ವೀರಾಜಪೇಟೆ, ಏ. ೨೩: ಕನ್ನಡದ ರಾಷ್ಟçಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅತ್ಯುತ್ತಮ ಬರಹಗಾರರಾಗಿ ಸಾಹಿತ್ಯದ ಬೇರೆಯೇ ಆಯಾಮವನ್ನು ಹಿಡಿದು ಓದುಗರಿಗೆ ಆಪ್ತವಾಗುವ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದರು ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಧ್ಯಾಪಕ ಕಿಗ್ಗಾಲು ಹರೀಶ್ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಶ್ರೀ ಮಠದ ಶ್ರೀಲಿಂಗರಾಜೇAದ್ರ ಭವನದಲ್ಲಿ ಹೊಂಬೆಳಕು ಕಿರಣ ೨೩೦ ಮಾಸಿಕ ತತ್ವಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಪೂಚಂತೇ ಕೃತಿಗಳು ಹಾಗೂ ಜೀವನ ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಛಾಯಾಗ್ರಹಣ, ಪ್ರವಾಸ ಚರಣ, ಕಂಪ್ಯೂಟರ್, ವಿಜ್ಞಾನ, ಸ್ಕೂಟರ್ ರಿಪೇರಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಆಸಕ್ತಿ ಇತ್ತು. ಅವರು ವಿಶ್ವದ ಎಲ್ಲಾ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮತ್ತು ಮಾಧ್ಯಮ ಅವರಿಗಿತ್ತು. ಜೀವನ ಪ್ರೇಮಿಯಾಗಿದ್ದರು. ತಮ್ಮ ವಿದ್ಯಾಭ್ಯಾಸದ ನಂತರ ಅಂತಿಮ ಕ್ಷಣದವರೆಗೂ ಗ್ರಾಮೀಣ ಪ್ರದೇಶದಲ್ಲಿ ಪರಿಸರದ ನಡುವೆಯೇ ಬದುಕಿದರು. ಎಂದು ತಿಳಿಸಿದ ಕಿಗ್ಗಾಲು ಹರೀಶ್ ಅವರು ಪೂಚಂತೆಯರ ವಿವಿಧ ಕೃತಿಗಳ ಸಾಲುಗಳನ್ನು ಓದಿ ತೇಜಸ್ವಿ ಅವರ ಬರಹವನ್ನು ಇಂದಿನ ಲೇಖಕರಿಗೆ, ಓದುವವರಿಗೂ ಮಾರ್ಗದರ್ಶಿ ಎಂದರು.

ಭಾರತೀಯ ಸ್ಟೇಟ್ ಬ್ಯಾಂಕ್ ಉದ್ಯೋಗಿ ಕೆ.ಎನ್. ಉಷಾ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಹೊಂಬೆಳಕು ಕಾರ್ಯಕ್ರಮದಿಂದ ಮನುಷ್ಯನ ಮನಸ್ಸು ಪರಿವರ್ತನೆ ಆಗಲಿದೆ. ಪ್ರತಿಯೊಬ್ಬ ಮಕ್ಕಳು ವಿದ್ಯಾವಂತರಾಗಬೇಕೆAದು ಹೇಳಿದರು.

ಅರಮೇರಿ ಕಳಂಚೇರಿ ಶ್ರಿಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳು ಉತ್ತಮ ಸಾಹಿತ್ಯದ ಕಡೆಗೆ ಗಮನ ಹರಿಸಬೇಕು. ಕೃತಿಗಳು ಬರಹ ಗೌರವವನ್ನು ತರುತ್ತದೆ. ಶಿಕ್ಷಣದಿಂದ ಜ್ಞಾನ ಉತ್ತಮ ಬದುಕು ಜೀವನ, ಎಲ್ಲೆ ಇರಲಿ. ಕೆಲಸ ಯಾವುದೇ ಆಗಲಿ ಕರ್ತವ್ಯ ಉತ್ತಮ ಗುಣ ನಡತೆ ಮಾನವನಿಗೆ ಮುಖ್ಯವಾಗಿರುತ್ತದೆ ಎಂದರು. ವೀರಾಜಪೇಟೆ ವೈದ್ಯರಾದ ಡಾ.ಎಸ್.ವಿ. ನರಸಿಂಹನ್ ಕಾರ್ಯಕ್ರಮ ನಿರ್ವಹಿಸಿದರು.