ಮಡಿಕೇರಿ, ಏ. ೨೬ : ಕೊಡವ ಕುಟುಂಬಗಳ ನಡುವಿನ ಬೆಳ್ಳಿಹಬ್ಬ ಸಂಭ್ರಮದ ಕೌಟುಂಬಿಕ ಹಾಕಿ ಚಾಂಪಿಯನ್ಸ್ ಯಾರಾಗಲಿದ್ದಾರೆ ಎಂಬ ಕೌತುಕಕ್ಕೆ ತಾ. ೨೭ರ ಭಾನುವಾರ (ಇಂದು) ಉತ್ತರ ಸಿಗಲಿದೆ.
ಈ ಬಾರಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜರುಗುತ್ತಿರುವ ೨೫ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಕಪ್ ೨೦೨೫ರ ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಚೇಂದAಡ ತಂಡ ಹಾಗೂ ಈ ಹಿಂದೊಮ್ಮೆ ಮಾತ್ರ ಪ್ರಶಸ್ತಿ ಗಳಿಸಿರುವ ಮಂಡೇಪAಡ ಕುಟುಂಬ ಸೆಣಸಲಿವೆ.
ಶನಿವಾರ ನಡೆದ ರೋಮಾಂಚನಕಾರಿ ಸೆಮಿಫೈನಲ್ ಕದನದಲ್ಲಿ ಈ ಬಾರಿಯ ಪ್ರಶಸ್ತಿಯ ಸುತ್ತಿನಲ್ಲಿ ಹಾಟ್ ಫೇವರೇಟ್ ತಂಡಗಳಲ್ಲಿ ಒಂದಾಗಿದ್ದ ಕಳೆದ ಬಾರಿಯ ರನ್ನರ್ಸ್ ನೆಲ್ಲಮಕ್ಕಡ ಕುಟುಂಬದ ಎದುರು ರೋಚಕ ಜಯ ಸಾಧಿಸಿದ ಮಂಡೇಪAಡ ಫೈನಲ್‌ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಚೇಂದAಡ ತಂಡ ೨೦೨೩ರ ಅಪ್ಪಚೆಟ್ಟೋಳಂಡ ಕಪ್ ವಿಜೇತ ಕುಪ್ಪಂಡ (ಕೈಕೇರಿ) ತಂಡವನ್ನು ಸುಲಭವಾಗಿ ಮಣಿಸಿ ನಾಲ್ಕನೇ ಪ್ರಶಸ್ತಿಯತ್ತ ದಾಪುಗಾಲಿರಿಸಿದೆ.
ತಾ. ೨೭ರಂದು (ಇಂದು) ಮುದ್ದಂಡ ಕಪ್‌ಗಾಗಿ ೨೦೧೭ರ ಬಿದ್ದಾಟಂಡ ಕಪ್, ೨೦೧೮ರ ಕುಲ್ಲೇಟಿರ ಕಪ್ ಹಾಗೂ ೨೦೨೪ರ ಕುಂಡ್ಯೋಳAಡ ಕಪ್ ವಿಜೇತ ಚೇಂದAಡ ಹಾಗೂ ೨೦೦೭ರಲ್ಲಿನ ಮಂಡೇಟಿರ ಕಪ್ ವಿಜೇತ ಮಂಡೇಪAಡ ಕುಟುಂಬ ಸೆಣಸಲಿವೆ.
ಶನಿವಾರ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜರುಗಿದ ಪ್ರಥಮ ಸೆಮಿಫೈನಲ್ ರೋಮಾಂಚಕಾರಿಯಾಗಿ ನಡೆಯಿತು. ನೆಲ್ಲಮಕ್ಕಡ ಹಾಗೂ ಮಂಡೇಪAಡ ಕದನ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ನೆಲ್ಲಮಕ್ಕಡ ಆರಂಭಿಕ ಮುನ್ನಡೆಗಳಿಸಿತ್ತಾದರೂ ಮೂರನೇ ಕ್ವಾರ್ಟರ್‌ನಲ್ಲಿ ಮಂಡೇಪAಡ ಸಮಬಲ ಸಾಧಿಸುವು ದರೊಂದಿಗೆ ಪಂದ್ಯಕ್ಕೆ ತಿರುವು ದೊರೆತಿತ್ತು.
