ಮಡಿಕೇರಿ, ಏ. ೨೬ : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ, ಉಪಾಧ್ಯಕ್ಷರಾಗಿ ಸುರೇಶ್ ಮಾಯಮುಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಎಲ್ಲಾ ೧೫ ನಿರ್ದೇಶಕರುಗಳು, ಕೆಡಿಸಿಸಿ ಬ್ಯಾಂಕಿನ ಪ್ರತಿನಿಧಿ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಅವರುಗಳ ಸಮ್ಮುಖದಲ್ಲಿ ಚುನಾವಣಾಧಿಕಾರಿ ಶೈಲಜಾ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭ ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಪ್ರಮುಖರಾದ ಎ.ಕೆ. ಮನುಮುತ್ತಪ್ಪ, ಮಹೇಶ್ ಜೈನಿ, ನೆಲ್ಲಿರ ಚಲನ್ ಕುಮಾರ್, ಉಮೇಶ್ ಸುಬ್ರಮಣಿ, ಬಿ.ಕೆ. ಅರುಣ್ ಕುಮಾರ್ ಮತ್ತಿತರರು, ಹಾಜರಿದ್ದರು.