ಸಿದ್ದಾಪುರ, ಏ. ೨೪: ಬೈಕ್ ನಿಯಂತ್ರಣ ತಪ್ಪಿ ವ್ಯಕ್ತಿ ಓರ್ವ ಆನೆ ಕಂದಕಕ್ಕೆ ಬೈಕಿನೊಂದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ.
ಚೆನ್ನಯ್ಯನಕೋಟೆ ಗ್ರಾಮದ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿ ನಿವಾಸಿ ಜೇನುಕುರುಬರ ರಘು ಎಂಬಾತ ತನ್ನ ಬೈಕಿನಲ್ಲಿ ಸೋಮವಾರದಂದು ಬೈಕ್ ದುರಸ್ತಿಪಡಿಸಿಕೊಂಡು ಮನೆಗೆ ಬರುತ್ತಿರುವಾಗ ನಿಯಂತ್ರಣ ತಪ್ಪಿ ಬೈಕ್‌ನೊಂದಿಗೆ ಚೆನ್ನಂಗಿ ಗ್ರಾಮದಲ್ಲಿ ಆನೆಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.
ಈತ ಎರಡು ದಿನಗಳ ಕಾಲ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಆ ಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಿಕೊಂಡು ಹೋಗುವ ಸಂದರ್ಭ ರಘು ತಮ್ಮ ಬೈಕಿನೊಂದಿಗೆ ಕಂದಕದ ಒಳಗೆ ಬಿದ್ದಿರುವುದು ಕಂಡುಬAದಿದೆ.
ಕAದಕಕ್ಕೆ ಬಿದ್ದು ವ್ಯಕ್ತಿ ಸಾವು
(ಮೊದಲ ಪುಟದಿಂದ) ಎರಡು ದಿನಗಳ ಬಳಿಕ ಇದೀಗ ಪತ್ತೆಯಾಗಿದ್ದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಘಟನೆಯ ಸಂಬAಧsÀ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೈಕ್ ಸವಾರ ರಘು ಅಂದಾಜು ೧೦ ಅಡಿ ಕಂದಕಕ್ಕೆ ಬೈಕಿನೊಂದಿಗೆ ಉರುಳಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ನಂತರ ಬೈಕ್ ಹಾಗೂ ಮೃತಪಟ್ಟ ರಘುವಿನ ಮೃತದೇಹವನ್ನು ಕಂದಕದಿAದ ಹೊರತೆಗೆಯಲಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಮೃತ ರಘು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.