(ನಿನ್ನೆಯ ಸಂಚಿಕೆಯಿAದ)

ಒAದು ಕುಟುಂಬದಲ್ಲಿ ೩೦-೦೦ ಎಕರೆ ತರಿಭೂಮಿ ಇದ್ದರೆ ಆ ತರಿ ಭೂಮಿಗೆ ಹೊಂದಿಕೊAಡAತೆ ೧೧೦-೦೦ ಎಕರೆ ಬಾಣೆ ಜಮೀನು ಇದ್ದರೆ, ಈ ಜಮೀನಿನ ಅನೇಕ ಜನರು ಹಕ್ಕುದಾರರಿರುತ್ತಾರೆ. ಇಲ್ಲಿ ಜಮೀನಿನ ಹಕ್ಕಿಗೂ ಸ್ವಾಧೀನಕ್ಕೆ ವ್ಯತ್ಯಾಸವಿರುತ್ತದೆ. ಪಹಣಿ ಕಲಂ ೯ರಲ್ಲಿ ಹೆಸರು ದಾಖಲೆ ಇದ್ದ ಮಾತ್ರಕ್ಕೆ ಹಕ್ಕು ಪ್ರಾಪ್ತವಾಗುವುದಿಲ್ಲ. ಆ ಸರ್ವೆ ನಂಬರಿನ ಜಮೀನಿನ ಭಾಗದವರಿಗೆ ಎಷ್ಟು ಭೂಮಿ ಮತ್ತು ಬಾಣೆ ಬರುತ್ತದೆ ಎಂದು ಕುಟುಂಬದ (ಪಟ್ಟಿದಾರ) ಖಾತೆದಾರರು ಮತ್ತು ಕುಟುಂಬಸ್ಥರು ಸೇರಿ ಪ್ರತ್ಯೇಕ ಸರ್ವೆ ಮಾಡಿಸಿಕೊಂಡು ಸ್ವಾಧೀನದಂತೆ ಹಕ್ಕು ಪಡೆಯಲು ಪಾಲುಪಟ್ಟಿ ಪತ್ರ ಮಾಡಿಕೊಂಡು ಪ್ರತ್ಯೇಕ ಖಾತೆ ಮಾಡಿಸಿಕೊಳ್ಳಬಹುದಾಗಿರುತ್ತದೆ. ಇಲ್ಲಿ ಸ್ವಾಧೀನದ ಬಗ್ಗೆ ತಕರಾರುಗಳು ಬರುವುದು ಕಡಿಮೆ ಇರುತ್ತದೆ. ಏಕೆಂದರೆ ಆ ಜಮೀನನ್ನು ಅನೇಕ ವರ್ಷದಿಂದ ಆ ಕುಟುಂಬದ ಎ ಸದಸ್ಯ ಸಾಗುವಳಿ ಮಾಡಿಕೊಂಡು ಬರುತ್ತಿರುವುದು ಕುಟುಂಬಸ್ಥರಿಗೆ ತಿಳಿದಿರುತ್ತದೆ. ಇದು ಒಂದು ಗ್ರಾಮದ ಒಂದು ಸರ್ವೆ ನಂಬರಿನ ವಿಸ್ತೀರ್ಣದ ಸಮಸ್ಯೆ ಆಗಿರುವುದಿಲ್ಲ. ಎಲ್ಲಾ ಗ್ರಾಮಗಳಲ್ಲಿಯೂ ಇದೇ ರೀತಿ ಇರುತ್ತದೆ. ಸರಕಾರದಿಂದ ಮಂಜೂರಾತಿಯಾದ ಜಮೀನು ಮಂಜೂರಾತಿದಾರರ ಹೆಸರಿನಲ್ಲಿ ದಾಖಲೆಯಾಗುವುದರಿಂದ ಪಹಣಿ ದಾಖಲೆಯಲ್ಲಿ ಒಬ್ಬರ ಹೆಸರು ಮಾತ್ರ ದಾಖಲೆ ಇದ್ದು, ಪಹಣಿ, ಆಕಾರಬಂದು, ನಕ್ಷೆ, ಟಿಪ್ಪಣಿ ಪ್ರತಿ, ಎಲ್ಲವು ಕೂಡ ಒಬ್ಬರ ಹೆಸರಿನಲ್ಲಿ ದೊರಕುತ್ತದೆ. ಮಂಜೂರಾದ ಜಮೀನು ಹೊರತುಪಡಿಸಿ ಉಳಿದ ಯಾವುದೇ ಹಿಡುವಳಿ ಜಮೀನುಗಳು ಸ್ವಾಧೀನದಾರರಿಗೆ ಪ್ರತ್ಯೇಕ ಪಹಣಿ, ಆಕಾರಬಂದು, ನಕ್ಷೆ, ಟಿಪ್ಪಣಿ ಪ್ರತಿಗಳ ಲಭ್ಯತೆ ಇರುವುದಿಲ್ಲ.

ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ನಿಮಗೆ ಎಷ್ಟು ಜಮೀನು ಇದೆ ಎಂದರೆ ಹಿಂದಿನ ಪದ್ಧತಿಯಂತೆ ೧೦೦ ಬಟ್ಟಭೂಮಿ ಅಂದರೆ ೩-೦೦ ಎಕರೆ ಅದಕ್ಕೆ ಹೊಂದಿಕೊAಡAತೆ ಬಾಣೆ ಅಂದಾಜು ಇಷ್ಟು ಎಕರೆ ಕಾಫಿ ತೋಟ ಎಂದು ಅದನ್ನು ಕೂಡ ಸ್ಥಳೀಯವಾಗಿ ಜಮೀನುಗಳಿಗೆ ಹೆಸರು ಇರುತ್ತದೆ. ಆಕತ್ತೆವವರ್ಗ, ನೇರಲು ಮರದ ಗದ್ದೆ, ಗುಂಡಿತ್ತುವರ್ಗದ ಬಾಣೆ ಇತ್ಯಾದಿ. ಈ ಹೆಸರಿನ ಜಾಗದ ಬಗ್ಗೆ ಮಾತ್ರ ಹೇಳುತ್ತಾರೆ.

ಕಂಪೆನಿ ತೋಟದ ಮಾಲೀಕರುಗಳು ಅವರಿಗೆ ಸೇರಿದ ಜಮೀನುಗಳ ದಾಖಲೆಗಳನ್ನು ಅಳತೆಯಿಂದ ಗುರುತಿಸಿಕೊಂಡು ನಕ್ಷೆ ಇಟ್ಟುಕೊಂಡಿರುತ್ತಾರೆ. ಅವರ ಸ್ವಾಧೀನದಲ್ಲಿ ಸರಕಾರದ ಜಮೀನು ಸೇರಿದ್ದರು ಅಥವಾ ಖಾಸಗಿಯವರ ಜಮೀನು ಸೇರಿದ್ದರೂ ಕೂಡ ಎಲ್ಲಿಯೂ ಅದರ ಮಾಹಿತಿಯನ್ನು ಹೇಳುವುದಿಲ್ಲ. ಹೇಳಿದರೆ ವಿವಾದಕ್ಕೆ ಆಸ್ಪದವಾಗುತ್ತದೆ ಎಂದು. ಇಂತಹ ವ್ಯವಸ್ಥೆ ಅಡಿಯಲ್ಲಿ ಕೊಡಗಿನ ಭೂದಾಖಲೆಗಳು ಇರುವುದರಿಂದ ಪಕ್ಕ ರೆವಿನ್ಯೂ ದಾಖಲೆಗಳನ್ನು ಪಡೆಯವುದರಲ್ಲಿ ಕೊಡಗು ಜಿಲ್ಲೆ ಶಾಪಗ್ರಸ್ತ ಜಿಲ್ಲೆಯಾಗಿರುತ್ತದೆ.