(ಮೊದಲ ಪುಟದಿಂದ) ನಂತರ ಇತ್ತಂಡಗಳು ಸಮಬಲದ ಹೋರಾಟ ನಡೆಸಿದರೂ ಯಾವುದೇ ಗೋಲು ದಾಖಲಾಗಲಿಲ್ಲ. ಈ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಅಳವಡಿಸಲಾಯಿತು. ಇದರಲ್ಲಿ ಮಂಡೇಪAಡ ವಿಜಯಪತಾಕೆ ಹಾರಿಸುವುದ ರೊಂದಿಗೆ ನೆಲ್ಲಮಕ್ಕಡ ಆಘಾತಕಾರಿ ಸೋಲು ಅನುಭವಿಸುವಂತಾಯಿತು. ನಿಗದಿತ ಅವಧಿಯಲ್ಲಿ ನೆಲ್ಲಮಕ್ಕಡ ಪರ ಪ್ರತೀಕ್ ಪೂವಣ್ಣ ಹಾಗೂ ಮಂಡೇಪAಡ ಪರ ಗೌತಮ್ ಗೋಲು ಬಾರಿಸಿದರು. ನೆಲ್ಲಮಕ್ಕಡ ಸಚಿನ್ ಪಂದ್ಯ ಪುರುಷೋತ್ತಮರಾದರು.
ಚೇಂದAಡ ಜಯ : ಮತ್ತೊಂದು ಪಂದ್ಯದಲ್ಲಿ ಚೇಂದAಡ ತಂಡ ಕುಪ್ಪಂಡ (ಕೈಕೇರಿ) ಎದುರು ಆರಂಭದಿAದಲೂ ಮೇಲುಗೈ ಸಾಧಿಸಿತು. ಈ ಪಂದ್ಯದಲ್ಲಿ ಚೇಂದAಡ ೩-೧ ಗೋಲಿನ ಅಂತರದಿAದ ಕುಪ್ಪಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಚೇಂದAಡ ಪರ ನಿತಿನ್ ತಿಮ್ಮಯ್ಯ (೧) ತಮ್ಮಯ್ಯ ಎರಡು ಗೋಲು ಬಾರಿಸಿದರು. ಕುಪ್ಪಂಡ ನಾಚಪ್ಪ ಏಕೈಕ ಗೋಲು ಗಳಿಸಿದರೆ, ಸೋಮಯ್ಯ ಪಂದ್ಯ ಪುರುಷರಾದರು.
ಸೆಮಿಫೈನಲ್ ಕದನವಾಗಿದ್ದ ಹಿನ್ನೆಲೆ ಅಧಿಕ ಸಂಖ್ಯೆಯಲ್ಲಿ ಹಾಕಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಬ್ಯಾಂಡ್ ವಾದನ, ಕೋಳಲು ವಾದನ ಸಂಭ್ರಮದೊAದಿಗೆ ಅಭಿಮಾನಿಗಳ ಸಂಭ್ರಮ ಕಂಡುಬAದಿತು.
ಪAದ್ಯದ ತೀರ್ಪುಗಾರರುಗಳಾಗಿ ಮೂಕಚಂಡ ನಾಚಪ್ಪ, ಕೊಂಡಿರ ಕೀರ್ತಿ, ಬೊಟ್ಟಂಗಡ ಕೌಶಿಕ್, ಬೊಳ್ಳಚಂಡ ನಾಣಯ್ಯ ಕಾರ್ಯನಿರ್ವಹಿಸಿದರು. ಅಪ್ಪಚೆಟ್ಟೋಳಂಡ ಅಯ್ಯಪ್ಪ ಹಾಗೂ ಕರವಂಡ ಅಪ್ಪಣ್ಣ ಮೂರನೇ ಅಂಪೈರ್ ಆಗಿದ್ದರು. ಚೆಪ್ಪುಡಿರ ಕಾರ್ಯಪ್ಪ, ಚೈಯ್ಯಂಡ ಭನಿತ್ ಬೋಜಣ್ಣ, ಮಾಳೇಟಿರ ಶ್ರೀನಿವಾಸ್, ಅಜ್ಜೇಟಿರ ವಿಕ್ರಂ, ಮೂಡೆರ ಕಾಳಯ್ಯ ವೀಕ್ಷಕ ವಿವರಣೆ ನೀಡಿದರು.