂರಿನ ಹಳೆಯ ಕಬ್ಬಿಣ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಾಣಕ್ಕಾಗಿ ಕಳೆದ ಜನವರಿ ತಿಂಗಳಿನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು.
ನೂತನ ಸೇತುವೆಯ ಕೆಲಸ ಪ್ರಾರಂಭವಾಗುವಾಗ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಕಾಜೂರು ಜಂಕ್ಷನ್‌ನಿAದ ಅರಣ್ಯ ರಸ್ತೆಯ ಮುಖಾಂತರ ಮಡಿಕೇರಿ ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ನಿಗದಿಗೊಳಿಸಲಾಗಿತ್ತು. ಈಗ ಪರ್ಯಾಯ ಮಾರ್ಗದ ರಸ್ತೆಯನ್ನು ಅಗಲೀಕರಣಗೊಳಿಸಿ ಎಂ ಸ್ಯಾಂಡ್ ಮತ್ತು ಜಲ್ಲಿಯನ್ನು ಹಾಕುವ ಕಾಮಗಾರಿಯ ಕೆಲಸ ಭರದಿಂದ ಸಾಗುತ್ತಿದೆ.