ಸರಕಾರ ಅತ್ಯಾಧುನಿಕ ತಂತ್ರಜ್ಞಾನದ ಮುಖಾಂತರ ರೈತರಿಗೆ ಕುಳಿತಲ್ಲಿಗೆ ಅವರ ಸ್ವಾಧೀನದಲ್ಲಿ ಇರುವ ಜಮೀನಿನ ಮಾಲೀಕತ್ವದ ಎಲ್ಲಾ ದಾಖಲೆಗಳನ್ನು ನೀಡುವ ಬಗ್ಗೆ ಕ್ರಮಕೈಗೊಳ್ಳುತ್ತದೆ. ಆದರೆ ಕೊಡಗು ಜಿಲ್ಲೆಗೆ ಈ ಸೌಲಭ್ಯ ದೊರಕುತ್ತಿಲ್ಲ. ಇಲ್ಲಿಯ ಜನಪ್ರತಿನಿಧಿಗಳಾಗಲಿ ಇದುವರೆವಿಗೂ ಈ ಜಿಲ್ಲೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳಾಗಲಿ, ಭೂ ದಾಖಲೆಗಳಿಗೆ ಸಂಬAಧಿಸಿದ ವಿಷಯದ ಬಗ್ಗೆ (೨೦೦೧ನೇ ಸಾಲಿನಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸರಕಾರಕ್ಕೆ ಪತ್ರ ಬರೆದಿರುವುದನ್ನು ಹೊರತುಪಡಿಸಿ) ಸರ್ಕಾರದ ಗಮನಕ್ಕೆ ತಂದಿರುವುದಿಲ್ಲ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಭೂ ಸುಧಾರಣೆ, ಭೂ ದಾಖಲೆ ಮತ್ತು ಮುದ್ರಾಂಕ ಮತ್ತು ನೋಂದಣಿಯ ಕಾರ್ಯಾಲಯದ ಪತ್ರ ಸಂಖ್ಯೆ ಆರ್.ಡಿ ೨೫ ಎಲ್.ಜಿ.ಪಿ. ೯೮, ದಿನಾಂಕ ೨೨-೦೯-೧೯೯೮ರಲ್ಲೂ ಕೊಡಗು ಜಿಲ್ಲಾಧಿಕಾರಿಯವರುಗಳಿಗೆ ನೀಡಿರುವ ನಿರ್ದೇಶನದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟೀಷನ್ ನಂ. ೩೯೩೯/೧೯೮೮ ದಿನಾಂಕ ೨೨-೧೦-೧೯೯೩ರ ಆದೇಶದಲ್ಲಿ ಕೊಡಗು ಜಿಲ್ಲೆಯ ಬಾಣೆ ಜಮೀನಿನ ಪರಭಾರೆ ವಿಷಯದಲ್ಲಿ ನೀಡಿರುವ ತೀರ್ಪಿನ ವಿವರಣೆ ನೀಡುತ್ತಾ ಕೊಡಗು ಜಿಲ್ಲೆಯ ವಿಶೇಷ ಹಕ್ಕಿನ ನಿಬಂಧನೆಗಳ ಭೂ ಹಿಡುವಳಿದಾರರು ಹೊಂದಿರುವ ಭೂಹಿಡುವಳಿ ಬಗ್ಗೆ ಪ್ರಸ್ತಾಪಿಸುತ್ತಾ, ಆisಠಿuಣe ಚಿmoಟಿg ಣhe ಈಚಿmiಟಥಿ membeಡಿs oಜಿ Pಡಿiviಟegeಜ ಣeಟಿuಡಿeಜ ಟಚಿಟಿಜ hoಟಜeಡಿs is quiಣe ಛಿommoಟಿ iಟಿ ಏoಜಚಿgu ಆisಣಡಿiಛಿಣ. Iಣ is ಟಿoಣ ಠಿossibಟe ಣo seಣಣಟe ಣhe ಜisಠಿuಣe ತಿiಣhouಣ ಛಿoಟಿಜuಛಿಣiಟಿg ಊissಚಿ Suಡಿveಥಿ oಜಿ eಚಿಛಿh hoಟಜiಟಿg. ಖಿheಡಿeಜಿoಡಿe he hಚಿs suggesಣeಜ ಣhಚಿಣ Pಡಿiviಟegeಜ ಟಚಿಟಿಜs hoಟಜ ಎoiಟಿಣಟಥಿ bಥಿ seveಡಿಚಿಟ membeಡಿs oಜಿ ಣhe ಜಿಚಿmiಟಥಿ (Pಚಿಣಣeಜಚಿಡಿ / ಏhಚಿಣeಜಚಿಡಿ) ಚಿಟಿಜ ೬ಣh ಛಿoಟumಟಿ eಟಿಣಡಿusಣ mಚಿಥಿ be suಡಿveಥಿeಜ ಚಿಟಿಜ sub ಜiviಜeಜ ಚಿs ಠಿeಡಿ ಣhe shಚಿಡಿes eಚಿಛಿh oಟಿe is eಟಿಣiಣಟeಜ ಣo iಟಿ ಣhe ಜಿಚಿmiಟಥಿ ಚಿಟಿಜ seಠಿಚಿಡಿಚಿಣe ಞhಚಿಣಚಿ mಚಿಥಿ be oಠಿeಟಿeಜ ಣo eಚಿಛಿh hoಟಜeಡಿ.

