ಮಡಿಕೇರಿ, ಏ. ೨೫; ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವದ ೨೫ನೆಯ ವರ್ಷದ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲ ಇದೀಗ ಅಂತಿಮ ಹಂತದತ್ತ ತಲುಪಿದ್ದು, ನಾಲ್ಕು ತಂಡಗಳ ನಡುವಿನ ಹೋರಾಟಕ್ಕೆ ಕದನ ಕಣ ಸಜ್ಜುಗೊಂಡಿದೆ.
ಪ್ರಸಕ್ತ ವರ್ಷ ಮಡಿಕೇರಿಯಲ್ಲಿ ಜರುಗುತ್ತಿರುವ ಮುದ್ದಂಡ ಕಪ್ ಹಾಕಿ ಪಂದ್ಯಾಟದ ಸೆಮಿಫೈನಲ್ ಹಂತಕ್ಕೆ ಕಳೆದ ವರ್ಷದ ಫೈನಲ್ನಲ್ಲಿ ಎದುರಾಳಿಗಳಾಗಿದ್ದ ಬಲಿಷ್ಠ ತಂಡಗಳಾದ ನೆಲ್ಲಮಕ್ಕಡ, ಚೇಂದAಡ, ಹಿಂದಿನ ಚಾಂಪಿಯನ್ ತಂಡಗಳಾದ ಕುಪ್ಪಂಡ (ಕೈಕೇರಿ) ಹಾಗೂ ಮಂಡೇಪAಡ ತಂಡಗಳು ಪ್ರವೇಶಿಸಿವೆ.
ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ರೋಚಕ ಮುದ್ದಂಡ ಕಪ್ನ ಆಯೋಜಕರು ಈ ಬಾರಿ ಕ್ವಾರ್ಟರ್ ಫೈನಲ್ನಿಂದ ಪಂದ್ಯದಲ್ಲಿ ವೀಡಿಯೋ ರೆಫರಲ್ ವ್ಯವಸ್ಥೆಯನ್ನು ಮಾಡಿದ್ದಾರೆ. ಪಂದ್ಯದ ವೇಳೆ ಮೈದಾನದಲ್ಲಿನ ತೀರ್ಪುಗಾರರು ನೀಡುವ ತೀರ್ಪಿನ ಬಗ್ಗೆ ಅಸಮಾಧಾನ ಎದುರಾದಲ್ಲಿ ಒಂದು ತಂಡ ಇದನ್ನು ಎರಡು ರೆಫರಲ್ ಅವಕಾಶದ ಮೂಲಕ ಪ್ರಶ್ನಿಸುವ ವ್ಯವಸ್ಥೆ ಇದಾಗಿದೆ.
ಇದನ್ನು ಮೂರನೇ ಅಂಪೈರ್ ಆಗಿ ವೀಡಿಯೋ ಮೂಲಕ ಪಂದ್ಯ ವೀಕ್ಷಿಸುವ ತೀರ್ಪುಗಾರರು ಪರಾಮರ್ಶಿಸಿ ತೀರ್ಪು ಸರಿಪಡಿಸುವುದು ಈ ವ್ಯವಸ್ಥೆಯಾಗಿದೆ. ಇದು ಒಂದು ರೀತಿಯಲ್ಲಿ ಎಲ್ಲರಿಗೂ ಹೊಸತೊಂದು ಅನುಭವವಾಗಿತ್ತು. ನಾಲ್ಕೂ ಪಂದ್ಯಗಳಲ್ಲಿ ಈ ರೆಫರಲ್ನ ಅವಕಾಶವನ್ನು ಎಲ್ಲಾ ತಂಡದವರೂ ಪಡೆದರು. ಮೂರನೆ ಅಂಪೈರ್ ಅನ್ನು ಮೈದಾನದ ತೀರ್ಪುಗಾರರು ವಾಕಿಟಾಕಿ ಸಹಾಯದಿಂದ ಟಾಕ್ಬ್ಯಾಕ್ ಮೂಲಕ ಕೇಳುತ್ತಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಈ ನಾಲ್ಕು ತಂಡಗಳು ಜಯಸಾಧಿಸುವದರೊಂದಿಗೆ ಬೆಳ್ಳಿ ಹಬ್ಬ ಸಂಭ್ರಮದ ಪ್ರಶಸ್ತಿಯತ್ತ ದಾಪುಗಾಲಿರಿಸಿದೆ.
