ಮಡಿಕೇರಿ, ಏ. ೨೬: ಬಹುಮುಖ ಪ್ರತಿಭೆ ಪಾಲಿಬೆಟ್ಟದ ಟಿ.ಸಿ. ಗೀತಾ ನಾಯ್ಡು ಅವರಿಗೆ ಬೆಂಗಳೂರು ಪ್ರೆಸ್ಕ್ಲಬ್ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಇನ್ಸ್ಪೆöÊರಿಂಗ್ ವುಮೆನ್ - ೨೦೨೫’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
೨೦೨೩ ರಿಂದ ದಕ್ಷಿಣ ಕೊಡಗಿನ ಬಾಳೆಲೆಯ ಪ್ರತಿಭಾ ಎಜುಕೇಷನಲ್ ಇನ್ಸಿಟ್ಯೂಟಿನ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿರುವ ಗೀತಾ ನಾಯ್ಡು ಅವರು ಪೊನ್ನಂಪೇಟೆ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ, ವೀರಾಜಪೇಟೆ ತಾಲೂಕಿನ ವಿಕಾ ಗ್ರೀನ್ ಅಂಬಾಸಿಡರ್ ಆಗಿ, ಹಾಕಿ ಮತ್ತು ಕ್ರಿಕೆಟ್ ಪಂದ್ಯಗಳ ವರದಿಗಾರ್ತಿಯಾಗಿ, ಮೆಂಟಲ್ ಎಬಿಲಿಟಿ ತರಬೇತುದಾರರಾಗಿ, ನಿರೂಪಕಿಯಾಗಿ, ಧರ್ಮಸ್ಥಳ ಸಂಘದ ಮಹಿಳೆಯರ ಪ್ರೇರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ಆಗಿದ್ದಾಗಲೇ ೨೦೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.