ಈ ಮೇಲೆ ಹೇಳಿರುವ ನಿರ್ದೇಶನದಲ್ಲಿಯು ಕೂಡ ಕೊಡಗಿನ ರೈತರ ಭೂ ಹಿಡುವಳಿಯು ಕ್ರಮಬದ್ಧವಾಗಿ ಇರಬೇಕಾದರೆ (ಹಿಸ್ಸಾ ಸರ್ವೆ) ಮರು ಭೂಮಾಪನ ಸರ್ವೆ ಮಾಡಿದಾಗ ಮಾತ್ರ ರೈತರ ಭೂ ದಾಖಲೆಗಳನ್ನು ಪ್ರತ್ಯೇಕವಾಗಿ ಮಾಡಿಕೊಡಬಹುದು ಎಂದು ತಿಳಿಸಿರುತ್ತಾರೆ.

ಆದುದರಿಂದ ಕರ್ನಾಟಕ ಸರ್ಕಾರ, ಕೊಡಗು ಜಿಲ್ಲೆಯನ್ನು ಉಳಿದ ಜಿಲ್ಲೆಗಳಂತೆ ಪರಿಗಣಿಸಿ ಆದಷ್ಟು ಬೇಗನೆ ಆಧುನಿಕ ತಂತ್ರಜ್ಞಾನದೊAದಿಗೆ ನಿವೃತ್ತ ಮೋಜಣಿದಾರರ ಸಹಕಾರ ಪಡೆದು ಮರು ಭೂಮಾಪನಾ ಕೆಲಸವನ್ನು ಕರ್ನಾಟಕ ಭೂ ಕಂದಾಯ ಕಾಯಿದೆ ೧೯೬೪ರ ಕಲಂ ೧೦೬ ರಿಂದ ೧೨೭ನೇ ೩ನೇ ಉಪ ಪ್ರಕರಣದ ಮೇರೆ ಕ್ರಮ ಜರುಗಿಸಿ ಸರ್ಕಾರಿ ಅಫೀಷಿಯಲ್ ಸಿಯಲ್ ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿ ಕೊಡಗಿನ ರೈತರಿಗೆ ಅವರು ಹೊಂದಿರುವ ಹಿಡುವಳಿ ಜಮೀನುಗಳಿಗೆ ಪಹಣಿ ಪ್ರತಿ, ನಕ್ಷೆ, ಆಕಾರಬಂಧು, ಟಿಪ್ಪಣಿ ಪ್ರತಿಗಳೂ ದೊರಕುವಂತೆ ಮಾನ್ಯ ಕಂದಾಯ ಸಚಿವರು ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ.

(ಮುಗಿಯಿತು)

- ಯನ್.ಎಸ್. ಜಯರಾಮ್, ನಿವೃತ್ತ ಉಪತಹಶೀಲ್ದಾರರು

ನೀರುಗಂದ-ಕೊಡ್ಲಿಪೇಟೆ.

ಮೊ: ೯೩೫೩೩೧೯೩೪೯