ಮಡಿಕೇರಿ, ಏ. ೨೬: ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಕೊಡವ ಕೇರಿ ಮಹಾಸಭೆ ಇತ್ತೀಚೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಕೇರಿಯ ಅಧ್ಯಕ್ಷ ಮೇರಿಯಂಡ ಅಚ್ಚಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚೊಟ್ಟಂಡ ರೇಣ ಸೋಮಯ್ಯ ಪ್ರಾರ್ಥನೆ ಮಾಡಿದರು, ಬೊಪ್ಪಂಡ ತ್ರಿಶು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕೇರಿಯ ಉಪಾಧ್ಯಕ್ಷ ಅಂಜಪರವAಡ ಅನಿಲ್, ಮರಣನಿಧಿ ಕಾರ್ಯದರ್ಶಿ ಚೊಟ್ಟೇರ ರಮೇಶ, ವಿದ್ಯಾನಿಧಿ ಕಾಯದರ್ಶಿ ಬಾಳೆಕುಟ್ಟಿರ ಗಣಪತಿ, ನಿರ್ದೇಶಕರಾದ ಮೇಕತಂಡ ಚಂಗಪ್ಪ, ಮುಕ್ಕಾಟಿರ ರಾಯ್, ಬೊಳ್ಳೇಪಂಡ ಆಶಾ, ತಾತಂಡ ಮಿನ್ನ, ಚಿಲ್ಲವಂಡ ರೇಖಾ, ಪಾಂಡAಡ ಕಾವ್ಯ ಮತ್ತು ಬಿದ್ದಂಡ ರಾಧಿಕ ಉಪಸ್ಥಿತರಿದ್ದರು.

ಕಾರ್ಯದರ್ಶಿ ಚೊಟ್ಟೇರ ಬೆಳ್ಳಿಯಪ್ಪ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಚೊಟ್ಟೇರ ಬೆಳ್ಳಿಯಪ್ಪ ಲೆಕ್ಕಪತ್ರ ಮಂಡಿಸಿದರು. ಮುಂದಿನ ಸಾಲಿನ ಮರಣನಿಧಿ ಕಾರ್ಯದರ್ಶಿಯಾಗಿ ಚೌರಿರ ಪೂವಣ್ಣ ಮತ್ತು ನಿರ್ದೇಶಕರಾಗಿ ನಾಯಕಂಡ ಬೋಪಣ್ಣ ಅವರನ್ನು ಆಯ್ಕೆ ಮಾಡಲಾಯಿತು.