ಮುದ್ದಂಡ ಕಪ್ನಲ್ಲಿ ಈತನಕದ ಎಲ್ಲಾ ಪಂದ್ಯಾಟಗಳಿಗಿAತ ಇಂದು ನಡೆದ ಕ್ವಾರ್ಟರ್ ಫೈನಲ್ಗೆ ಒಂದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಪ್ರೇಕ್ಷಕರ ಹರ್ಷೋದ್ಘಾರ ಹಾಗೂ ಆಯಾ ತಂಡದ ಬೆಂಬಲಿಗರ ಉತ್ತೇಜನದ ನಡುವೆ ನಡೆದ ಪಂದ್ಯಗಳೂ ರೋಮಾಂಚಕಾರಿಯಾಗಿ ನಡೆದವು.
ಪ್ರಥಮ ಕ್ವಾರ್ಟರ್ ಫೈನಲ್ ನೆಲ್ಲಮಕ್ಕಡ ಹಾಗೂ ಕೂತಂಡ ತಂಡಗಳ ನಡುವೆ ಸಮಬಲದ ಹೋರಾಟದೊಂದಿಗೆ ನಡೆಯಿತು. ಈ ಪಂದ್ಯದಲ್ಲಿ ನೆಲ್ಲಮಕ್ಕಡ, ಕೂತಂಡ ತಂಡದ ಪ್ರತಿರೋಧವನ್ನು ಹಿಮ್ಮೆಟ್ಟಿಸಿ ತನ್ನ ಹಿಡಿತ ಸಾಧಿಸುವುದರೊಂದಿಗೆ ೩-೧ ಗೋಲಿನ ಜಯದೊಂದಿಗೆ ಮುಂದಿನ ಹಂತ ಪ್ರವೇಶಿಸಿತು.
ನೆಲ್ಲಮಕ್ಕಡ ಪರ ವೀಕ್ಷಿತ್ ಸೋಮಯ್ಯ ೧, ಸಚಿನ್ ೨ ಗೋಲು ಬಾರಿಸಿದರು. ಕೂತಂಡ ಪರ ಸಜನ್ ದೇವಯ್ಯ ಗೋಲುಗಳಿಸಿದರು. ಕೂತಂಡ ಬೋಪಣ್ಣ ಪಂದ್ಯ ಪುರುಷೋತ್ತಮ ಗೌರವ ಪಡೆದರು.
ದ್ವಿತೀಯ ಪಂದ್ಯದಲ್ಲಿ ಮಂಡೇಪAಡ ತಂಡ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಕರವಂಡ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ೬-೦ ಗೋಲಿನ ಅಂತರದ ಸುಲಭ ಜಯದೊಂದಿಗೆ ಮುನ್ನಡೆ ಪಡೆಯಿತು.
ಮಂಡೇಪAಡ ಪರ ದಿಲನ್ ದೇವಯ್ಯ ಮತ್ತು ಗೌತಮ್ ತಲಾ ಒಂದು ಹಾಗೂ ಚಂಗಪ್ಪ ಹಾಗೂ ಸಜನ್ ಅಚ್ಚಯ್ಯ ತಲಾ ೨ ಗೋಲು ದಾಖಲಿಸಿದರು. ಕರವಂಡ ಉಲನ್ ತಿಮ್ಮಯ್ಯ ಪಂದ್ಯ ಪುರುಷೋತ್ತಮರಾದರು.
