ಮಡಿಕೇರಿ, ಏ. ೨೩ : ಮುದ್ದಂಡ ಕಪ್ ಹಾಕಿ ಉತ್ಸವದೊಂದಿಗೆ ಈ ಬಾರಿ ಮತ್ತೊಂದು ವಿಶೇಷತೆಯಾಗಿ ಜರುಗುತ್ತಿರುವ ಕೊಡವ ಕೌಟುಂಬಿಕ ೫ಎ ಸೈಡ್ ಮಹಿಳಾ ಹಾಕಿ ಪಂದ್ಯಾಟ ಜನಮನ ರಂಜಿಸುವುದರೊAದಿಗೆ ರೋಚಕ ಹೋರಾಟವನ್ನು ಕಾಣುತ್ತಿದೆ. ೫೮ ಕುಟುಂಬಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿಯಿAದ ೪೨ ಕುಟುಂಬಗಳು ನಿರ್ಗಮಿಸಿದ್ದು ಇದೀಗ ೮ ತಂಡಗಳು ಮಾತ್ರ ಬಾಕಿ ಉಳಿದಿವೆ. ತಾ. ೨೪ರಂದು (ಇಂದು) ಕ್ವಾರ್ಟರ್ ಫೈನಲ್ ಹಾಗೂ ಅಪರಾಹ್ನ ಸೆಮಿಫೈನಲ್ ಪಂದ್ಯಾಟ ನಿಗದಿಯಾಗಿದೆ. ಬೆಳಿಗ್ಗೆ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ವಿಜೇತರಾಗುವ ಕುಟುಂಬ ಅದೇ ದಿನ ಅಪರಾಹ್ನ ಸೆಮಿಫೈನಲ್ಲೂ ಆಡಬೇಕಿದೆ.

ತಾ. ೨೪ರಂದೇ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವ ಎರಡು ತಂಡ ಯಾವುದೆಂಬದು ನಿರ್ಣಯವಾಗಲಿದ್ದು ತಾ. ೨೬ರಂದು (ಶನಿವಾರ) ಜರುಗುವ ಫೈನಲ್‌ನಲ್ಲಿ ಸೆಣಸಬೇಕಿದೆ. ಮಹಿಳಾ ಪಂದ್ಯಾಟ ವಿಜೇತ ತಂಡ ರೂ. ೨ ಲಕ್ಷ ನಗದು - ಟ್ರೋಫಿ ಹಾಗೂ ರನ್ನರ್ಸ್ ತಂಡ ರೂ. ೧ ಲಕ್ಷ ನಗದು ಟ್ರೋಫಿ ಪಡೆÀದುಕೊಳ್ಳಲಿದೆ. ಬುಧವಾರದ ಪಂದ್ಯಾಟದ ವಿವರ ಇಂತಿದೆ.

ತೀತಿರ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಚೆಯ್ಯಂಡ ತಂಡ ಗೆಲುವು ಸಾಧಿಸಿತು. ಚೆಯ್ಯಂಡ ಪರ ಭಾಗ್ಯಶ್ರೀ ೨ ಗೋಲು ದಾಖಲಿಸಿದರು. ತೀತಿರ ಸಿಂಚನ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೇನಂಡ ಮತ್ತು ಕಂಬೀರAಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕಂಬೀರAಡ ಜಯ ಸಾಧಿಸಿತು. ಕಂಬೀರAಡ ಪರ ಪೊನ್ನಮ್ಮ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಮಿಲನ ೨ ಗೋಲು ಬಾರಿಸಿದರು. ಚೇನಂಡ ರಕ್ಷ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಆದೇಂಗಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ತೆಕ್ಕಡ ಗೆಲುವು ಸಾಧಿಸಿತು. ಆದೇಂಗಡ ತಶ್ವಿಕ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಅಚ್ಚಪಂಡ ಮತ್ತು ಕುಟ್ಟಂಡ (ಮಾದಾಪುರ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಟ್ಟಂಡ ಗೆಲುವು ಸಾಧಿಸಿತು. ಅಚ್ಚಪಂಡ ಪರ್ಲಿನ್ ಪೊನ್ನಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೌರೀರ (ಹೊದವಾಡ) ಮತ್ತು ಮೇವಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಚೌರೀರ ಜಯ ಸಾಧಿಸಿತು. ಚೌರೀರ ಪರ ಬೃಂದಾ ದಮಯಂತಿ ೧ ಗೋಲು ದಾಖಲಿಸಿದರು. ಮೇವಡ ಯಾನಿ ಕಾವೇರಮ್ಮ ಹಾಗೂ ತಿಸ್ಯ ತಂಗಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೇಂದಿರ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ಗೆಲುವು ದಾಖಲಿಸಿತು. ಕುಪ್ಪಂಡ ಪರ ನಕ್ಷ ೧ ಗೋಲು ದಾಖಲಿಸಿದರು. ಚೇಂದಿರ ದೇಚಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಪಂಡ ಮತ್ತು ನಾಟೋಳಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿಸಿತು. ನಾಪಂಡ ಪರ ಸೌಮ್ಯ ೨ ಗೋಲು ಬಾರಿಸಿದರು. ನಾಟೋಳಂಡ ಬಿಂದು ಸಚಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೇಚೆಟ್ಟಿರ ಮತ್ತು ಚೋಯಮಾಡಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಗೆಲುವು ದಾಖಲಿಸಿತು. ಕೇಚೆಟ್ಟಿರ ಪರ ಲಕ್ಷö್ಯ ೨, ತೇಜಸ್ವಿ ಹಾಗೂ ಪಾರ್ವತಿ ತಲಾ ೧ ಗೋಲು ದಾಖಲಿಸಿದರು. ಚೋಯಮಾಡಂಡ ಅಮಿತಾ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೆಪ್ಪುಡಿರ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮಾಳೇಟಿರ ಗೆಲುವು ದಾಖಲಿಸಿತು. ಮಾಳೇಟಿರ ಪರ ಮೋನಿಷ ೧ ಗೋಲು ದಾಖಲಿಸಿದರು. ಚೆಪ್ಪುಡಿರ ಮನಿಶಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಪಾಂಡಿರ (ಹೆಬ್ಬೆಟ್ಟಿಗೇರಿ) ಮತ್ತು ಕಾಂಡAಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಂಡAಡ ಗೆಲುವು ದಾಖಲಿಸಿತು. ಕಾಂಡAಡ ಪರ ನೇಹಾ ಅಪ್ಪಣ್ಣ ೧ ಗೋಲು ದಾಖಲಿಸಿದರು. ಪಾಂಡಿರ ರಿಧಿ ಪೂವಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬಾಚಿನಾಡಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಜಯ ಸಾಧಿಸಿತು. ಬಾಚಿನಾಡಂಡ ವನ್ಯ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಶಿವಚಾಳಿಯಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಶೂಟ್‌ಔಟ್‌ನಲ್ಲಿ ೧-೦ ಗೋಲಿನ ಅಂತರದಲ್ಲಿ ಕಲಿಯಂಡ ಗೆಲುವು ದಾಖಲಿಸಿತು. ಶಿವಚಾಳಿಯಂಡ ದೇಚಕ್ಕ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೆಯ್ಯಂಡ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಚೆಯ್ಯಂಡ ಜಯ ಸಾಧಿಸಿತು. ಚೆಯ್ಯಂಡ ಪರ ಭಾಗ್ಯಶ್ರೀ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಸಣ್ಣುವಂಡ ಪರ ಇಶಿತಾ ಹಾಗೂ ಕೃತಿಕಾ ತಲಾ ೧ ಗೋಲು ಬಾರಿಸಿದರು. ಸಣ್ಣುವಂಡ ಕೃತಿಕಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕಂಬೀರAಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಕಂಬೀರAಡ ಜಯ ಸಾಧಿಸಿತು. ಕಂಬೀರAಡ ಪರ ಪೊನ್ನಮ್ಮ ಮಿಲನ ತಲಾ ೨, ದಿವ್ಯ ಹಾಗೂ ಹನ ತಲಾ ೧ ಗೋಲು ದಾಖಲಿಸಿದರು. ತೆಕ್ಕಡ ಪ್ರಣೀತ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಪ್ಪಂಡ(ಕೈಕೇರಿ) ಮತ್ತು ಚೌರೀರ (ಹೊದವಾಡ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಶೂಟ್‌ಔಟ್‌ನಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ಚೌರೀರ ಧನ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಪಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಸಡನ್ ಡೆತ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕೇಚೆಟ್ಟಿರ ಪರ ತೇಜಶ್ವಿ ದೇವಯ್ಯ ಹಾಗೂ ಲಕ್ಷö್ಯ ಪೊನ್ನಕ್ಕ ತಲಾ ೧ ಗೋಲು ದಾಖಲಿಸಿದರು. ನಾಪಂಡ ಪರ ಸೌಮ್ಯ ಎರಡು ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕಾಂಡAಡ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಂಡAಡ ತಂಡ ಜಯ ಸಾಧಿಸಿತು. ಕಾಂಡAಡ ಪರ ರೀನಾ ದೇವಯ್ಯ ೧ ಗೋಲು ದಾಖಲಿಸಿದರು. ಮಾಳೇಟಿರ ನೆಹಾಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.