ಮಡಿಕೇರಿ, ಏ. ೨೩: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕೊಡಗು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ಕನ್ನಡ ಚುಟುಕು ರಚನಾ ಸ್ಪರ್ಧೆ-೨೦೨೫ ಆಯೋಜಿಸಲಾಗಿದೆ. ಚುಟುಕುಗಳಿಗೆ ವಿಷಯ ನಿರ್ಬಂಧ ಇಲ್ಲ. ಒಬ್ಬರು ೪ ಸಾಲಿನ ಉತ್ತಮ ಎನಿಸುವ ಐದು ಚುಟುಕುಗಳನ್ನು ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ಕೊಡಗು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು ಮೇ ೧೦ ರೊಳಗೆ ೯೪೪೯೫೦೫೦೯೨ ಸಂಖ್ಯೆಗೆ ವಾಟ್ಸಾö್ಯಪ್ ಮೂಲಕ ಚುಟುಕುಗಳನ್ನು ಕಳುಹಿಸಬಹುದು. ಚುಟುಕುಗಳ ಜೊತೆಗೆ ಸ್ಪಷ್ಟ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ರುಬೀನಾ ಎಂ.ಎ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.