ರೋಚಕ ಪಂದ್ಯ
ಮೂರನೇಯ ಕ್ವಾರ್ಟರ್ ಫೈನಲ್ ದಿನದ ಇತರ ಪಂದ್ಯಗಳಿAದ ತೀರಾ ರೋಮಾಂಚನಕಾರಿಯಾಗಿ ನಡೆಯಿತು. ಚೆಪ್ಪುಡಿರ ಹಾಗೂ ಚೇಂದAಡ ತಂಡಗಳ ಹೋರಾಟ ಕೊನೆಯ ಕ್ಷಣದತನಕವೂ ಕೌತುಕ ಸೃಷ್ಟಿಸಿತ್ತು. ಆರಂಭಿಕ ಮುನ್ನಡೆ ಚೆಪ್ಪುಡಿರ ಪಡೆಯಿತಾದರೂ ಚೇಂದAಡ
(ಮೊದಲ ಪುಟದಿಂದ) ನಂತರದಲ್ಲಿ ಸಮಬಲ ಸಾಧಿಸುವದರೊಂದಿಗೆ ನಿಗದಿತ ಅವಧಿಯಲ್ಲಿ ೧-೧ ಗೋಲಿನ ಸಮಬಲದ ಫಲಿತಾಂಶ ಬಂದಿತು. ನಂತರ ನಡೆದ ಶೂಟೌಟ್ನಲ್ಲಿ ಚೇಂದAಡ ಗೆಲುವಿನ ನಗೆ ಬೀರಿದರೆ, ಚೆಪ್ಪುಡಿರ ನಿರಾಶೆ ಅನುಭವಿಸಬೇಕಾಯಿತು.
ಚೆಪ್ಪುಡಿರ ಪರ ಗಗನ್ ತಿಮ್ಮಯ್ಯ ಹಾಗೂ ಚೇಂದAಡ ಪರ ನಿಕಿತ್ ತಿಮ್ಮಯ್ಯ ಫೀಲ್ಡ್ ಗೋಲು ಬಾರಿಸಿದರು. ಚೆಪ್ಪುಡಿರ ನರೇನ್ ಕಾರ್ಯಪ್ಪ ಪಂದ್ಯ ಪುರುಷರಾದರು.
ದಿನದ ಕೊನೆಯ ಪಂದ್ಯದಲ್ಲೂ ಸಮಬಲದ ಹೋರಾಟ ಕಂಡು ಬಂದಿತು. ಕುಪ್ಪಂಡ (ಕೈಕೇರಿ) ಹಾಗೂ ಪುದಿಯೊಕ್ಕಡ ನಡುವಿನ ಪಂದ್ಯವೂ ಕೊನೆಯ ತನಕ ಕುತೂಹಲ ಸೃಷ್ಟಿಸಿತ್ತು. ಈ ಪಂದ್ಯದಲ್ಲಿ ಕುಪ್ಪಂಡ ೨-೧ ಗೋಲಿನ ಜಯದೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿತು.
ಕುಪ್ಪಂಡ ಪರ ಸೋಮಯ್ಯ ೨ ಹಾಗೂ ಪುದಿಯೊಕ್ಕಡ ಪರ ಸುಮನ್ ಮುತ್ತಣ್ಣ ಗೋಲುಗಳಿಸಿದರು. ಪುದಿಯೊಕ್ಕಡ ಸುಮನ್ ಮುತ್ತಣ್ಣ ಪಂದ್ಯ ಪುರುಷೋತ್ತಮರಾದರು. ತಾ. ೨೬ ರಂದು (ಇಂದು) ಬೆಳಿಗ್ಗೆ ೧೦.೩೦ ರಿಂದ ಸೆಮಿಫೈನಲ್ ಪಂದ್ಯಾಟ ಜರುಗಲಿದೆ.
ಮೊದಲ ಪಂದ್ಯದಲ್ಲಿ ನೆಲ್ಲಮಕ್ಕಡ ಹಾಗೂ ಮಂಡೇಪAಡ ಎದುರಾಳಿಗಳಾಗಿವೆ. ಮತ್ತೊಂದು ಪಂದ್ಯದಲ್ಲಿ ಚೇಂದAಡ ಹಾಗೂ ಕುಪ್ಪಂಡ (ಕೈಕೇರಿ) ಫೈನಲ್ ಪ್ರವೇಶಿಸಲು ಸೆಣಸಲಿವೆ.